ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿಪೋಷಕರಿಗೆ ಮಕ್ಕಳ ಪಾಲನೆಯ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಕೆಲೊರೆಕ್ಸ್ ಗ್ರೂಪ್ನ ಎಮ್.ಡಿ, ಸಿ.ಇ.ಒ. ಡಾ. ಮಂಜುಳ ಪೂಜಾ ಶ್ರಾಫ್ ಆಗಮಿಸಿದ್ದರು. ಅವರು ಮಾತನಾಡಿ ಪೋಷಕರು ಮಕ್ಕಳ ಜೊತೆ ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆಯಬೇಕು. ಮಕ್ಕಳು ಮೊಬೈಲ್, ಡ್ರಗ್ಸ್ ಮುಂತಾದ ದುಷ್ಟ ಚಟಗಳಿಂದ ದೂರವಿರುವ ಹಾಗೆ ನೋಡಿಕೊಳ್ಳಬೇಕು. ಹಾಗೆಯೇ ಅವರು ತಮ್ಮೆಲ್ಲ ಭಯಗಳಿಂದ ಹೊರಗಡೆ ಬರುವ ಹಾಗೆ ಮಾಡಬೇಕು. ಅದೇ ರೀತಿ ಶಿಕ್ಷಕರು ಸ್ವಗೌರವದ ಜೊತೆಗೆ ಕೃತಜ್ಞತಾ ಮನೋಭಾವ ಹೊಂದಿರಬೇಕೆಂದರು.
ಕೆಲೋರೆಕ್ಸ್ ಗ್ರೂಪ್ನ ಅನಂತ ಕೃಷ್ಣನ್ ಬಿ ಮಾಹಿತಿಯನ್ನು ನೀಡಿಪೋಷಕರರ ಪ್ರಶ್ನೆಗಳಿಗೆ ಉತ್ತರಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಪೋಷಕರನ್ನು ಅಭಿನಂದಿಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಸಂಸ್ಥೆಯ ಪರವಾಗಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಾಗಾರದಲ್ಲಿ ಸೈಬರ್ ಬೆದರಿಕೆ, ಇಂಟರ್ನೆಟ್ಎ ಡಿಕ್ಷನ್, ಆನ್ಲೈನ್ ಸುರಕ್ಷತೆ, ಮಾನಸಿಕ ಆರೋಗ್ಯ, ನೈಜ ಮತ್ತು ವಾಸ್ತವಿಕ ಸಂಪರ್ಕ ಮುಂತಾದ ವಿಷಯಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಕಾರ್ಯಾಗಾರದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಡಾ. ಅನುಷಾ ಸುಬ್ರಹ್ಮಣ್ಯಂ, ಉಪಾಧ್ಯಕ್ಷೆ ರೇವತಿ ಕೆ,ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.