ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನಿರಂತರವಾಗಿ ಪ್ರಯತ್ನಿಸುತ್ತಿರುವ ತುಳುವೆರೆ ಆಯಾನೊ ಕೂಟ ಕುಡ್ಲ ಇದರ ಮಹಾಸಭೆಯು ಇತ್ತೀಚೆಗೆ ಸ್ವರೂಪ ಅಧ್ಯಯನ ಕೇಂದ್ರ ಕೋಡಿಯಾಲ್ ಬೈಲ್ ಇಲ್ಲಿ ನಡೆಯಿತು.ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಶಮಿನ ಆಳ್ವ ಮರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಭೂಷಣ್ ಕುಲಾಲ್, ಖಜಾಂಜಿಯಾಗಿ ಅಮೂಲ್ಯ ಶೆಟ್ಟಿ ಇವರು ಆಯ್ಕೆಯಾದರು. ಅಂತೆಯೇ ಉಪಾಧ್ಯಕ್ಷರಾಗಿ ಗೋಪಾಡ್ಕರ್, ಹರಿಪ್ರಸಾದ್ ರೈ, ರಾಜೇಶ್ ಅಮಿನ್, ಜೊತೆ ಕಾರ್ಯದರ್ಶಿಗಳಾಗಿ ಶ್ರೀಮತಿ ರೋಹಿಣಿ ಶೆಟ್ಟಿ, ಶ್ರೀಮತಿ ಭಾರತೀ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಜ್ವಲ್ ಆಳ್ವ, ರಾಜೇಶ್ ಹೆಗ್ಡೆ ಪೊಳಲಿ, ಕುಸುಮ ಶೆಟ್ಟಿ ಇವರು ಅವಿರೋಧವಾಗಿ ಆಯ್ಕೆಗೊಂಡರು.
