ಎಚ್ ಪಿ ಆರ್ ಪ್ರೊಡಕ್ಷನ್ ಲಾಂಛನದಲ್ಲಿ ತ್ರಿಶೂಲ್ ಶೆಟ್ಟಿ ನಿರ್ದೇಶನ ಹರಿಪ್ರಸಾದ್ ರೈ ನಿರ್ಮಾಣದಲ್ಲಿ ತಯಾರಾಗುತ್ತಿರುವ “ಕಂಕನಾಡಿ” ತುಳು ಚಲನ ಚಿತ್ರದ ಮುಹೂರ್ತ ಸಮಾರಂಭವು ಸೆಪ್ಟೆಂಬರ್ 8 ಭಾನುವಾರ ಬೆಳಿಗ್ಗೆ 9.30 ಕ್ಕೆ ಉರ್ವ ಮಾರಿಗುಡಿ ದೇವಸ್ಥಾನದಲ್ಲಿ ನಡೆಯಲಿದೆ. ತ್ರಿಶೂಲ್ ಶೆಟ್ಟಿ ಅವರು ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡಿದ್ದಾರೆ. ಪುಳಿಮುಂಚಿ ತುಳು ಸಿನಿಮಾವನ್ನು ನಿರ್ದೇಶಿಸಿ ಯಶಸ್ವಿಯಾದವರು.ಉದ್ಯಮಿ, ಸಮಾಜಸೇವಕ ಹರಿಪ್ರಸಾದ್ ರೈ ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಒಂದೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಣ ನಡೆಸಲು ರೂಪುರೇಶೆ ಸಿದ್ದಪಡಿಸಿದ್ದಾರೆ. ತಾರಾಗಣದ ಆಯ್ಕೆ ನಡೆಯುತ್ತಿದೆ. ದಿಗ್ಗಜ ಕಲಾವಿದರೂ ಕಂಕನಾಡಿ ಸಿನಿಮಾದಲ್ಲಿದ್ದಾರೆ. ತ್ರಿಶೂಲ್ ಶೆಟ್ಟಿ ನಿರ್ದೇಶಿಸಿರುವ ಸಿನಿಮಾಕ್ಕೆ ಛಾಯಾಗ್ರಾಹಣ ಮಯೂರ್ ಆರ್ ಶೆಟ್ಟಿ, ಸಂಗೀತ ಕಿಶೋರ್ ಕುಮಾರ್ ಶೆಟ್ಟಿ, ಸಂಭಾಷಣೆ ಡಿಬಿಸಿ ಶೇಖರ್, ಕಲಾ ನಿರ್ದೇಶನ ಹರೀಶ್ ನಾಯಕ್, ಸಂಕಲನ ಗಣೇಶ್ ನಿರ್ಚೇಲ್, ಪಬ್ಲಿಸಿಟಿ ಡಿಸೈನರ್ ದೇವಿ ರೈ, ಸಾಹಸ ಚಂದ್ರು ಬಂಡೆ, ನೃತ್ಯ ದೀಕ್ಷಿತ್ ಕುಮಾರ್ ಮತ್ತು ನವೀನ್ ಇದ್ದಾರೆ. ಇದೇ ಭಾನುವಾರ ಗಣ್ಯರ ಉಪಸ್ಥಿತಿಯಲ್ಲಿ “ಕಂಕನಾಡಿ” ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ ನೆರವೇರಲಿದೆ.
