ಮಂಗಳೂರಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಗಳಿಸಿ ಅತ್ಯುನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಸ್ಥಾಪಕಾಧ್ಯಕ್ಷ ಕೆ. ಬಿ. ಜಯಪಾಲ ಶೆಟ್ಟಿ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭವು ದಿನಾ0ಕ 01.09.2024ರ0ದು ಮ0ಗಳೂರಿನ ಉರ್ವ ಸೆಂಟನರಿ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಐ.ಎಸ್.ಆರ್ ಅಂಡ್ ಸಿ.ಆರ್.ಎಲ್ನ ಉಪಾದ್ಯಕ್ಷರು ಹಾಗೂ ಮಾಜಿ ಉಪಕುಲಪತಿಗಳಾಗಿರುವ ಪೆÇ್ರ. ಡಾ| ಸತೀಶ್ ಕುಮಾರ್ ಭಂಡಾರಿಯವರು ಪಾಲ್ಗೊಂಡಿದ್ದು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ, ತನ್ನ 78ನೇ ವಯಸ್ಸಿನಲ್ಲಿ ಸಂಘವನ್ನು ಸ್ಥಾಪಿಸಲು ಮುಂದಾಳತ್ವ ವಹಿಸಿ ಆರಂಭಿಕ 20 ವರ್ಷಗಳ ಕಾಲ ಸಂಘವನ್ನು ಅಧ್ಯಕ್ಷರಾಗಿ ಮುಂದುವರೆಸಿ ಸಂಘದ ಬೆಳವಣಿಗೆಗೆ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟ ಸಂಘದ ಸ್ಥಾಪಕಾಧ್ಯಕ್ಷರಾದ ದಿ.ಕೆ. ಬಿ. ಜಯಪಾಲ ಶೆಟ್ಟಿಯವರ ಸಾಧನೆಗಳನ್ನು ಯುವಪೀಳಿಗೆಗೆ ಪರಿಚಯಿಸಿಕೊಟ್ಟು ಆ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿ ಉಳಿವಂತಾಗುವ ನಿಟ್ಟಿನಲ್ಲಿ ಸಂಘವು ಕಳೆದ 7 ವರ್ಷಗಳಿಂದ ಸಿಬ್ಬಂದಿಗಳ ಮಕ್ಕಳಿಗೆ ಹಾಗೂ ಕಳೆದ 2 ವರ್ಷಗಳಿಂದ ಸಂಘದ ಸರ್ವ ಸದಸ್ಯರ ಮಕ್ಕಳಿಗೆ ಕೂಡ ಈ ಪ್ರತಿಭಾ ಪುರಸ್ಕಾರವನ್ನು ಸ್ಥಾಪಕಾಧ್ಯಕ್ಷರ ಸ್ಮರಣಾರ್ಥವಾಗಿ ನೀಡುತ್ತಾ ಬಂದಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿ ಈ ಪ್ರತಿಭಾ ಪುರಸ್ಕಾರವನ್ನು ಪದವಿ ಹಾಗೂ ವೃತ್ತಿಪರ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೂಡ ವಿಸ್ತರಿಸುವುದಲ್ಲದೇ, ಸ್ಥಾಪಕಾಧ್ಯಕ್ಷ ದಿ. ಕೆ.ಬಿ. ಜಯಪಾಲ ಶೆಟ್ಟಿಯವರ ಪತ್ನಿ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿ ಮತ್ತು ಅವರ ಮಕ್ಕಳು ನಮ್ಮ ಸಂಘದಲ್ಲಿ ಸ್ಥಾಪಕಾಧ್ಯಕ್ಷರ ಹೆಸರಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ವಿಷಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿಧ್ಯಾರ್ಥಿಗಳಿಗೆ ವಿಶೇಷ ಪ್ರತಿಭಾ ಪುರಸ್ಕಾರವನ್ನು ನಮ್ಮ ಸಂಘದ ಮುಖೇನ ನೀಡಲು ಪ್ರಸ್ತಾವಿಸಿದ್ದು ಅದನ್ನು ಕೂಡ ಮುಂದಿನ ವರ್ಷದಿಂದ ಅನುಷ್ಠಾನಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉದ್ಘಾಟಕರಾದ ಪೆÇ್ರೀ. ಡಾ. ಸತೀಶ್ ಕುಮಾರ್ ಭಂಡಾರಿಯವರು, ಸಂಘದ ಸ್ಥಾಪಕಾಧ್ಯಕ್ಷರಾದ ಶ್ರೀ ಕೆ. ಬಿ. ಜಯಪಾಲ ಶೆಟ್ಟಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಊರಿನ ಅಂದಿನ ಪರಿಸ್ಥಿತಿಯಲ್ಲಿ ಕಾಲೇಜು ವ್ಯಾಸಾಂಗ ಮಾಡಿ ಇಂಜಿನಿಯರಿಂಗ್ ಪದವಿಯನ್ನು ಹೊಂದಿ, ನಾಗರಿಕ ವಿಮಾನ ಸೇವೆಯ ಕ್ಷೇತ್ರವನ್ನು ತನ್ನ ಉದ್ಯೋಗವಾಗಿ ಆಯ್ಕೆ ಮಾಡಿಕೊಂಡು ದೇಶದ ರಾಜಧಾನಿ ಅಲ್ಲದೆ, ವಿದೇಶಗಳಲ್ಲೂ ತನ್ನ ಪರಿಣತಿಯ ಛಾಪನ್ನು ಮೂಡಿಸಿ ರಾಷ್ಟ್ರಗಳ ಒಕ್ಕೂಟವಾದ ವಿಶ್ವ ಸಂಸ್ಥೆಯಿಂದ ವಿಶೇಷ ಸೇವಾ ಗೌರವಕ್ಕೆ ಪಾತ್ರರಾಗಿ ನಿವೃತ್ತಿಯ ನಂತರ ತನ್ನ ಹುಟ್ಟೂರಲ್ಲಿ ನೆಲೆಸಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸೇರಿದಂತೆ ಸಮಾಜ ಸೇವಾ ಸಂಸ್ಥೆಗಳನ್ನು ಹುಟ್ಟುಹಾಕಿ ಬೆಳೆಸಿದವರು. ಅದೇ ರೀತಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ತನ್ನ ಅನುಭವದ ಧಾರೆಯನ್ನು ಎರೆದು ಕಟ್ಟಿ ಬೆಳೆಸಿ, ಇಂದು ದಾಖಲೆಯ ವ್ಯವಹಾರವನ್ನು ಹೊಂದಿ ರಾಜ್ಯದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಮೂಡಿಬರಲು ಮೇಧಾವಿತ್ವದ ನಾಯಕತ್ವ ಗುಣವುಳ್ಳ ಸಂಘದ ಅಧ್ಯಕ್ಷರಾದ ಶ್ರೀ ಜೈರಾಜ್ ರೈಯವರಂಥಹ ವ್ಯಕ್ತಿತ್ವಗಳು ಇಂದಿನ ಯುವ ಪೀಳಿಗೆಗೆ ನಿಜಕ್ಕೂ ಅನುಕರಣೀಯ. ಇಂತಹ ಮಹಾನ್ ವ್ಯಕ್ತಿತ್ವಗಳಿಂದ ಪ್ರಭಾವಿತರಾಗಿಕೊಂಡು ವಿದ್ಯಾರ್ಥಿಗಳು ಪಠ್ಯೇತರ ವಿಷಯಗಳಲ್ಲಿ ಕುಶಲತೆಗಳನ್ನು ಪಡೆದುಕೊಂಡು ಈ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ವ್ಯಕ್ತಿತ್ವದ ಮತ್ತು ಔದ್ಯೋಗಿಕ ಬೆಳವಣಿಗೆಯನ್ನು ಹೊಂದುವುದು ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.
ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿಯವರ ಉಪಸ್ಥಿತಿಯಲ್ಲಿ ಶುಭ ಸಂದೇಶವನ್ನು ವಾಚಿಸಲಾಯಿತು. ಈ ಸಂದರ್ಭದಲ್ಲಿ ಸಂಘದಲ್ಲಿ 25 ವರ್ಷ ಸೇವೆ ಪೂರೈಸಿದ ಹಿರಿಯ ವ್ಯವಸ್ಥಾಪಕರಾದ ಶ್ರೀ ದಿನೇಶ್ ರೈ ಜೆ. ಎನ್. ರವರನ್ನು ಅಭಿನಂದಿಸಲಾಯಿತು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಂಘದ ಸಿಬ್ಬಂದಿಗಳ ಮತ್ತು ಸದಸ್ಯರ ಒಟ್ಟು 64 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಾಯಿತು. ಸಂಘದ ನಿರ್ದೇಶಕರಾದ ಶ್ರೀ ವಿಠಲ ಪಿ. ಶೆಟ್ಟಿ, ಶ್ರೀ ಯಂ ರಾಮಯ ಶೆಟ್ಟಿ, ಶ್ರೀ ಅರುಣ್ ಕುಮಾರ್ ಶೆಟ್ಟಿ, ಶ್ರೀ ಪಿ. ಬಿ. ದಿವಾಕರ ರೈ, ಶ್ರೀ ಕುಂಬ್ರ ದಯಾಕರ ಆಳ್ವ ಮತ್ತು ಅರಿಯಡ್ಕ ಚಿಕ್ಕಪ್ಪ ನಾೈಕ್, ಮಹಾಪ್ರಬಂಧಕರಾದ ಶ್ರೀ ಗಣೇಶ್ ಜಿ.ಕೆ.ರವರು ಮತ್ತು ಮಕ್ಕಳ ಹೆತ್ತವರಾದ ಸಂಘದ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ರೀ ಪ್ರಸಾದ್ ಕೌಶಲ್ ಶೆಟ್ಟಿಯವರು ಉದ್ಘಾಟಕರ ವ್ಯಕ್ತಿ ಪರಿಚಯವನ್ನು ಮಾಡಿದರು.
ನಿರ್ದೇಶಕರಾದ ಶ್ರೀ ಪಿ. ಬಿ. ದಿವಾಕರ ರೈಯವರು ಧನ್ಯವಾದ ಸಮರ್ಪಿಸಿದರು. ಸನ್ಮಾನಿತ ಸಿಬ್ಬಂದಿ ಶ್ರೀ ದಿನೇಶ್ ರೈ ಯವರು, ವಿದ್ಯಾರ್ಥಿಗಳಾದ ಅಭಿಶೇಕ್ ಶೆಟ್ಟಿ, ಸಮನ್ಯು ಎಸ್. ಶೆಟ್ಟಿ ಮತ್ತು ಭಾಗ್ಯಲಕ್ಷ್ಮಿ ಶೆಟ್ಟಿ ಯವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸಿಬ್ಬಂದಿಗಳಾದ ಶ್ರೀಲಕ್ಷ್ಮಿ, ಸೌಮ್ಯ ರಾಣಿ ಮತ್ತು ಸನಿಹ ಶೆಟ್ಟಿಯವರು ಪ್ರಾರ್ಥಿಸಿದರು, ಶ್ರೀ ಧನಂಜಯ್ ಕುಮಾರ್ ಮತ್ತು ಶ್ರೀಮತಿ ಅಕ್ಷತಾ ಕುಮಾರಿಯವರು ಕಾರ್ಯಕ್ರಮ ನಿರೂಪಿಸಿದರು.