ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಪುರುಷೋತ್ತಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಿನ್ನಿಗೋಳಿ ಘಟಕದ ಧನ್ಯೋತ್ಸವ ಕಾರ್ಯಕ್ರಮ ಕಿನ್ನಿಗೋಳಿಯಲ್ಲಿ ನಡೆಯಿತು. ಮೇ 9 ರಂದು ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಿನ್ನಿಗೋಳಿ ಘಟಕದ ಅದ್ದೂರಿ ಕಾರ್ಯಕ್ರಮದಲ್ಲಿ ಸಹಕಾರ ನೀಡಿದ ಎಲ್ಲಾ ಫೌಂಡೇಶನ್ ಅಭಿಮಾನಿ ಬಂಧುಗಳಿಗೆ ಧನ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಐಕಳ ಹರೀಶ್ ಶೆಟ್ಟಿಯವರು ಮಾತನಾಡಿ, ಮೊನ್ನೆ ನಡೆದ ಘಟಕದ ಉದ್ಘಾಟನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆದಿದೆ. ಹಾಗೆಯೇ ಜೂನ್ ಒಂದರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ ಪಟ್ಲ ಫೌಂಡೇಶನ್ ನ ದಶಮಾನ ಉತ್ಸವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಬಂದು ಮುಕ್ತ ಮನಸ್ಸಿನಿಂದ ಸಹಕಾರ, ಸಹಾಯ ನೀಡಬೇಕೆಂದು ಎಲ್ಲರಲ್ಲಿ ಮನವಿ ಮಾಡಿಕೊಂಡರು.
ಕಿನ್ನಿಗೋಳಿ ಘಟಕದ ವತಿಯಿಂದ ದಶಮಾನೋತ್ಸವ ಸಂಭ್ರಮದ ಸಲುವಾಗಿ ಫೌಂಡೇಶನ್ ಗೆ ಈಗಾಗಲೇ 10 ಲಕ್ಷ ರೂಪಾಯಿ (10 ಟ್ರಸ್ಟಿಗಳನ್ನು) ಒಟ್ಟು ಮಾಡಿದ್ದು, ಜೂನ್ ಒಂದರ ಒಳಗೆ ಇದನ್ನು ಇನ್ನಷ್ಟು ಹೆಚ್ಚು ಮಾಡಿ ಕೇಂದ್ರ ಸಮಿತಿಗೆ ಹಸ್ತಾಂತರಿಸಬೇಕೆಂದು ಕೋಶಾಧಿಕಾರಿ ಸ್ವರಾಜ್ ಶೆಟ್ಟಿ ಅವರು ಎಲ್ಲರಲ್ಲಿ ವಿನಂತಿ ಮಾಡಿಕೊಂಡರು.
ಘಟಕದ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಭುವನಾಭಿರಾಮ ಉಡುಪ, ಸ್ವರಾಜ್ ಶೆಟ್ಟಿ, ದಿವಾಕರ ಕರ್ಕೇರ, ಸಾಯಿನಾಥ್ ಶೆಟ್ಟಿ, ಪೃಥ್ವಿರಾಜ್ ಆಚಾರ್ಯ, ಶರತ್ ಶೆಟ್ಟಿ, ನಿಶಾಂತ್ ಶೆಟ್ಟಿ ಹಾಗೂ ಎಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.