ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ನೂತನ ಶಾಖೆ ‘ದಿ ಬೋಟ್ ಮ್ಯಾನ್ ಹಬ್ ರೆಸ್ಟೋರೆಂಟ್ ಉದ್ಘಾಟನೆಗೊಂಡಿದೆ. ರೆಸ್ಟೋರೆಂಟ್ ನ ಉದ್ಘಾಟನೆಯನ್ನು ಉದ್ಯಮಿ ಡಾ ರೋನಾಲ್ಡ್ ಕೊಲಾಸೋ, ಉದ್ಯಮಿ ಹುಸೈನ್ ಅಬ್ಬಾಸ್, ಭಾರತೀಯ ಗಾಯಕಿ ಗೋವಾದ ಖ್ಯಾತಿ ನಟಿ ರೀಟಾ ರೋಸ್ ಮಾಡಿದರು. ಯುಎಇ ಯ ತುಳು-ಕನ್ನಡ ಸಂಘಟಕ ಸರ್ವೋತ್ತಮ ಶೆಟ್ಟಿ, ಅಬುಧಾಬಿ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರಾಚಿ ಶೆಟ್ಟಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಯುಎಇ ಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಪ್ರವೀಣ್ ಕುಮಾರ್ ಶೆಟ್ಟಿಯವರ ಆತ್ಮೀಯ ಸ್ನೇಹಿತರು ಪಾಲ್ಗೊಂಡಿದ್ದರು.
ಉದ್ಘಾಟನಾ ಸಮಾರಂಭಕ್ಕೆ ಮುನ್ನ ದುಬೈ ಸೇಂಟ್ ಮೇರಿ ಕ್ಯಾಥೋಲಿಕ್ ಚರ್ಚ್ ಗುರುಗಳಾದ ಫಾ. ಮೈಕೆಲ್ ಕಾರ್ಡೋಜ್ ಮತ್ತು BAPS ಹಿಂದೂ ಮಂದಿರ ಅಬುಧಾಬಿಯ ಬಹುಶ್ರುತದಾಸ್ ಜಿ ಸ್ವಾಮೀಜಿ ರೆಸ್ಟೋರೆಂಟ್ ಗೆ ಶುಭವನ್ನು ಹಾರೈಸಿದರು. ಆಡಳಿತ ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅತಿಥಿ ಆಭಾಗ್ಯತರನ್ನು ಸ್ವಾಗತಿಸಿ ವಂದಿಸಿದರು. ಬೋಟ್ ಮ್ಯಾನ್ ಹಬ್ ರೆಸ್ಟೋರೆಂಟ್ ಮಂಗಳೂರು, ಗೋವಾ ಮತ್ತು ಮಹಾರಾಷ್ಟ್ರದ ಮಾಲ್ವನ್ ನಗರದ ಕರಾವಳಿ ಸಂಪ್ರದಾಯ ತಿಂಡಿಗಳಿಂದ ಪ್ರೇರಿತವಾಗಲಿದೆ. ಈ ಮೂರು ಪ್ರಾದೇಶಿಕ ಪಾಕ ಪದ್ದತಿಗಳ ಒಂದು ಭಕ್ಷ್ಯ ಪಟ್ಟಿ, ಮತ್ಸ ಪ್ರಿಯರ ಸ್ವಾದಿಷ್ಟತೆಯ ಖಾದ್ಯಗಳನ್ನು ಆಸ್ವಾದಿಸುವವರನ್ನು ಒಟ್ಟುಗೂಡಿಸಲಿದೆ. ಊರಿನ ವಾತಾವರಣ ಸೃಷ್ಟಿಸಿ ಸಂಪ್ರದಾಯ ಭೋಜನಗಳೊಂದಿಗೆ ಅಂತರಾಷ್ಟ್ರೀಯ ಶೈಲಿಯಲ್ಲಿ ಸೇವೆ ನಿರ್ವಹಿಸಲಿದೆ.
ಪ್ರತಿದಿನ ಸಂಜೆ ಲೈವ್ ಡ್ಯೂಯೆಟ್ ಪ್ರದರ್ಶನಗಳು ಒಂದು ಭಾವಪೂರ್ಣ ಕಡಲತೀರದ ವಾತಾವರಣವನ್ನು ಹೊಂದಿರುತ್ತದೆ. ಗೋವಾ ಮೂಲದ ಪ್ರಶಸ್ತಿ ವಿಜೇತ ಪ್ರಸಿದ್ಧ ಬಾಣಸಿಗ ಚೆಪ್ ಸರಿತಾ ಚೌವ್ಹಾಣ್ ಸಾರಥ್ಯದಲ್ಲಿ ಈ ರೆಸ್ಟೋರೆಂಟ್ ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದೆ. ವಿವಿಧ ಬಗೆಯ ಮತ್ಸ್ಯಗಳ ಸವಿಯಾದ ಖಾದ್ಯಗಳ ಸ್ವಾದಿಷ್ಟ ರುಚಿಯೇ ಇಲ್ಲಿ ಗ್ರಾಹಕರನ್ನು ಸೆಳೆಯುವ ಕೇಂದ್ರವಾಗಲಿದೆ. ದುಬೈ ನಗರಕ್ಕೆ ಬರುವ ಪ್ರವಾಸಿಗರಿಗೆ ಉತ್ತಮ ಶುಚಿ ರುಚಿಯ ಕೇಂದ್ರವಾಗಲಿದೆ ಈ ರೆಸ್ಟೋರೆಂಟ್ ಹೆಚ್ಚಿನ ಮಾಹಿತಿಗಾಗಿ ಹಾಗೂ ಕಾಯ್ದಿರಿಸುವಿಕೆಗಾಗಿ +971554253900 ಈ ನಂಬರನ್ನು ಸಂಪರ್ಕಿಸಬಹುದು.
