ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ರಾಜ್ಯಮಟ್ಟದ ವೇಟ್ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎರಡು ವಿಭಾಗದಲ್ಲಿ ಸಮಗ್ರ ಚಾಂಪಿಯ
ನ್ಸ್ ಪಟ್ಟ ಗಳಿಸಿದರು. ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮದುಲಿಂಗ ಎಂ (60 ಕೆ.ಜಿ. ವಿಭಾಗ)- ಚಿನ್ನ, ವಸಂತ್ ಕುಮಾರ್ ಸಿ.ಜಿ. (79 ಕೆ.ಜಿ. ವಿಭಾಗ)- ಚಿನ್ನ, ಸಾಯಿ ಹಿತೇಶ್ (94 ಕೆ.ಜಿ. ವಿಭಾಗ)- ಚಿನ್ನ, ಹರ್ಷ ಸಿ.ಆರ್ (110+ ಕೆ.ಜಿ. ವಿಭಾಗ)-ಚಿನ್ನ ಹಾಗೂ ಹರ್ಷಿತಾ (69 ಕೆ.ಜಿ. ವಿಭಾಗ) ಕಂಚಿನ ಪದಕದೊಂದಿಗೆ ಒಟ್ಟು 4 ಚಿನ್ನ ಹಾಗೂ 1 ಕಂಚಿನ ಪದಕ ಗಳಿಸಿದರು. ವಿಟಿಯು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಆಳ್ವಾಸ್ನ ನೈದಿಲ್ ಪೂಜಾರಿ (70 ಕೆ.ಜಿ. ವಿಭಾಗ) ಚಿನ್ನದ ಪದಕದೊಂದಿಗೆ ಮಿಸ್ಟರ್ ವಿಟಿಯು ‘ಮೋಸ್ಟ್ ಮಸ್ಕುಲರ್ ಮ್ಯಾನ್’ ಪಟ್ಟ ಪಡೆದರು. ಸೋಹಮ್ ಕುಡಚಿ (85 ಕೆ.ಜಿ. ವಿಭಾಗ) ಚಿನ್ನದ ಪದಕ ಪಡೆದರೆ, ಜಗದೀಶ್ ಗೌಡ (85 ಕೆಜಿ ವಿಭಾಗ)- ಬೆಳ್ಳಿಯ ಪದಕ, ವಸಂತ್ ಕುಮಾರ್ ಸಿ.ಜೆ. (80 ಕೆ.ಜಿ. ವಿಭಾಗ) ಬೆಳ್ಳಿಯ ಪದಕ ಹಾಗೂ ಶಶಾಂಕ್ (60 ಕೆ.ಜಿ. ವಿಭಾಗ) ಕಂಚಿನ ಪದಕ ಪಡೆದುಕೊಂಡರು.

ಆಳ್ವಾಸ್ ತಂಡವು ಎರಡು ವಿಭಾಗದಲ್ಲಿ ಒಟ್ಟು 6 ಚಿನ್ನ, 2 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 10 ಪದಕಗಳನ್ನು ಗಳಿಸಿ ಅತ್ಯುನ್ನತ ಸಾಧನೆ ಮೆರೆದಿದೆ. ಈ ಸ್ಪರ್ಧೆಯಲ್ಲಿ ವಿಟಿಯುಗೆ ಒಳಪಟ್ಟ ಒಟ್ಟು 94 ಕಾಲೇಜುಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.





































































































