ಉಡುಪಿ ಕಲ್ಯಾಣಪುರದಲ್ಲಿ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಚರಿಸುತ್ತಿರುವ ತ್ರಿಶಾ ಪ. ಪೂ. ಕಾಲೇಜ್ ದ್ವಿತೀಯ ವರ್ಷದಲ್ಲೂ ಶೇಕಡ 100 ಫಲಿತಾಂಶದ ದಾಖಲಿಸಿದೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಮೃತ ಬಸವರಾಜ್ ಬಣಕರ್ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಪಡೆದು ಸಂಸ್ಥೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾರೆ. ಶ್ರೀರಕ್ಷಾ 589 ಅಂಕ, ಸುಶ್ಮಿತಾ 588 ಅಂಕ, ಆಕಾಶ್ ಶೇಥಿಯಾ 586 ಅಂಕ, ಶಶಾಂಕ್ ಎಸ್ ಭಟ್ 585 ಅಂಕಗಳನ್ನು ಗಳಿಸಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆಗೆ ಹಾಜರಾದ 162 ವಿದ್ಯಾರ್ಥಿಗಳಲ್ಲಿ 108 ಅತ್ಯುನ್ನತ ದರ್ಜೆ ಹಾಗೂ 54 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಪಡೆದಿದ್ದಾರೆ.

ತ್ರಿಷಾ ವಿದ್ಯಾ ಸಂಸ್ಥೆಯು ತನ್ನ ಪ್ರಾರಂಭದ ವರ್ಷದಿಂದಲೂ ಶೇ 100ರ ಫಲಿತಾಂಶದ ದಾಖಲಿಸಿದ್ದು, ಅತ್ಯುತ್ತಮ ಬೋಧಕ ಮತ್ತು ಬೋಧಕೇತರ ವೃಂದದವರೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯಾಗಿ ಬೆಳೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಶ್ರೇಣಿಯ ಫಲಿತಾಂಶ ದಾಖಲಿಸಿರುವ ಸಂಸ್ಥೆ ಉಡುಪಿ ಜಿಲ್ಲೆಯಲ್ಲಿ ಪ್ರಸಿದ್ಧವಾಗಿದೆ. ನೀಟ್, ಜೆ.ಇ.ಇ, ಸಿ.ಇ.ಟಿ ಯಂತಹ ಪರೀಕ್ಷೆಗಳಲ್ಲಿ ರಾಷ್ಟ್ರಮಟ್ಟದ ವಿವಿಧ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಂಡ ಹೆಗ್ಗಳಿಕೆ ತ್ರಿಶಾ ವಿದ್ಯಾ ಸಂಸ್ಥೆಗೆ ಇದೆ. ವಿದ್ಯಾರ್ಥಿಗಳ ದಾಖಲೆಯ ಫಲಿತಾಂಶಕ್ಕೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು, ಉಪನ್ಯಾಸಕ ವರ್ಗದವರು, ಪಾಲಕ- ಪೋಷಕರು, ಬೋಧಕೇತರ ವೃಂದದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.