ವಿಶ್ವ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ವಿಶ್ವ ಬಂಟ ಸಮ್ಮೇಳನದ ಸಮಾರೋಪ ಸಮಾರಂಭ ಅಮ್ಮಣ್ಣಿ ರಾಮಣ್ಣ ತೆರೆದ ಮೈದಾನದಲ್ಲಿನ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ರವಿವಾರ ಸಂಜೆ ನೆರವೇರಿತು.
ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “ನಾನು ಬಹಳ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆಡು ಮುಟ್ಟದ ಸೊಪ್ಪಿಲ್ಲ, ಬಂಟರು ಮುಟ್ಟದ ಕ್ಷೇತ್ರವೇ ಇಲ್ಲ. ಕೈಗಾರಿಕೋದ್ಯಮ, ಬ್ಯಾಂಕಿಂಗ್ ಕ್ಷೇತ್ರ, ಸಿನಿಮಾ, ಕಲೆ, ಕೃಷಿ, ಹೋಟೆಲ್ ಹೀಗೆ ಎಲ್ಲದರಲ್ಲೂ ಬಂಟರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಮ್ಮ ದೇಶಕ್ಕೆ ಕೀರ್ತಿಯನ್ನು ತಂದವರು ಬಂಟರು. ಅವರನ್ನು ಎಷ್ಟು ಹೊಗಳಿದರೂ ಅತಿಶಯವಾಗಲಾರದು. ಎಲ್ಲರನ್ನು ಪ್ರೀತಿಸಿ ಗೌರವಿಸುವ ಬಂಟರ ಸಮ್ಮೇಳನ ಯಶಸ್ವಿಯಾಗಲಿ” ಎಂದರು. “ಮಂಗಳೂರು ಬೆಂಗಳೂರು ಕಾರಿಡಾರ್ ಆದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ವೇಗವಾಗಿ ಅಭಿವೃದ್ಧಿಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಟ ನಿಗಮ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತಿದ್ದೇವೆ. ಪ್ರಣಾಳಿಕೆಯಲ್ಲಿನ ಎಲ್ಲಾ ಭರವಸೆಗಳನ್ನು ಈ 5 ವರ್ಷಗಳಲ್ಲಿ ಖಂಡಿತ ಈಡೇರಿಸುತ್ತೇವೆ” ಎಂದು ಭರವಸೆ ನೀಡಿದರು.
ಬಳಿಕ ಮಾತಾಡಿದ “ಕಾಂತಾರ” ಖ್ಯಾತಿಯ ನಟ ರಿಷಭ್ ಶೆಟ್ಟಿ ಅವರು, “ಬಂಟರ ಸಮಾಜದಿಂದ ಸಮುದಾಯದ ಎಲ್ಲರಿಗೂ ಒಳಿತಾಗಲಿ. ಕಾಂತಾರ ಒಂದನೇ ಪಾರ್ಟ್ ಬರಲಿದ್ದು ಅದರ ಚಿತ್ರೀಕರಣದಲ್ಲಿ ಮುಂದೆ ಬ್ಯುಸಿಯಾಗಲಿದ್ದೇನೆ. ಎಲ್ಲರೂ ಇದೇ ರೀತಿ ಪ್ರೀತಿ ವಿಶ್ವಾಸ ತೋರಿಸಿ” ಎಂದರು.
ಬಂಜಾರ ಗ್ರೂಪ್ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, “ಬಂಟರ ಸಮಾಜ ಬೇರೆ ಸಮುದಾಯದ ಜನರನ್ನು ಕೂಡ ತಮ್ಮವರೆಂದುಕೊಂಡು ಜೊತೆಗೆ ಕರೆದುಕೊಂಡು ಹೋಗುತ್ತಿದೆ. ಬಂಟರ ಕಲೆ, ಸಾಂಸ್ಕೃತಿಕ ಶ್ರೀಮಂತಿಕೆ ಅನನ್ಯವಾದುದು. ಬಂಟರು ಈ ಮೂಲಕ ಸಮಾಜದ ಇತರರಿಗೆ ಮಾದರಿಯಾಗಿದ್ದಾರೆ. ಬಂಟ ಸಮಾಜದ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ಸಂಘಟನೆ ಇನ್ನಷ್ಟು ಕಾರ್ಯಕ್ರಮ ರೂಪಿಸಬೇಕು. ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಅಭಿನಂದನೆಗಳು” ಎಂದರು.
ವೇದಿಕೆಯಲ್ಲಿ ರಾಜ್ಯ ಗೃಹಸಚಿವ ಡಾ.ಜಿ. ಪರಮೇಶ್ವರ್, ಹೇರಂಬ ಇಂಡಸ್ಟ್ರಿಸ್ ಸಿಎಂಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಖ್ಯಾತ ನಟ ರಿಷಭ್ ಶೆಟ್ಟಿ, ಬಂಜಾರ ಗ್ರೂಪ್ ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ, ಎಂಎಲ್ ಸಿ ಮಂಜುನಾಥ್ ಭಂಡಾರಿ, ಉದ್ಯಮಿ ಡಾ.ಎ.ಸದಾನಂದ ಶೆಟ್ಟಿ, ನಟ ರಿಷಭ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಮಾಜಿ ಸಚಿವ ರಮಾನಾಥ್ ರೈ, ಉದ್ಯಮಿ ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಉಡುಪಿ ಎಸ್ಪಿ ಅರುಣ್ ಕುಮಾರ್, ಕೃಷ್ಣ ವೈ. ಶೆಟ್ಟಿ, ಆರ್. ಉಪೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಜಯರಾಮ್ ಎನ್. ಶೆಟ್ಟಿ, ಭರತ್ ಎಂ. ಶೆಟ್ಟಿ, ಸದಾನಂದ ಶೆಟ್ಟಿ, ಆನಂದ ಎಂ. ಶೆಟ್ಟಿ ರಾಜಧಾನಿ, ಶಾಂತರಾಮ ಕೆ. ಶೆಟ್ಟಿ, ಅಜಿತ್ ಕೆ. ಹೆಗ್ಡೆ, ದಿನಕರ್ ಎನ್. ಶೆಟ್ಟಿ, ಸಂತೋಷ್ ಶೆಟ್ಟಿ, ವಿಶ್ವನಾಥ್ ಎಸ್. ಶೆಟ್ಟಿ, ಸಿಎ. ಸದಾಶಿವ ಶೆಟ್ಟಿ, ಅಶೋಕ್ ವಿಠಲ್ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ವೇಣುಗೋಪಾಲ್ ಎಲ್. ಶೆಟ್ಟಿ, ಹರೀಶ್ ಎಸ್. ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ಬಾಲಚಂದ್ರ ಶೆಟ್ಟಿ ಎರ್ಮಾಳ್, ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ, ಪುರುಷೋತ್ತಮ ಪಿ. ಶೆಟ್ಟಿ, ವಸಂತ್ ಎನ್. ಶೆಟ್ಟಿ ಪಲಿಮಾರ್, ವಾಸು ಕೆ. ಶೆಟ್ಟಿ, ಅಜಿತ್ ಶೆಟ್ಟಿ ಅಂಕಲೇಶ್ವರ, ಸತೀಶ್ ಎನ್. ಶೆಟ್ಟಿ, ಅನಸೂಯ ಎಸ್. ರೈ ಬೆಳೆಯೂರು ಗುತ್ತು, ಎಂ. ನಾಗೇಶ್ ಹೆಗ್ಡೆ, ಗಣೇಶ್ ಹೆಗ್ಡೆ ಮಣೆ, ತ್ಯಾಗರಾಜ್ ಶೆಟ್ಟಿ, ನಾರಾಯಣ ಕೆ. ಶೆಟ್ಟಿ ಎರ್ಮಾಳ್, ಲೋಕೇಶ್ ಶೆಟ್ಟಿ ಕೆ., ಪದ್ಮನಾಭ ಎಸ್. ಪಯ್ಯಡೆ, ಸುಧಾಕರ ಎಸ್. ಹೆಗ್ಡೆ, ಸವಣೂರು ಸೀತಾರಾಮ ರೈ, ಹರೀಶ್ ಶೆಟ್ಟಿ ಗುರ್ಮೆ, ರವೀಂದ್ರ ಅರಸ, ಕರುಣಾಕರ ಆರ್. ಶೆಟ್ಟಿ, ಶಶಿಧರ ಶೆಟ್ಟಿ ಮಲ್ಲಾರ್, ರತ್ನಾ ಪಿ. ಶೆಟ್ಟಿ, ರಜನಿ ಸುಧಾಕರ್ ಹೆಗ್ಡೆ, ಸಂಜೀವ ಎನ್. ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ಪ್ರಭಾಕರ್ ಜೆ. ಶೆಟ್ಟಿ, ಡಾ.ಎಂ.ಶಾಂತಾರಾಮ ಶೆಟ್ಟಿ, ಹರೀಶ್ ಪಾಂಡು ಶೆಟ್ಟಿ, ಟಿ. ಪ್ರಭಾಕರ್ ಶೆಟ್ಟಿ ಮೈಸೂರು, ಸುಧಾಕರ ಶೆಟ್ಟಿ, ವಿಶ್ವನಾಥ ಪಿ. ಶೆಟ್ಟಿ, ರವಿ ಎಸ್. ಶೆಟ್ಟಿ, ರವೀಂದ್ರನಾಥ ಭಂಡಾರಿ, ಚಂದ್ರಹಾಸ ಶೆಟ್ಟಿ ಎರ್ಮಾಳ್, ಸುಬ್ಬಯ್ಯ ಎ. ಶೆಟ್ಟಿ ಸೂರಿಂಜೆ, ರಾಕೇಶ್ ಎ. ಶೆಟ್ಟಿ ಬೆಳ್ಳಾರೆ, ಲಯನ್ ಎ. ಸುರೇಶ್ ರೈ, ದಿವಾಕರ್ ಶೆಟ್ಟಿ ಮಲ್ಲಾರ್, ಮನೋರಮಾ ಎನ್.ಬಿ. ಶೆಟ್ಟಿ, ಅನಿತಾ ಅಶೋಕ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಆದರ್ಶ ಶರತ್ ಶೆಟ್ಟಿ, ಬಾಬು ಶೆಟ್ಟಿ ಪೆರಾರ, ಸತೀಶ್ ಆರ್ ಶೆಟ್ಟಿ ಮಣೆ, ಜಯಶೀಲ ಶೆಟ್ಟಿ ಘಟಪ್ರಭ, ಅಶೋಕ್ ಕುಮಾರ್ ಶೆಟ್ಟಿ, ಚಂದ್ರಶೇಖರ ಎಸ್ ಶೆಟ್ಟಿ, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಸುಧೀರ್ ಶೆಟ್ಟಿ, ನಿಖಿಲ್ ಭಂಡಾರಿ, ಸಂತೋಷ್ ಶೆಟ್ಟಿ ಹೋಟೆಲ್ ಪಲ್ಲವಿ, ಸುಧಾಕರ್ ಪೂಂಜಾ, ರವಿ ಶೆಟ್ಟಿ ಕತಾರ್, ಪ್ರದೀಪ್ ಎಸ್ ಶೆಟ್ಟಿ, ಲತಾ ಪಿ. ಶೆಟ್ಟಿ, ರಮಾ ವಿವೇಕ್ ಶೆಟ್ಟಿ, ಮಹೇಶ್ ಶೆಟ್ಟಿ ಧಾರವಾಡ, ಡಾ. ಎ. ಜೆ. ಶೆಟ್ಟಿ, ಡಾ. ಪಿ. ವಿ. ಶೆಟ್ಟಿ, ಕುಶಾಲ್ ಹೆಗ್ಡೆ ಮಣೆ, ನವೀನ್ಚಂದ್ರ ಜೆ. ಶೆಟ್ಟಿ, ಪಡುಬಿದ್ರಿ, ಪಾಂಡುರಂಗ ಶೆಟ್ಟಿ, ಶಿವರಾಮ್ ಬಿ. ಶೆಟ್ಟಿ, ಜೆ. ಪಿ. ಶೆಟ್ಟಿ, ಜಗನ್ನಾಥ್ ರೈ, ಮಂಜುನಾಥ ಶೆಟ್ಟಿ ಕೊಡ್ಲಾಡಿ, ರವಿ ಆರ್. ಶೆಟ್ಟಿ, ಭಾಸ್ಕರ್ ಶೆಟ್ಟಿ ಖಾಂದೇಶ್, ಸುಧಾಕರ್ ಶೆಟ್ಟಿ ಸುಗ್ಗಿ, ಶಿವರಾಮ್ ಶೆಟ್ಟಿ ಸತ್ಕಾರ್, ಬಿ. ಉದಯ ಕುಮಾರ್ ಶೆಟ್ಟಿ, ಆರೂರು ಶ್ರೀಧರ್ ವಿ. ಶೆಟ್ಟಿ, ಮೂಡುಶೆಡ್ಡೆ ವಿಶ್ವನಾಥ್ ಶೆಟ್ಟಿ, ವಿಜಯ ಆರ್. ಭಂಡಾರಿ, ದಿನೇಶ್ ಶೆಟ್ಟಿ ಇನ್ನ, ಶಾಂತಾರಾಮ ಬಿ. ಶೆಟ್ಟಿ, ಜಯರಾಮ ಎಂ. ಶೆಟ್ಟಿ, ಜಗನ್ನಾಥ ಚೌಟ, ಸುಧಾಕರ್ ಶೆಟ್ಟಿ ಹುಂತ್ರಿಕೆ, ದಯಾನಂದ ಶೆಟ್ಟಿ ಆದ್ರೆ , ಚಿತ್ರಾ ಆರ್. ಶೆಟ್ಟಿ, ಲತಾ ಜಯರಾಮ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ, ಕ್ರೀಡಾ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್ , ಸಹ ಸಂಚಾಲಕ ಡಾ.ರೋಶನ್ ಕುಮಾರ್ ಶೆಟ್ಟಿ, ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಸಹ ಸಂಚಾಲಕ ಕರ್ನೂರು ಮೋಹನ್ ರೈ, ಸಂಯೋಜಕರಾದ ಸುಪ್ರಸಾದ್ ಶೆಟ್ಟಿ ಬೈಕಾಡಿ, ಮೋಹನ್ ಶೆಟ್ಟಿ ಉಡುಪಿ ಮತ್ತಿತರರು ಉಪಸ್ಥಿತರಿದ್ದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಅತಿಥಿಗಳನ್ನು ಸ್ವಾಗತಿಸಿ ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.