ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಕೇಂದ್ರೀಯ ಘಟಕ ಮಂಗಳೂರು ಇದರ 8 ನೇ ವಾರ್ಷಿಕೋತ್ಸವ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಶಕುಂತಳಾ ರಮಾನಂದ ಭಟ್, ಚಂದ್ರಕಲಾ ಬಾಲಕೃಷ್ಣ ಶೆಟ್ಟಿ, ಭಾರತಿ ಗಂಗಾಧರ್, ಮಮತ ಹೆಗ್ಡೆ, ಸತ್ಯವತಿ ಡಿ ಶೆಟ್ಟಿ ದೀಪ ಪ್ರಜ್ವಲನೆಗೈದರು.

ಸಂಜೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನೃತ್ಯ ವಿದುಷಿ, ವಿಮರ್ಶಕಿ ಪ್ರತಿಭಾ ಎಲ್ ಸಾಮಗ ವಹಿಸಿದ್ದರು. ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರೂ ಕೂಡಾ ಯಕ್ಷಗಾನದಲ್ಲಿ ಮುಂಚೂಣಿಯಲ್ಲಿದ್ದು ಕಲಾಸೇವೆಗೈಯುತ್ತಿದ್ದಾರೆ. ಅದರಲ್ಲೂ ಮಕ್ಕಳು ಯಕ್ಷಗಾನದತ್ತ ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳನ್ನು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವಂತೆ ಮಹಿಳಾ ಕೇಂದ್ರ ಸಮಿತಿ ಶ್ರಮ ಪಟ್ಟಿದೆ. ನೇಪಥ್ಯಕ್ಕೆ ಸರಿದ ಮತ್ತು ಸಾಧನೆಗೈದ ಮಹಿಳಾ ಕಲಾವಿದರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಕಾರ್ಯ ಎಂದರು.
ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಪ್ರಸಾದ್ ಜೈನ್, ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ವಿದ್ಯಾ ರಾಕೇಶ್, ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ, ಸುಜಾತ ಧನಂಜಯ ಶೆಟ್ಟಿ ಹೊಸಬೆಟ್ಟು, ಚೈತ್ರಾ ಶೆಟ್ಟಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಜಯಲಕ್ಷ್ಮೀ ಕಾರಂತ್ ಮಂಗಲ್ಪಾಡಿ, ಜ್ಯೋತಿ ಸುನೀಲ್ ಶೆಟ್ಟಿ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು.
ಕುಮಾರಿ ಚೈತ್ರಾ ಎಚ್ ರಾವ್, ವಿದುಷಿ ವೈಷ್ಣವಿ ಸಾತ್ವಿಕ್ ರಾವ್, ವಿದುಷಿ ಮೈತ್ರಿ ಭಟ್ ಅವರನ್ನು ಯಕ್ಷಧ್ರುವ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೇಂದ್ರೀಯ ಮಹಿಳಾ ಘಟಕದ ಗೌರವಾಧ್ಯೆಕ್ಷೆ ಆರತಿ ಆಳ್ವ, ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಕಾರ್ಯದರ್ಶಿ ಪೂರ್ಣಿಮಾ ಶಾಸ್ತ್ರಿ, ಕೋಶಾಧಿಕಾರಿ ಭಾರತಿ ಎಸ್ ರಾವ್, ಸಂಚಾಲಕಿ ನಿವೇದಿತಾ ಎನ್ ಶೆಟ್ಟಿ ಉಪಸ್ಥಿತರಿದ್ದರು. ಪೂರ್ಣಿಮಾ ಯತೀಶ್ ರೈ ಸ್ವಾಗತಿಸಿ ಪ್ರಸ್ತಾವನೆಗೈದರು. ಆರತಿ ಆಳ್ವ ವಂದಿಸಿದರು. ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಿಳಾ ಕಲಾವಿದೆಯರಿಂದ ದಶಾವತಾರ ಯಕ್ಷರೂಪಕ ಪ್ರದರ್ಶನಗೊಂಡಿತು.








































































































