ತುಳುನಾಡ ರಕ್ಷಣಾ ವೇದಿಕೆ ಕಾಪು ವಲಯದ ಮಹಿಳಾ ಘಟಕವನ್ನು ಹಿರಿಯಡ್ಕದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿಯವರು ಮಾತನಾಡುತ್ತಾ, ಪ್ರಸ್ತುತ ಜಾತಿ ಧರ್ಮ, ಪಕ್ಷ ಎನ್ನುವುದರ ಬಗ್ಗೆಯೆ ಹೋರಾಡುತ್ತೇವೆ ವಿನಃ ಪ್ರಾದೇಶಿಕವಾಗಿ ಒಂದಾಗುವಲ್ಲಿ ವಿಫಲರಾಗುತ್ತಿದ್ದೇವೆ ಅದ್ದರಿಂದ ನಮ್ಮ ತುಳುನಾಡು ರಕ್ಷಣಾ ವೇದಿಕೆ ತುಳುವರ ನೆಲ ಜನ ಹಾಗೂ ಸಂಸ್ಕತಿ ಉಳಿವಿಗಾಗಿ ಕಟಿಬದ್ಧವಾಗಿದೆ. ನಮ್ಮೂರಿನಲ್ಲಿರುವ ಬ್ಯಾಂಕುಗಳಲ್ಲಿ, ಕೈಗಾರಿಕಾ ಕ್ಷೇತ್ರದಲ್ಲಿ ನಮ್ಮವರಿಗೆ ಅವಕಾಶ ಸಿಗಬೇಕು ಆಗ ಮಾತ್ರ ನಮ್ಮ ಪ್ರಾದೇಶಿಕತೆ ಉಳಿಯುತ್ತದೆ. ಇಲ್ಲದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ತುಂಬಾ ತೊಂದರೆಯನ್ನು ಅನುಭವಿಸಬೇಕಾತ್ತದೆ. ಈ ನಿಟ್ಟಿನಲ್ಲಿ ಮಾತೆಯರು ಒಂದಾಗಬೇಕು ಅನ್ನುವ ಕಿವಿಮಾತನ್ನು ಹೇಳಿದರು.
ವೇದಿಕೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿ.ಸೋಜಾ, ಕೇಂದ್ರ ತುಳುನಾಡ ರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್, ಪಂಚಾಯತ್ ಸದಸ್ಯರಾದ ಲತಾ, ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ತಾಲೂಕು ಗೌರವಾಧ್ಯಕ್ಷರಾದ ರವಿ ಆಚಾರ್, ತು.ರ.ವೆ. ಉಡುಪಿ ತಾಲೂಕು ಅಧ್ಯಕ್ಷರಾದ ಕೃಷ್ಣ ಕುಮಾರ್, ತು.ರ.ವೇ.ಉಡುಪಿ ತಾಲೂಕು ಪ್ರದಾನ ಕಾರ್ಯದರ್ಶಿ ನಾಗಲಕ್ಷ್ಮಿ, ತು.ರ.ವೇ. ಉಡುಪಿ ತಾಲೂಕು ಯುವ ಘಟಕದ ಅಧ್ಯಕ್ಷರಾದ ರಾಹುಲ್, ಸಾಮಾಜಿಕ ಕಾರ್ಯಕರ್ತ ರೋಶನ್ ಬಲ್ಲಾಳ್, ನಿತಿನ್ ಉಪಸ್ಥಿತರಿದ್ದರು. ಕುಮಾರಿ ದೀಪ್ತಿ ಪ್ರಾರ್ಥಿಸಿದರು. ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದ ನೂತನ ಅಧ್ಯಕ್ಷರಾದ ಅನಸೂಯಾ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದರು. ನೂತನ ಪ್ರದಾನ ಕಾರ್ಯದರ್ಶಿ ಸರೋಜಿನಿ ಶೆಟ್ಟಿ ಧನ್ಯವಾದ ನೀಡಿದರು. ಇದೇ ಸಂದರ್ಭದಲ್ಲಿ ನೂತನ ಮಹಿಳಾ ಘಟಕದ ವತಿಯಿಂದ ಯೋಗೀಶ್ ಶೆಟ್ಟಿ ಜೆಪ್ಪು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ನೂತನ ಪದಾಧಿಕಾರಿಗಳಾದ ಸವಿತ ನಾಯಕ್, ಮಮತಾ ನಾಯಕ್, ಜಯಲಕ್ಷ್ಮಿ ಹೆಗ್ಡೆ, ಜ್ಯೋತಿ ಶೆಟ್ಟಿ, ನಿಶ್ಮಿತ ಶೆಟ್ಟಿ, ಕೀರ್ತಿ ಶೆಟ್ಟಿ, ಸುದೀಷ್ಣ ಉಪಸ್ಥಿತರಿದ್ದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.