ಹೂಡಿಕೆಯ ಬಗೆಗಿನ ಜಾಗೃತಿ ಯಶಸ್ವಿ ಜೀವನದ ಪ್ರಮುಖ ಅಂಗ. ಸಕಾಲದಲ್ಲಿ ತೆಗೆದುಕೊಳ್ಳುವ ಹೂಡಿಕೆಯ ನಿರ್ಧಾರಗಳು ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಮಯವೇ ಹಣವಿದ್ದಂತೆ, ನಮ್ಮಲ್ಲಿನ ಉಳಿತಾಯ ಸರಿಯಾದ ಸಮಯದೊಂದಿಗೆ ನಷ್ಟ ಅನಿಶ್ಚಿತತೆಯನ್ನು ಎದಿರಿಸುವ ಮನೋಭಾವದೊಂದಿಗೆ ವಿವಿಧ ಹೂಡಿಕೆಗಳ ಆಳವಾದ ಅರಿವಿನೊಂದಿಗೆ ತೊಡಗಿದರೆ ಒಬ್ಬ ವ್ಯಕ್ತಿ ಶಕ್ತಿಯಾಗಿ ಬದಲಾಗಲು ಸಾಧ್ಯ ಎಂದು ಪ್ರೊ ಸುರೇಶ್ ರೈ ಕೆ ನುಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಶಾಸ್ತ್ರ ಶಿಕ್ಷಕರ ಸಂಘ (ಮುಕ್ತ) ಸಹಯೋಗದಲ್ಲಿ ಏರ್ಪಡಿಸಿದ “ಹೂಡಿಕೆದಾರರ ಜಾಗೃತಿಯ ಒಂದು ದಿನದ ಕಾರ್ಯಕ್ರಮ” ಉದ್ಘಾಟಿಸಿ ಪ್ರೊ ಸುರೇಶ್ ರೈ ಕೆ ಮಾತನಾಡಿದರು.
ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ ಬಿಂದು ಟಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿ, ಪ್ರಸ್ತಾವಿಕ ಮಾತುಗಳನ್ನಾಡಿ ಗಣ್ಯರನ್ನು ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರಘು ನಾಯ್ಕ ಐಕ್ಯೂಎಸಿ ಸಂಚಾಲಕರಾದ ಡಾ.ಮೇವಿ ಮಿರಾಂಡ, ಪ್ಲೇಸ್ಮೆಂಟ್ ಸೆಲ್ ಸಂಚಾಲಕರಾದ ಉಮೇಶ್ ಪೈ ಸಹ ಪ್ರಾಧ್ಯಾಪಕರಾದ ಉದಯ್ ಶೆಟ್ಟಿ ಉಪಸ್ಥಿತರಿದ್ದರು.
ಮೂರು ಅಧಿವೇಶನಗಳಲ್ಲಿ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸಪ್ನಾ ಶೆಣೈ ಎಮ್, ನವೀನ್ ರೇಗೋ, ಲಿಯೋ ಅಮಲ್ ಎ ರವರು ಹೂಡಿಕೆಯ ವಿವಿಧ ಮಜಲುಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಅಂತಿಮ ಬಿಕಾಂ ವಿದ್ಯಾರ್ಥಿಗಳಾದ ವರ್ಷ, ಸಿಂಚನ ಮತ್ತು ವಾಣಿಶ್ರೀ ಕ್ರಮವಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸುಷ್ಮಾ ಕಾರ್ಯಕ್ರಮ ನಿರೂಪಣೆಗೈದರು. ಉಪನ್ಯಾಸಕರಾದ ವೆಂಕಟೇಶ್ ಭಟ್, ಶ್ರೀಮತಿ ಸ್ಮಿತಾ, ಶ್ರೀಮತಿ ಸೋನಿಯಾ, ಶ್ರೀಮತಿ ಧನ್ಯ, ಶ್ರೀಮತಿ ಮಮತಾ ಅಧಿವೇಶನಗಳನ್ನು ನಿರ್ವಹಿಸಿದರು. ವಿದ್ಯಾರ್ಥಿಗಳಾದ ಕೌಶಿಕ್ ಮತ್ತು ನಿಸಾರ್ ತಾಂತ್ರಿಕ ವರ್ಗದಲ್ಲಿ ಸಹಕರಿಸಿದರು. ಕಾಲೇಜಿನ ಬಿಬಿಎ ಮತ್ತು ಬಿಕಾಂ ವಿಭಾಗದ 170 ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು.