ಕರಾವಳಿ ಸೌಹಾರ್ದ ಪತ್ತಿನ ಸಹಕಾರ ಸಂಘದ 2025-30 ರ ಅವಧಿಗೆ ಅಧ್ಯಕ್ಷರಾಗಿ ಸಿಎ ಉಮೇಶ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಎಸ್ ಸೀತಾರಾಮ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ, ಶ್ರೀಮತಿ ಜಯಲಕ್ಷ್ಮಿ ಪಿ. ಶೆಟ್ಟಿ, ಶ್ರೀಮತಿ ವಿಮಲಾ ಎಸ್. ಶೆಟ್ಟಿ, ಮಹೇಶ್ ಆರ್. ಶೆಟ್ಟಿ, ರವೀಂದ್ರ ಎಸ್ ಶೆಟ್ಟಿ, ಡಾ. ಸುಭೋದ್ ಎಸ್. ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಸದಾಶಿವ ಶೆಟ್ಟಿ ಬಿ, ವೆಂಕಟೇಶ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಚುನಾವಣಾ ಅಧಿಕಾರಿಯಾದ ಮಂಜುನಾಥ್ ಸ್ವಾಮಿಯವರು ಘೋಷಣೆ ಮಾಡಿದ್ದಾರೆ.

ಕರಾವಳಿ ಸೌಹಾರ್ದ ಪತ್ತಿನ ಸಹಕಾರ ಸಂಘವು ನವೆಂಬರ್ 2000 ರಂದು ಪ್ರಾರಂಭವಾಗಿದ್ದು, ದಿವಂಗತ ಡಾ. ಶ್ಯಾಮಸುಂದರ್ ಶೆಟ್ಟಿಯವರು ಸ್ಥಾಪಕ ಅಧ್ಯಕ್ಷರಾಗಿದ್ದರು. ದಾವಣಗೆರೆಯಲ್ಲಿ ಸ್ವಂತ ಕಟ್ಟಡ ಹೊಂದಿರುವ ಸಂಘ 10 ಕೋಟಿ ರೂಪಾಯಿಗೂ ಮಿಕ್ಕಿ ವಿವಿಧ ನಿಧಿಗಳನ್ನು ಹೊಂದಿದ್ದು ದಾವಣಗೆರೆ ಜಿಲ್ಲೆಯಲ್ಲಿ ಮುಂಚೂಣಿಯ ಸೌಹಾರ್ದ ಸಹಕಾರ ಸಂಘಗಳಲ್ಲಿ ಒಂದಾಗಿದೆ. ಹೊಸ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳನ್ನು ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ಡಾ. ಸುರೇಂದ್ರ ಶೆಟ್ಟಿ ಹಾಗೂ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳು ಅಭಿನಂದಿದ್ದಾರೆ.