ಆರೋಗ್ಯ ಚೆನ್ನಾಗಿದ್ದರೆ ಎಲ್ಲವೂ ಇದ್ದಂತೆ. ಹಣ ಆಸ್ತಿ ಸಂಪಾದನೆಕ್ಕಿಂತ ಆರೋಗ್ಯವಂತರಾಗಿ ಬದುಕುವುದೇ ದೊಡ್ಡ ಸಂಪತ್ತು. ಅದಕ್ಕಿಂತ ಮಿಗಿಲಾದದು ಇನ್ನೊಂದಿಲ್ಲ ಎಂದು ಶತಾಯುಶಿ ಹುತ್ರುರ್ಕೆ ಪುಟ್ಟಣ್ಣ ಶೆಟ್ಟಿ ಹೇಳಿದರು. ಅವರು ನವೆಂಬರ್ 5 ರಂದು ಹೆಬ್ರಿ ಅಜೆಕಾರು ವಲಯ ಬಂಟರ ಸಂಘದ ನೇತೃತ್ವದಲ್ಲಿ ಹಿರಿಯ ಬಂಟರ ಬಾಂಧವ್ಯ ಕಾರ್ಯಕ್ರಮದ ಅಡಿಯಲ್ಲಿ ಹೆಬ್ರಿ ಹುತ್ತುರ್ಕೆ ಅವರ ನಿವಾಸದಲ್ಲಿ ಬಂಟರ ಸಂಘದ ವತಿಯಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಹಿರಿಯರನ್ನು ಪ್ರೀತಿಯಿಂದ ಗೌರವಿಸಿ : ನಮ್ಮಮನೆಯಲ್ಲಿರುವ ತಂದೆ, ತಾಯಿ, ಅಜ್ಜ, ಅಜ್ಜಿಯಂದಿರನ್ನು ಪ್ರೀತಿಯಿಂದ ಮಾತನಾಡಿಸುವುದರ ಜತೆ ಗೌರವಿಸಿ. ಅದಕ್ಕಿಂತ ದೊಡ್ಡ ಕೊಡುಗೆ ಇನ್ನೊಂದಿಲ್ಲ. ತಮ್ಮಮಕ್ಕಳು ಮೊಮ್ಮಕ್ಕಳಿಂದ ಹಿರಿಯರು ಅಪೇಕ್ಷೆ ಪಡುವುದು ಇಷ್ಟೇ. ಈ ನಿಟ್ಟಿನಲ್ಲಿ ಹೆಬ್ರಿ ಬಂಟರ ಸಂಘದಿಂದ ಪ್ರತಿ ತಿಂಗಳ ಮೊದಲ ಭಾನುವಾರ ಸಂಘದ ವ್ಯಾಪ್ತಿಯ ಹಿರಿಯ ಬಂಟರ ಮನೆಗೆ ತೆರಳಿ ಅವರೊಂದಿಗೆ ಪ್ರೀತಿಯಿಂದ ಮಾತನಾಡಿಸಿ ಗೌರವಿಸುವ ಹಿರಿಯ ಬಂಟರ ಬಾಂದವ್ಯ ಕಾರ್ಯಕ್ರಮ ಇದಾಗಿದೆ ಎಂದು ಹೆಬ್ರಿ ಅಜೆಕಾರು ವಲಯ ಬಂಟರ ಸಂಘದ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಹೇಳಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಬಿ. ಹರ್ಷ ಶೆಟ್ಟಿ, ಆಶಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನ್ ಅಡ್ಯಂತಾಯ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ, ಕ್ರೀಡಾ ಸಮಿತಿ ಸಂಚಾಲಕ ಸುಕೇಶ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಉದಯಕುಮಾರ್ ಶೆಟ್ಟಿ, ರಮಣಿ ಶೆಟ್ಟಿ, ಆನಂದ ಶೆಟ್ಟಿ, ಶಾರದ ಶೆಟ್ಟಿ, ರೇಷ್ಮಾ ಶೆಟ್ಟಿ, ಸಚಿನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.