ಏರ್ ಪೋರ್ಟ್ಸ್ ಎವಿಯೇಶನ್ ಎಂಪ್ಲಾಯೀಸ್ ಯೂನಿಯನ್ (ಎಎಇಯು) ಮುಂಬಯಿ ಇದರ ಸಂಘಟನಾ ಕಾರ್ಯದರ್ಶಿಯಾಗಿ ಕಳತ್ತೂರು ವಿಶ್ವನಾಥ್ ಜಗನ್ನಾಥ್ ಶೆಟ್ಟಿ ಅವರನ್ನು ನೇಮಿಸಲು ಕೋರ್ ಕೆಮಿಟಿಯು ನಿರ್ಧರಿಸಿದೆ. ಈ ನೇಮಕಾತಿಯು ಎಎಇಯು ಅವಧಿಯದ್ದಾಗಿರುತ್ತದೆ.
ನಾವು ಈ ವಿಷಯವನ್ನು ತಿಳಿಸಲು ತುಂಬಾ ಸಂತೋಷಪಡುತ್ತಿದ್ದೇವೆ. ನೀವು ನಿಮ್ಮ ಕೌಶಲ್ಯ ಮತ್ತು ಅನುಭವದೊಂದಿಗೆ, ನೀವು ಅತ್ಯುತ್ತಮ ಸೇವೆಯನ್ನು ಸಲಿಸುತ್ತೀರಿ ಮತ್ತು ನಮ್ಮ ಎಎಇಯು ಸಂಸ್ಥೆಯಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತೀರಿ ಎಂದು ನಾವು ನಂಬುತ್ತೇವೆ. ಸಂಘಟನಾ ಕಾರ್ಯದರ್ಶಿಯಾಗಿ ನಾವು ನಿಮ್ಮನ್ನು ಎಎಇಯು ಕುಟುಂಬದಲ್ಲಿ ಸ್ವಾಗತಿಸುತ್ತೇವೆ ಮತ್ತು ನಿಮ್ಮ ಮುಂದಿನ ಪ್ರಯತ್ನಕ್ಕಾಗಿ ನಿಮಗೆ ಶುಭ ಹಾರೈಸುತ್ತೇವೆ ಎಂದು ಸಂಸ್ಥೆಯ ಅಖಿಲ ಭಾರತ ಅಧ್ಯಕ್ಷರಾದ ನಿತಿನ್ ಜಾಧವ್ ಹಾಗೂ ಪ್ರಧಾನ ಕಾರ್ಯದರ್ಶಿ ಸರ್ವಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.