ಯಾವುದೇ ಕ್ರೀಡಾ ಸಾಧನೆಗೆ ತರಬೇತಿ ಅತ್ಯಗತ್ಯವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಿಪಿಸಬೇಕು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಹಾಗೂ ನಿವೃತ ಕಸ್ಟಮ್ಸ್ ಸೂಪರಿಂಟೆಂಡೆಂಟ್ ರೋಹಿತ್ ಹೆಗ್ಡೆ ಎರ್ಮಾಳು ಹೇಳಿದರು. ಅದಮಾರು ಮೂಡುಬೆಟ್ಟು ಬರ್ಪಾಣಿ ಜಗನ್ನಾಥ ಶೆಟ್ಟಿ ಮನೆ ಬಳಿ ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ಫೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ, ಯುವ ಬಂಟರ ವಿಭಾಗ ಮತ್ತು ಬಂಟರ ಕ್ರೀಡಾ ವಿಭಾಗಗಳ ಆಶ್ರಯದಲ್ಲಿ ನಡೆದ ಕೆಸರ್ದ ಗೊಬ್ಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುಣೆಯ ಉದ್ಯಮಿ, ಸಮಾಜಸೇವಕ ಪೂನಾ ಗೇಟ್ ಹೋಟೆಲ್ ನ ಸಿಎಮ್ ಡಿ ಎರ್ಮಾಳು ಪುಚ್ಚೋಟ್ಟು ಬೀಡು ಬಾಲಚಂದ್ರ ಎಲ್. ಶೆಟ್ಟಿ, ಅಸ್ಫನ್ ಎಸ್ಇಝಡ್ ಸೀನಿಯರ್ ಜನರಲ್ ಮ್ಯಾನೇಜರ್ ಅಶೋಕ್ ಶೆಟ್ಟಿ, ಬಂಟರ ಸಂಘದ ಪೂರ್ವಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ, ಉದ್ಯಮಿ ಮಿಥುನ್ ಆರ್. ಹೆಗ್ಡೆ, ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಕ್ರೀಡಾ ವಿಭಾಗದ ಸಂಚಾಲಕ ವಿನಯ ಶೆಟ್ಟಿ ಎರ್ಮಾಳು, ಜಿಪಂ ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಪಡುಬಿದ್ರಿ ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ಸಂಘಟಕ ಸಂತೋಷ್ ಜೆ. ಶೆಟ್ಟಿ ಬರ್ಪಣಿ ಮುಖ್ಯ ಅತಿಥಿಗಳಾಗಿದ್ದರು.
ಯುವ ಬಂಟರ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ ಸ್ವಾಗತಿಸಿದರು. ಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಎಸ್. ಶೆಟ್ಟಿ ವಂದಿಸಿದರು.