ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಸುರತ್ಕಲ್ ಶಾಖೆಯ ನವೀಕೃತ ಶಾಖಾ ಕಛೇರಿಯನ್ನು ಹರುಷ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ದಿನಾಂಕ 12.09.2024ರಂದು ಉದ್ಘಾಟಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಸದಸ್ಯ ಗ್ರಾಹಕರಿಗೆ ಹೆಚ್ಚಿನ ಅನೂಕೂಲಗಳನ್ನು, ಸೌಲಭ್ಯಗಳನ್ನು ಒದಗಿಸುವುದು ಸಂಘದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸುರತ್ಕಲ್ ಶಾಖಾ ಕಛೇರಿಯನ್ನು ಆಧುನೀಕರಿಸಿ, ಹವಾನಿಯಂತ್ರಿತ ಸೌಲಭ್ಯಗಳೊಂದಿಗೆ ನವೀಕರಿಸಿ ಗ್ರಾಹಕರ ಸೇವೆಗೆ ಅರ್ಪಿಸಲಾಗಿದೆ. ಸಂಘವು ಸದಸ್ಯರ ಸಹಕಾರದಿಂದ ರೂ.1,000 ಕೋಟಿ ವ್ಯವಹಾರವನ್ನು ಈಗಾಗಲೇ ದಾಟಿದ್ದು, ಕಳೆದ ಆರು ವರ್ಷಗಳಿಂದ ಶೇ.25 ರಷ್ಟು ಡಿವಿಡೆಂಡನ್ನು ನೀಡುತ್ತಿದ್ದೇವೆ. ಸಂಘವು ಸಣ್ಣ ಮೊಬಲಗಿನ ರಿಟೇಲ್ ಸಾಲ ನೀಡುವಿಕೆಗೆ ಒತ್ತು ನೀಡುತ್ತಿದ್ದು, 40 ಸಾವಿರಕ್ಕಿಂತ ಹೆಚ್ಚು ಸಾಲಗಾರ ಗ್ರಾಹಕರಿದ್ದಾರೆ. ಸಾಲ ವಸೂಲಾತಿ ಅತ್ಯುತ್ತಮವಾಗಿದ್ದು, ಕಳೆದ 17 ವರ್ಷಗಳಿಂದ ನೆಟ್ ಎನ್.ಪಿ.ಎ. ಶೂನ್ಯ ಪ್ರಮಾಣದಲ್ಲಿದೆ. ಸಂಘದ ಈ ಎಲ್ಲಾ ಸಾಧನೆಗೆ ಸಹಕರಿಸುತ್ತಿರುವ ಎಲ್ಲಾ ಸದಸ್ಯ ಗ್ರಾಹಕರನ್ನು ಅಭಿನಂದಿಸಿದರು.
ಸಂಘದ ನಿರ್ದೇಶಕರಾದ ಶ್ರೀ ವಿಠಲ ಪಿ. ಶೆಟ್ಟಿಯವರು ಹವಾನಿಯಂತ್ರಿತ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಉತ್ತಮ ಸೇವೆಯಿಂದ ಗ್ರಾಹಕರನ್ನು ಆಕರ್ಷಿಸಿ ಶಾಖೆಯ ವ್ಯವಹಾರವು ವರ್ಷಾನುವರ್ಷ ಹೆಚ್ಚಿಸುವಂತೆ ಮಾಡುವುದು ಸಿಬ್ಬಂದಿಗಳ ಕರ್ತವ್ಯವಾಗಿದೆ ಎಂದು ಹೇಳಿದರು. ನಿರ್ದೇಶಕರಾದ ಶ್ರೀ ಪಿ.ಬಿ. ದಿವಾಕರ ರೈ ಮಾತನಾಡಿ ಸಂತೃಪ್ತ ಗ್ರಾಹಕರೇ ಸಂಘದ ರಾಯುಭಾರಿಗಳು ಇವರು ಸಂಘಕ್ಕೆ ಇನ್ನಷ್ಟು ಹೊಸ ಗ್ರಾಹಕರನ್ನು ಪರಿಚಯಿಸಿಕೊಟ್ಟು ವ್ಯವಹಾರಾಭಿವೃದ್ಧಿ ಹೊಂದಲು ಕಾರಣರಾಗುವರು ಎಂದು ಹೇಳಿದರು.
ಸಂಘದ ಇನ್ನೋರ್ವ ನಿರ್ದೇಶಕರಾದ ಶ್ರೀ ದಯಾಕರ ಆಳ್ವರವರು ಶಾಖೆಗೆ ಶುಭಾಶಂಶನೆಯನ್ನು ತಿಳಿಸಿ ಸಂಘದ ಕೇಂದ್ರ ಕಛೇರಿಗೆ ನೂತನ ಕಟ್ಟಡ ಹಾಗೂ ಇನ್ನೂ ಐದು ಶಾಖೆಗಳು ಶೀಘ್ರದಲ್ಲಿ ಶುಭಾರಂಭಗೊಳ್ಳಲಿದ್ದು, ಗ್ರಾಹಕರೇ ಸಂಘದ ಬೆನ್ನೆಲುಬು ಇವರ ಸಹಕಾರವಿರುವುದರಿಂದ ಮಾತ್ರ ವರ್ಷಾನುವರ್ಷ ಸಂಘದ ವ್ಯವಹಾರ ವಿಸ್ತರಣೆ ಹೊಂದಿ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಹೇಳಿದರು. ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಟಿ. ಆರ್. ಶೆಟ್ಟಿ ಮತ್ತು ಶಾಖಾಧಿಕಾರಿ ಶ್ರೀಮತಿ ತುಳಸಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಾಖಾ ಸಲಹಾ ಸಮಿತಿ ಸದಸ್ಯರುಗಳಾದ ಶ್ರೀ ರಮಾನಂದ ರಾವ್, ಶ್ರೀ ಬಾಲಕೃಷ್ಣ ಶೆಟ್ಟಿ ಮತ್ತು ಡಾ. ಕೆ.ಪಿ.ಕೆ. ಹೆಗ್ಡೆಯವರುಗಳನ್ನು ಮತ್ತು ಶಾಖಾ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಟಿ.ಆರ್. ಶೆಟ್ಟಿ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನು ಆಡಿದರು. ಸುರತ್ಕಲ್ ಶಾಖಾ ಸಿಬ್ಬಂದಿ ಶ್ರೀಮತಿ ಶ್ರೀಲಕ್ಷಿ ಪ್ರಾಥಿಸಿದರು, ಶಾಖಾಧಿಕಾರಿ ಶ್ರೀಮತಿ ತುಳಸಿ ವಂದಿಸಿದರು, ಸಿಬ್ಬಂದಿ ಶ್ರೀ ಹರೀಶ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.