ಬಂಟರ ಸಂಘ ಸಾಲೆತ್ತೂರು ವಲಯ ಇದರ ವತಿಯಿಂದ ಆಗಸ್ಟ್ 10 ರಂದು ಜರಗಿದ “ಬಂಟೆರ್ನ ಆಟಿದ ಅಜನೆ” ಕಾರ್ಯಕ್ರಮದಲ್ಲಿ ಬಂಟರ ಸಂಘ ಸಾಲೆತ್ತೂರು ವಲಯದ ಮಾಜಿ ಅಧ್ಯಕ್ಷರಾದ ದೇವಪ್ಪ ಶೇಖ ಹಾಗೂ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಶ್ರೀಮತಿ ವಿಜಯ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಉದಯ ಕುಮಾರ್ ರೈ ಅಗರಿ, ಅರವಿಂದ್ ರೈ ಮೂರ್ಜೆಬೆಟ್ಟು, ಸುದೇಶ್ ಭಂಡಾರಿ ಎರ್ಮೆನಿಲೆ, ಮೂಲ್ಕಿ ಬಂಟರ ಸಂಘದ ಕಾರ್ಯದರ್ಶಿ ಸಾಯಿನಾಥ್ ಶೆಟ್ಟಿ ಮುಂಡ್ಕೂರು, ಕುಲ್ಯಾರ್ ನಾರಾಯಣ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ನಗ್ರಿ ಕೆವುಳ, ಸಂಕಪ್ಪ ಶೆಟ್ಟಿ ಮಲಾರಬೀಡು, ಅಮರೇಶ್ ಶೆಟ್ಟಿ ತಿರುವಾಜೆ, ಸುನೀತಾ ಯು ರೈ ಗೌರಿಕೋಡಿ, ಗಾಯತ್ರಿ ಎಸ್. ರೈ ಕೊಲ್ಲಾಡಿ, ವಿನುತಾ ಎ. ಶೆಟ್ಟಿ ಕೊಲ್ಲಾಡಿ, ಪವಿತ್ರ ಪೂಂಜ ಕೊಡಂಗೆ, ಪ್ರದೀಪ್ ಕುಮಾರ್ ರೈ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.