ಶಿವಮೊಗ್ಗದ ಪ್ರಖ್ಯಾತ ಉದ್ಯಮಿ ಪಿಂಗಾರ ಹೋಟೆಲ್ ಮಾಲೀಕರಾದ ಕೊಡುಗೈ ದಾನಿ ರಾಜಮೋಹನ್ ಹೆಗ್ಡೆ ಅವರು ಸಾಗರ ಬಂಟರ ಸಂಘದ ಕಟ್ಟಡ ನಿರ್ಮಾಣಕ್ಕೆ 1 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ವತಿಯಿಂದ ರಾಜಮೋಹನ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ರಘುಪತಿ ಶೆಟ್ಟಿ, ನಿರ್ದೇಶಕರಾದ ಸದಾನಂದ ಶೆಟ್ಟಿ ಹಾಗೂ ಆನಂದ್ ಶೆಟ್ಟಿಯವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.