ಪುಣೆ ಬಂಟರ ಸಂಘದ ಸಮಾಜ ಕಲ್ಯಾಣ ಕಲ್ಪವೃಕ್ಷ ವಿನಯ ಕೆ.ಕೆ ಶೆಟ್ಟಿ ಕ್ರೀಡಾ ದಾತ ಯೋಜನೆಯ ಅಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನದಂಗವಾಗಿ ಯೋಗ ದಿನಾಚರಣೆಯು ಜೂನ್ 21ರಂದು ಬೆಳಿಗ್ಗೆ ಗಂಟೆ 9.00 ರಿಂದ ಬಂಟರ ಭವನದ ಬ್ಯಾಂಕ್ವೇಟ್ ಹಾಲ್ ನಲ್ಲಿ ನಡೆಯಲಿದೆ. ಪುಣೆಯ ಶೆಟ್ಟಿ ಯೋಗ ಕ್ಲಾಸ್ ನ ನಿರ್ದೇಶಕಿ ಪ್ರಮಿಳಾ ಜೆ ಶೆಟ್ಟಿಯವರು ಈ ಯೋಗ ದಿನಾಚರಣೆಯನ್ನು ನಡೆಸಿ ಕೊಡಲಿದ್ದಾರೆ.

ಬಂಟರ ಸಂಘ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಪ್ರಾದೇಶಿಕ ಸಮಿತಿಗಳ ಸಂಯುಕ್ತ ಕೂಡುವಿಕೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸಮಾಜದ ಬಾಂಧವರು ಪಾಲ್ಗೊಳ್ಳುವಂತೆ ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಅಧ್ಯಕ್ಷರಾದ ಕೆ ಅಜಿತ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು, ಕ್ರೀಡಾ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಅವರ್ಸೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿ ಹಾಗೂ ಸಮಿತಿ ಪದಾಧಿಕಾರಿಗಳು, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಶೆಟ್ಟಿ, ನಾರಾಯಣ ಹೆಗ್ಡೆ, ಸಂದೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಹಾಗೂ ಸಮಿತಿ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.
ವರದಿ : ಹರೀಶ್ ಮೂಡಬಿದಿರೆ, ಪುಣೆ