ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಇವರಿಂದ ಪ್ರೊ. ಎಂ. ಎಲ್. ಸಾಮಗರು ದಾನವಾಗಿ ನೀಡಿರುವ ನಿವೇಶನದಲ್ಲಿ ಯಕ್ಷಗಾನ ಕಲಾವಿದರಿಗೋಸ್ಕರ ನಿರ್ಮಾಣಗೊಳ್ಳಲಿರುವ ಗೃಹ ಸಮುಚ್ಚಯ “ಯಕ್ಷಧ್ರುವ ಪಟ್ಲಾಶ್ರಯ” ಇದರ ಭೂಮಿ ಪೂಜೆಯು ಏಪ್ರಿಲ್ 19 ರಂದು (ಶನಿವಾರ) ಬೆಳಗ್ಗೆ 10 ಘಂಟೆಗೆ ಶೃಂಗೇರಿ ಶ್ರೀ ಶಾರದಾ ಪೀಠದ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರ ಅಮೃತ ಹಸ್ತದಿಂದ ಉಡುಪಿ ಕೊಡವೂರಿನ ಲಕ್ಷ್ಮೀ ನಗರ ಗರ್ಡೆಯಲ್ಲಿ ಸಂಪನ್ನಗೊಳ್ಳಲಿದೆ. ಆ ಪ್ರಯುಕ್ತ ಸ್ಥಳ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಪಟ್ಲ ಸತೀಶ ಶೆಟ್ಟಿ, ತೋಟದಮನೆ ದಿವಾಕರ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ವಿದ್ವಾನ್ ದಾಮೋದರ ಶರ್ಮ ಬಾರ್ಕೂರು, ಭುವನಪ್ರಸಾದ ಹೆಗ್ಡೆ, ಸುಧಾಕರ ಆಚಾರ್ಯ, ಹರೀಶ ಜೋಷಿ, ತ್ರಿಲೋಚನ ಶಾಸ್ತ್ರೀ, ವಿಶ್ವನಾಥ ಶ್ಯಾನುಭಾಗ್, ಆನಂದ ಶೆಟ್ಟಿ, ರತನ್ ರಾಜ್ ರೈ, ಇಂಜಿನಿಯರ್ ನಾಗರಾಜ ಐತಾಳ್ ಹಾಗೂ ರೋಶನ್ ಉಪಸ್ಥಿತರಿದ್ದರು.
