ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬಂಟರ ಸಂಘದ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷರಾದ ಡಾ. ಎಂ. ಪ್ರಭಾಕರ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ಇತ್ತೀಚಿಗೆ ದಾವಣಗೆರೆಯ ಕುಂದುವಾಡ ರಸ್ತೆಯಲ್ಲಿರುವ ಡಾ. ಶಾಮಸುಂದರ್ ಶೆಟ್ಟಿ ಬಂಟರ ಭವನದಲ್ಲಿ ಜರುಗಿತು. 2025-28 ರ ಸಾಲಿನ ಸಂಘದ ನೂತನ ಅಧ್ಯಕ್ಷರಾಗಿ ದಾವಣಗೆರೆಯ ಜೆ.ಜೆ.ಎಂ ಮೆಡಿಕಲ್ ಕಾಲೇಜಿನ ನೇತ್ರ ಚಿಕಿತ್ಸೆ ವಿಭಾಗದ ನಿವೃತ್ತ ಮುಖ್ಯಸ್ಥರೂ, ದಾವಣಗೆರೆಯ ಹೆಸರಾಂತ ನೇತ್ರ ವೈದ್ಯರೂ ಆದ ಡಾ. ಎಸ್ ಸುರೇಂದ್ರ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಮಲ್ಯಾಡಿ ಪ್ರಭಾಕರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ ಚಿತ್ರದುರ್ಗ, ಡಾ. ನಿತಿನ್ ರಾಜ್ ಶೆಟ್ಟಿ ಹರಿಹರ, ಸಿಎ ಉಮೇಶ್ ಶೆಟ್ಟಿ ಹಾಗೂ ಕಿಶನ್ ಚಂದ್ರ ಶೆಟ್ಟಿ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ಮಲ್ಯಾಡಿ ಮಹೇಶ್ ಶೆಟ್ಟಿ, ಖಜಾಂಜಿಗಳಾಗಿ ಸಿಎ. ಕಿರಣ್ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.