ಯಕ್ಷಗಾನ ಕಲಾವಿದರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಯೋಜನೆಗಳಲ್ಲಿ ಒಂದಾದ ಯಕ್ಷಾಶ್ರಯದಡಿ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯವನ್ನು ಟ್ರಸ್ಟ್ ಕಚೇರಿಯಲ್ಲಿ ವಿತರಿಸಲಾಯಿತು.
ಸುಂಕದಕಟ್ಟೆ ಮೇಳದ ಜಯೇಂದ್ರ ಕಿದೂರ್, ಸಸಿಹಿತ್ಲು ಮೇಳದ ಗುಡ್ಡಪ್ಪ ಸುವರ್ಣ ಇವರುಗಳಿಗೆ 2ನೇ ಕಂತು ಮತ್ತು ಬಪ್ಪನಾಡು ಮೇಳದ ನಾಗಪ್ಪ ಪಡುಮಲೆ ಇವರಿಗೆ ಕೊನೆಯ ಕಂತಿನ ಮೊತ್ತದ ಚೆಕ್ಕನ್ನು ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ವಿತರಿಸಿದರು.
ಈ ಸಂದರ್ಭದಲ್ಲಿ ಫೌಂಡೇಶನ್ನಿನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ, ಬಪ್ಪನಾಡು ಮೇಳದ ದಿನೇಶ್ ಕೊಡಪದವು ಜತೆಗಿದ್ದರು.