ಚೇಳ್ಯಾರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ಗಡಿ ಪ್ರಧಾನರಾಗಿ 30 ವರ್ಷಗಳನ್ನು ಪೂರೈಸಿರುವ ಆದಿತ್ಯ ಮುಕ್ಕಾಲ್ದಿಯವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಮೇ 12ರಂದು ಶ್ರೀ ಕ್ಷೇತ್ರದಲ್ಲಿ ಜರುಗಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಪಣಿಯೂರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂದು ಬೆಳಿಗ್ಗೆ ಗಂಟೆ 7.00ಕ್ಕೆ ಚಂಡಿಕಾಯಾಗ ನಡೆಯಲಿದ್ದು, ಮಧ್ಯಾಹ್ನ ಗಂಟೆ 11.00ಕ್ಕೆ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ “ಭಕ್ತಿಗಾನ ಸುಧೆ” ಜರುಗಲಿದೆ. ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 4.00ಕ್ಕೆ ಖಂಡಿಗೆಬೀಡಿನಿಂದ ಅದಿತ್ಯ ಮುಕ್ಕಾಲ್ದಿಯವರೊಂದಿಗೆ, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ಅತಿಥಿಗಣ್ಯರು ಹಾಗೂ ಎಲ್ಲಾ ಕ್ಷೇತ್ರದ ಗಡಿಪ್ರಧಾನರು ಭವ್ಯ ಮೆರವಣಿಗೆಯೊಂದಿಗೆ
ಕ್ಷೇತ್ರದ ಬೂಬ ಮುಕ್ಕಾಲ್ಲಿ ವೇದಿಕೆಗೆ ಬಂದು ಸಂಜೆ ಗಂಟೆ 5ಕ್ಕೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಜರುಗಲಿರುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ ಇವರು ಇವರು ಆಶೀರ್ವಚನ ನೀಡಲಿದ್ದಾರೆ. ಕಟೀಲು ದೇವಳದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ, ಶ್ರೀಪತಿ ಭಟ್, ವೇದಮೂರ್ತಿ ರಂಗನಾಥ ಭಟ್ ಪಣಿಯೂರುಗುತ್ತು, ಡಾ. ಗಣೇಶ ಅಮೀನ್ ಸಂಕಮಾರ್, ದುಗ್ಗಣ್ಣ ಸಾವಂತರು, ಅಜಿತ್ ಕುಮಾರ್ ರೈ ಮಾಲಾಡಿ, ಪ್ರಕಾಶ್ ಶೆಟ್ಟಿ, ಡಾ. ಶ್ರೀನಿವಾಸ ರಾವ್, ಭಾರತಿ ಶೆಟ್ಟಿ, ಐಕಳ ಹರೀಶ ಶೆಟ್ಟಿ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ರಾಜಶೇಖರ ಕೋಟ್ಯಾನ್, ಕೆ. ಯಲ್. ಕುಂಡತ್ತಾಯ, ಮಧ್ಯಗುತ್ತು ಕರುಣಾಕರ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಯಶಪಾಲ ಸುವರ್ಣ, ದೇವಿ ಪ್ರಸಾದ್ ಶೆಟ್ಟಿ ಬಾಳ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ರಾತ್ರಿ 7.00ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ| ದೇವದಾಸ್ ಕಾಪಿಕಾಡ್ ಅಭಿನಯದ ತುಳು ಹಾಸ್ಯಮಯ ನಾಟಕ “ನಮಸ್ಕಾರ ಮಾಸ್ಟ್ರೇ” ಜರುಗಲಿದೆ. ಪತ್ರಿಕಾಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಖಂಡಿಗೆ ಬೀಡು ದಯಾನಂದ ಶೆಟ್ಟಿ, ಸುಧಾಕರ್ ಶೆಟ್ಟಿ, ವಕೀಲ ರವೀಂದ್ರನಾಥ ರೈ, ಕಾರ್ಯದರ್ಶಿ ಉದಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮೇ 15-16 “ಕಂಡೇವುದ ಆಯನ”
ಮೇ 15ರಂದು ಖಂಡಿಗೆ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆ ನಡೆಯಲಿದ್ದು ಅಂದು ಬೆಳಗ್ಗೆ ಮೀನು ಹಿಡಿಯುವಿಕೆ, ಧ್ವಜಾರೋಹಣ ನಡೆಯಲಿದೆ. ಮೇ 16ರಂದು ಕ್ಷೇತ್ರದಲ್ಲಿ ಧರ್ಮರಸು ಉಳ್ಳಾಯ, ಇಷ್ಟ ದೇವತೆ, ಬಬ್ಬರ್ಯ ಹಾಗೂ ಪರಿವಾರ ದೈವಗಳ ನೇಮೋತ್ಸವ ಜರುಗಲಿದೆ.