ಕಾರ್ಕಳದಲ್ಲಿ ಬಿಜೆಪಿ ಭ್ರಷ್ಟಾಚಾರ ಹಾಗೂ ದರ್ಪ ರಾಜಕೀಯದಿಂದ ಬೇಸತ್ತ ಜನ ಬದಲಾವಣೆ ಬಯಸಿದ್ದು ದಕ್ಷ ಹಾಗೂ ಪ್ರಮಾಣಿಕ ಜನ ಸೇವಕ ಮುನಿಯಾಲು ಉದಯ ಶೆಟ್ಟಿ ಅವರನ್ನು ಜನ ಬೆಂಬಲಿಸುತ್ತಿದ್ದು ಪ್ರತಿಯೊಂದು ಕಡೆ ನಡೆಯುವ ಪ್ರಚಾರ ಸಭೆಗಳಲ್ಲಿ ಸೇರುತ್ತಿರುವ ಜನ ಸಾಗರವೇ ಸಾಕ್ಷಿಯಾಗಿದ್ದು ಬಹುಮತದಿಂದ ಉದಯಕುಮಾರ್ ಶೆಟ್ಟಿ ಅವರ ಗೆಲುವು ಖಚಿತವಾಗಿದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು. ಅವರು ಮೇ 6 ರಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಹೆಬ್ರಿ ಬಸ್ ತಂಗುದಾಣದ ವಠಾರದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಾರ್ಕಳ ಜನತೆಯ ಗೆಲುವು:
ಸಮಾಜ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವುದು ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನಿಜವಾಗ ಅಭಿವೃದ್ಧಿ ಎಂದು ತಿಳಿದ ಉದಯಕುಮಾರ್ ಶೆಟ್ಟಿ ಅವರ ಅಭಿವೃದ್ಧಿ ಪರ ಚಿಂತನೆ ಕಾರ್ಕಳಕ್ಕೆ ವರದಾನವಾಗಲಿದೆ. ಉತ್ಸವ ಅಬ್ಬರದ ಪ್ರಚಾರದಿಂದ ಜನರ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಅಹಂ ಇಲ್ಲದೆ ಸಾಮಾನ್ಯ ಕಾರ್ಯಕರ್ತನನ್ನು ತಲುಪಬೇಕು ಆಗ ಮಾತ್ರ ಸಾಮಾಜಿಕ ಪರಿವತ೯ನೆ ಸಾಧ್ಯ. ಈ ನಿಟ್ಟಿನಲ್ಲಿ ಉದಯ ಶೆಟ್ಟಿ ಅವರ ಗೆಲುವು ಕಾರ್ಕಳ ಜನತೆಯ ಗೆಲುವಿನಂತೆ ಎಂದರು.
ಭ್ರಷ್ಟ ರಾಜಕಾರಣಕ್ಕೆ ಕೊನೆ :
ಕಾರ್ಕಳದಲ್ಲಿ ಅಭಿವೃದ್ಧಿ ಎಂದು ಹೇಳಿಕೊಳ್ಳುತ್ತಿರುವ ಸುನೀಲ್ ಕುಮಾರ್ ತನ್ನ ಭ್ರಷ್ಟಾಚಾರವನ್ನು ಅವರ ಗುರುಗಳೆ ಬಯಲು ಮಾಡುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದು ನಿಜವಾದ ಅಭಿವೃದ್ಧಿ ಚಿಂತನೆಯ ಹರಿಕಾರ ಮುನಿಯಾಲು ಉದಯ ಶೆಟ್ಟಿಯವರನ್ನು ಪಕ್ಷ ಬೇದ ಮರೆತು ಜನ ಗೆಲ್ಲಿಸಲಿದ್ದಾರೆ ಎಂದರು.
ಗೋಪಾಲ ಭಂಡಾರಿಯ ಕನಸು ನನಸು :
ಯಾವುದೇ ಭ್ರಷ್ಟಾಚಾರವಿಲ್ಲದೆ ಶುದ್ಧ ಹಸ್ತದ ರಾಜಕಾರಣ ಮಾಡಿ ಬಿಜೆಪಿಗರ ಮನಸ್ಸನ್ನು ಗೆದ್ದ ಅಜಾತಶತ್ರು ಬಡವರ ಬಂಧುವಾದ ಗೋಪಾಲ ಭಂಡಾರಿಯವರು ಕಾರ್ಕಳ ಅಭಿವೃದ್ಧಿಗೆ ವಿಶೇಷ ಶ್ರಮವಹಿಸಿ ಜನ ಸಮಾನ್ಯರಲ್ಲೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇದೀಗ ಅವರ ಶಿಷ್ಯ ಸರಳ ಸಜ್ಜನಿಕೆಯ ಮುನಿಯಾಲು ಉದಯ ಶೆಟ್ಟಿ ಅವರು ಕೂಡ ಕಾರ್ಕಳ ಜನರ ಮನಗೆದ್ದಿದ್ದು ಅವರಂತೆಯೆ ಕಾರ್ಕಳದಲ್ಲಿ ಮತ್ತೆ ಜನಪರ ಆಡಳಿತದ ಕಾಂಗ್ರೆಸ್ ವೈಭವನ್ನು ಕಾಣಲಿದ್ದು ಭಂಡಾರಿಯವರ ಕನಸು ನನಸಾದಂತೆ ಎಂದು ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಹೇಳಿದರು.
ಬೃಹತ್ ಪಾದಯಾತ್ರೆ ಮೂಲಕ ಮತಯಾಚನೆ :
ಹೆಬ್ರಿ ,ಮುದ್ರಾಡಿ, ಮುನಿಯಾಲಿನ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ನಡೆಯಿತು. ಹೆಬ್ರಿ ಹಾಗೂ ಮುನಿಯಾಲಿನಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದರು.
ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ್ ಬಾಯರಿ, ಪ್ರಚಾರ ಸಮಿತಿ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜಿನಿ ಹೆಬ್ಬಾರ್, ಹೆಬ್ರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಶೆಟ್ಟಿ ಪ್ರಮುಖರಾದ ಗೀರಿಶ್ ಶೆಟ್ಟಿ ಕುಡುಪುಲಾಜೆ, ದೀಪಾ ಭಂಡಾರಿ, ಸುರೇನಾಥ ಶೆಟ್ಟಿ, ಆನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು.
ಸತ್ಯ ಧರ್ಮದ ಗೆಲುವು
ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತಮಾಡಿ ಜನರ ಪ್ರೀತಿಗೆ ಶರಣಾಗಿದ್ದೇನೆ. ಯಾವುದೇ ಅಮಿಷವೊಡ್ಡಿ ಮತಕೇಳುತ್ತಿಲ್ಲ. ಸತ್ಯ ಧಮ೯ದ ಮತ ನನಗೆ ಬೇಕು. ಜನ ಜಾಗೃತರಾಗಬೇಕು ಇನ್ನು ಹಣದ ಅಮಿಷವೊಡ್ಡಲು ನಿಮ್ಮಲ್ಲಿಗೆ ಬರುತ್ತಾರೆ. ಇದಕ್ಕೆ ಬಲಿಯಾಗೆ ನಿಮ್ಮ ಅಮೂಲ್ಯವಾದ ಮತವನ್ನು ಹಣಕ್ಕೆ ಮಾರದೆ ಮುಂದಿನ 5 ವರ್ಷ ಸಂತೋಷದಿಂದ ಜೀವನ ಸಾಗಿಸಲು ಕಾಂಗ್ರೆಸ್ ಪಕ್ಷದ ಚಿಹ್ನೆಗೆ ಮತ ನೀಡಿ. ರಸ್ತೆ ಮೊದಲಾದ ಅಭಿವೃದ್ಧಿಗಳು ನಿಮ್ಮ ತೆರೆಗೆ ಹಣದಿಂದ ಆಗಿರುವುದು. ಯಾವುದೇ ಶಾಸಕ ಅವರ ಸ್ವಂತ ಮಾಡಿರುವುದಲ್ಲ. ನಾಳೆ ನಾನು ಆದರೂ ಅಷ್ಟೇ. ಅಭಿವೃದ್ಧಿಯ ಜತೆ ಜನರ ಪ್ರೀತಿ ಹಾಗೂ ಅವರ ಭಾವನೆಗಳಿಗೆ ಸ್ಪಂದಿಸಬೇಕು. ಆಗ ಮಾತ್ರ ಕಾರ್ಕಳದ ಜನತೆ ಸುಖ ಸಂತೋಷದಿಂದ ಇರಲು ಸಾಧ್ಯ ಕೇವಲ ಪ್ಲೇಕ್ಷ ಬ್ಯಾನರ್ ನಲ್ಲಿ ತಮ್ಮ ಪೋಟೋ ಹಾಕಿಕೊಂಡರೆ ಅಭಿವೃದ್ಧಿ ಅಲ್ಲ. ಜನರ ಮೂಲಭೂತ ಸೌಲಭ್ಯಗೆ ಒತ್ತು ನೀಡಬೇಕು.ಹೆಬ್ರಿ ಹಾಗೂ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸರಿಯಾದ ವೈಧ್ಯರು ಹಾಗೂ ಚಿಕಿತ್ಸೆ ಇಲ್ಲದೆ ಜನ ಹಿಡಿ ಶಾಪಹಾಕುತ್ತಿದ್ದಾರೆ.ನನಗೆ ಒಮ್ಮೆ ಅವಕಾಶ ಕೊಡಿ ಮೊದಲು ಈ ಸಮಸ್ಯೆಗೆ ಸರಕಾರದಿಂದ ಅಥವಾ ವ್ಯಯಕ್ತಿಕವಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತೇನೆ.ನಿಮ್ಮಲ್ಲರ ಸತ್ಯ ಧರ್ಮದ ಮತ ಕಾರ್ಕಳ ಜನ ಸಂತೋಷದಿಂದ ಜೀವನ ಸಾಗಿಸಲು ಸಹಕಾರಿಯಾಗುತ್ತದೆ ಎಂದರು.