ಜಿಲ್ಲಾಮಟ್ಟದ ಜಂಪ್ ಹಗ್ಗ ಪಂದ್ಯಾವಳಿಯು ಬಾರಕೂರಿನ ರಾಷ್ಟ್ರೀಯ ಪಿಯು ಕಾಲೇಜಿನಲ್ಲಿ ನಡೆಯಿತು.
ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ತಮ ಫಲಿತಾಂಶಗಳೊಂದಿಗೆ
ಜಯಗಳಿಸಿದ್ದಾರೆ.
ಹುಡುಗಿಯರ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಪ್ರಥಮ ಪಿ ಸಿ ಎಂ ಬಿ ವಿಭಾಗದ ವೇದ ಎಂ. ಪಚ್ಚೆನ್ನವರ್ 30
ಸೆಕೆಂಡುಗಳ ವೇಗದ ಜಂಪ್ ರೋಪಿಂಗ್ ಸ್ಪರ್ಧೆಯಲ್ಲಿ ಕಂಚು, 30 ಸೆಕೆಂಡುಗಳ ಡಬಲ್ ಅಂಡರ್ ನಲ್ಲಿ ಪ್ರಥಮ ಪಿ ಸಿ ಎಂ
ಬಿ ವಿಭಾಗದ ಶ್ರೇಷ್ಠ ಎಸ್. ಗೋಲ್ಡ್ ಮೆಡಲ್, ಉಚಿತ ಶೈಲಿಯಲ್ಲಿ ಪ್ರಥಮ ಪಿ ಸಿ ಎಂ ಬಿ ವಿಭಾಗದ ಅನುಷ್ಕ
ಮಹಾಂತೇಶ ಮುರ್ಗೋಡ್ ಚಿನ್ನದ ಪದಕ, 3 ನಿಮಿಷಗಳ ಸಹಿಷ್ಣುತೆಯಲ್ಲಿ ಪ್ರಥಮ ಪಿ ಸಿ ಎಮ್ ಸಿ ವಿಭಾಗದ ಗುಂಡಲ
ಶ್ರೀಗವಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಹುಡುಗರ ವಿಭಾಗದಲ್ಲಿ 30 ಸೆಕೆಂಡುಗಳ ವೇಗದ ಜಂಪ್ ರೋಪಿಂಗ್ ನಲ್ಲಿ ದ್ವಿತೀಯ ಪಿಸಿಎಂಬಿ ವಿಭಾಗದ ಅಭಿಷೇಕ್
ಚಿನ್ನದ ಪದಕ, 3 ನಿಮಿಷಗಳ ಸಹಿಷ್ಣುತೆ ವಿಭಾಗದಲ್ಲಿ ದ್ವಿತೀಯ ಪಿ ಸಿ ಎಂ ಸಿ ವಿಭಾಗದ ಪೂಜಿತ್ ಕುಮಾರ್ ಚಿನ್ನದ
ಪದಕಗಳೊಂದಿಗೆ ಜಯಗಳಿಸಿದ್ದು, ಸ್ವರ್ಣ ವಿಜೇತರು ರಾಜ್ಯಮಟ್ಟದ ಜಂಪ್ ರೋಪಿಂಗ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವರ್ಗದವರು ಶ್ಲಾಘಿಸಿ,
ಶುಭಹಾರೈಸಿದ್ದಾರೆ.






































































































