ಗುಣಮಟ್ಟ ಶುದ್ಧತೆ ಹಾಗೂ ಆರೋಗ್ಯಕರ ಕೋಳಿ ಮಾಂಸಕ್ಕೆ ಹೆಸರಾಗಿರುವ ಲೈಫ್ ಲೈನ್ಸ್ ಟೆಂಡರ್ ಚಿಕನ್ ನ 43 ನೇ ಶಾಖೆ ಮಂಗಳೂರಿನ ಯೆಯ್ಯಾಡಿ ಜಂಕ್ಷನ್ ನಲ್ಲಿ ಆರಂಭಗೊಂಡಿತು. ಮಳಿಗೆಯನ್ನು ಉದ್ಘಾಟಿಸಿದ ಭಾರತ್ ಬೀಡಿ ವರ್ಕ್ಸ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಸುಬ್ರಾಯ ಎಂ. ಪೈ ಮಾತನಾಡಿ, ಲೈಫ್ ಲೈನ್ಸ್ ಚಿಕನ್ ಆರೋಗ್ಯದ ಕೋಳಿ ಮಾಂಸವನ್ನು ವಿತರಿಸಿ ಜನ ಮೆಚ್ಚುಗೆ ಗಳಿಸಿದೆ. ಕರಾವಳಿ ಮೂಲದ ಕಿಶೋರ್ ಕುಮಾರ್ ಹೆಗ್ಡೆ ಚಿಕ್ಕಮಗಳೂರಿನಲ್ಲಿ ಉದ್ಯಮ ಆರಂಭಿಸಿ ಯಶಸ್ಸು ಗಳಿಸಿದ್ದಾರೆ. ಇದೀಗ ಹುಟ್ಟೂರಿನಲ್ಲಿಯೂ ಮಳಿಗೆ ಆರಂಭಿಸಿ ಜನತೆಗೆ ಆರೋಗ್ಯಕರ ಕೋಳಿ ಮಾಂಸ ವಿತರಣೆಗೆ ಮುಂದಾಗಿದ್ದಾರೆ. ಜನತೆ ಅವರನ್ನು ಪ್ರೋತ್ಸಾಹಿಸಲಿದ್ದಾರೆ ಎಂದು ಶುಭ ಹಾರೈಸಿದರು.
ಲೈಫ್ ಲೈನ್ಸ್ ಫೀಡ್ಸ್(ಇಂಡಿಯಾ) ಪೈ.ಲಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೆ.ಕಿಶೋರ್ ಕುಮಾರ್ ಹೆಗ್ಡೆ ಮಾತನಾಡಿ, ಬೆಂಗಳೂರು, ಹಾಸನ, ಕೊಡಗು,ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರಿನಲ್ಲಿ ಶಾಖೆ ಇದ್ದು ಕೊಲ್ಕತ್ತಾ, ಗೋವಾ, ಕೇರಳ, ಭೂತಾನ್ ಸೇರಿದಂತೆ ದೇಶದ ಹಲವೆಡೆ ಲೈಫ್ ಲೈನ್ ಚಿಕನ್ ಒದಗಿಸಲಾಗುತ್ತಿದೆ. ಭೂತಾನ್ ನಲ್ಲಿರುವ ರಾಯಲ್ ಅರ್ಮಿಗೆ 5 ವರ್ಷಗಳಿಂದ ಲೈಫ್ ಲೈನ್ ಕೋಳಿ ಮಾಂಸವೇ ಪೂರೈಕೆಯಾಗುತ್ತಿದೆ. ಸ್ನೇಹಿತರು, ಕುಟುಂಬಸ್ಥರ ಆಗ್ರಹದಂತೆ ಮಂಗಳೂರಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇನೆ. ಮುಂದೆ ಬೇಡಿಕೆಗೆ ಅನುಗುಣವಾಗಿ ಮಳಿಗೆ ತೆರೆಯಲಾಗುವುದು ಎಂದರು. ಗುಣಮಟ್ಟದ ಕೋಳಿ ಮಾಂಸ ವಿತರಣೆಯೇ ಲೈಫ್ ಲೈನ್ ಸಂಸ್ಥೆಯ ಮೂಲ ಧ್ಯೇಯ. ಸಂಸ್ಥೆಯಲ್ಲಿ ಒಂದೂವರೆ ಸಾವಿರ ಸಿಬ್ಬಂದಿಗಳು ಉತ್ತಮ ತರಬೇತಿ ಹೊಂದಿರುವರಾಗಿದ್ದಾರೆ ಎಂದು ತಿಳಿಸಿದರು.
ಸಹಾಯಕ ಪ್ರಧಾನ ವ್ಯವಸ್ಥಾಪಕ ಶರತ್ ಮಾತನಾಡಿ, ಲೈಫ್ ಲೈನ್ ಫೀಡ್ಸ್ – ಕೋಳಿ ಆಹಾರದ ಸ್ವಂತ ಘಟಕ ಇರುವುದರಿಂದ ಕೋಳಿಗಳಿಗೆ ಗುಣಮಟ್ಟದ ಆಹಾರವನ್ನು ನೀಡುತ್ತಿದ್ದೇವೆ. ಪೌಷ್ಟಿಕಾಂಶಯುಕ್ತ ಆಹಾರ ನೀಡುವುದರಿಂದ ರುಚಿಕರ ಹಾಗೂ ಅರೋಗ್ಯಕರ ಮಾಂಸ ಪಡೆಯಲು ಸಾಧ್ಯವಾಗುತ್ತದೆ. ವಿಟಮಿನ್ ಹಾಗೂ ಪ್ರೊಟೀನ್ ಅಂಶ ಹೆಚ್ಚಿರುವ ಕಾರಣ ಗುಣಮಟ್ಟದ ಮಾಂಸ ಪಡೆಯಲು ಸಾಧ್ಯವಾಗಿದೆ ಎಂದರು.
ನಿರ್ದೇಶಕರಾದ ಅರ್ಜುನ್ ಹೆಗ್ಡೆ, ನಂದನ್ ಹೆಗ್ಡೆ, ಶ್ಯಾಮ್ ಸುಂದರ್, ಕಟ್ಟಡ ಮಾಲಕ ಸತೀಶ್ ಕೆ. ಶ್ರೀಯಾನ್, ಸುಬ್ರಮಣ್ಯ ಭಟ್,ಮಾಜಿ ಮೇಯರ್ ಗಳಾದ ಪ್ರೇಮಾನಂದ ಶೆಟ್ಟಿ, ಶಶಿಧರ್ ಹೆಗ್ಡೆ, ಪ್ರಮುಖರಾದ ಅಜಿತ್ ಕುಮಾರ್ ರೈ ಮಾಲಾಡಿ, ಜಯಶೀಲ ಅಡ್ಯಾಂತಾಯ ಉಪಸ್ಥಿತರಿದ್ದರು.