‘ಪ್ರಪಂಚ ಇರುವುದು ಹೇಡಿಗಳಿಗಲ್ಲ; ಜೀವನದಲ್ಲಿ ಎದುರಾಗುವ ಸಕಲ ಸೋಲು – ಗೆಲುವುಗಳಿಗೆ ಬಗ್ಗದಿರಿ, ಫಲಿತಾಂಶದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೆ ಸ್ವಾರ್ಥ ರಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳಿ’ ಎಂದು ಯುವಕರಿಗೆ ಕರೆಕೊಟ್ಟ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಇಂದಿಗೂ ಯುವ ಜನಾಂಗದ ಸ್ಫೂರ್ತಿಯ ಚಿಲುಮೆಯಾಗಿ ಉಳಿದಿದ್ದಾರೆ. ಹಿಂದೂ ಧರ್ಮದ ಪುನರುಜ್ಜೀವನಕ್ಕೆ ಕಾರಣೀಭೂತರಾದ ಅವರು ರಾಷ್ಟ್ರೀಯತೆಗೆ ನೀಡಿದ ಕೊಡುಗೆ ಬಹುದೊಡ್ಡದು.
ಸನ್ಯಾಸ ಧರ್ಮದ ವ್ಯಾಪ್ತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸಿದ ವಿವೇಕಾನಂದರು, ಧರ್ಮ ಪಾಲನೆ ಎಂದರೆ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸಲ್ಲ; ಜನರ ನಡುವೆ ಇದ್ದುಕೊಂಡು ಜನರಿಗಾಗಿ ಸಮಸ್ತ ಶಕ್ತಿಯನ್ನು ವಿನಿಯೋಗಿಸುವುದು ಎಂದು ಸಾರಿದರು.ಈ ಸಮಾಜ ಯಜ್ಞಕ್ಕೆ ಅವರು ವಿಶೇಷ ಆಹ್ವಾನ ನೀಡಿದ್ದು ಯುವಕರಿಗೆ. ಆದ್ದರಿಂದಲೇ ಅವರು ಇಂದಿಗೂ ಯುವಕರಿಗೆ ಆದರ್ಶ ವ್ಯಕ್ತಿ..!
ಬೆಳ್ತಂಗಡಿ ತಾಲೂಕಿಗೆ ಹರೀಶ್ ಪೂಂಜರ ಅನಿವಾರ್ಯತೆ ಮುಂದಿನ ಬಾರಿಗೆ ಅನಿವಾರ್ಯತೆಯ ಅನಿವಾರ್ಯತೆ ಖಂಡಿತ ಇದೆ. ಅವರ ಗೆಲುವು ಕೂಡ ಶತಸಿದ್ಧ. ಅವರ ಗೆಲುವಲ್ಲಿ ಎಲ್ಲರಂತೆಯೇ ನಾನು ಪಾಲುದಾರನಾಗಿರುತ್ತೀನಿ ಎನ್ನುವುದು ನನ್ನ ಮನಃಪೂರ್ವಕ ಧನ್ಯತೆಯು ಹೌದು. ಅವರ ಅಭಿವೃದ್ದಿ ಮತ್ತು ಧಾರ್ಮಿಕತೆಯ ದಾರಿಗಳಿಗೆ ಪುಷ್ಪ ವೃಷ್ಟಿ ಅವರನ್ನು ನೇರವಾಗಿ ಇನ್ನೊಂದು ಬಾರಿ ಶಾಸಕ ಸ್ಥಾನದಲ್ಲಿ ನಿಲ್ಲುವಂತೆ ಮಾಡುವುದರಲ್ಲಿ ಸಂಶಯವಿಲ್ಲ.
ಬನ್ನಿ, ವಿಜಯೋತ್ಸವದಲ್ಲಿ ಜೊತೆಯಾಗೋಣ. ಅವಿಭಜಿತ ಜಿಲ್ಲೆಗಳಲ್ಲಿ ಬಹು ಸಂಖ್ಯಾತರಾದ ಬಿಲ್ಲವ ಮತಗಳು, ಬೆಳ್ತಂಗಡಿಯಲ್ಲಿ ಕೂಡ ಉಚ್ಚಾಯ ಸ್ಥಿತಿಯಲ್ಲಿಯೇ ಇದೆ. ಅವರ ಬೆಂಬಲ ಅಭ್ಯರ್ಥಿಯ ಗೆಲುವಿಗೆ ಕಾರಣ ಕೂಡ ಆಗುತ್ತಿದೆ. ಆಗುತ್ತದೆ ಕೂಡ. ಇಲ್ಲಿನ ಬಹು ಬೆಂಬಲ ಹರೀಶ್ ಪೂಂಜರ ಪರವಾಗಿಯೇ ಇದೆ. ಈ ಸಾಲಿನ ಚುನಾವಣೆಗೆ ಕೂಡ ಅದು ಅಲುಗಾಡಲ್ಲ.
ಇತ್ತೀಚಿನ ಬೆಳವಣಿಗೆಯನ್ನು ಕಂಡಾಗ, ಪೂಂಜರ ಪ್ರತಿಸ್ಪರ್ಧಿಯು, ಅವರ ಜೊತೆಗಿನ ಕೆಲವು ಪಟ್ಟ ಹಿತಾಸಕ್ತಿಗಳು ಮಾಡಿದ ಜಾತಿಯ ನಡುವಿನ ಕೆಲವು ಅವಿವೇಕಿತನದ ಬೆಳವಣಿಗೆಗೆ, ಹರೀಶರ ಜೊತೆ ಇರುವ ಕೆಲವು ದೊಡ್ಡ ತಲೆಗಳು ಮಾಡಿದ ಪ್ರತೀಕಾರದ ಬೆಳವಣಿಗೆಗಳು ಬೆಳ್ತಂಗಡಿಯ ರಾಜಕೀಯದಲ್ಲಿ ಎಂದಿಗೂ, ಇಂದಿಗೂ ಕಂಡಿರದ ಮೂರ್ಖ ಬೆಳವಣಿಗೆ ಕೂಡ ಹೌದು.
ಇವರ ಮತ್ತು ಅವರ ಜೊತೆಗಿನ ಕೆಲವು ಹಿಂಬಾಲಕರು ಮಾಡಿದಂತಹ ಈ ಜಾತಿಯ ನಡುವಿನ ಮುಖ ಸ್ಪರ್ಧೆ, ತಾಲೂಕಿಗೆ ಒಳಿತಲ್ಲ. ಅದು ಮುಂದೆಯೂ ದೊಡ್ಡ ಪರಿಣಾಮವನ್ನು ಬೀರಬಹುದು.
ಆ ಬಿಲ್ಲವರು, ಈ ಬಿಲ್ಲವರು ಎನ್ನುವ ಅನೇಕ ಹೆಸರಿನ ನೂರಾರು ಖಾತೆಗಳು ಇಂದು ತನ್ನ ಆಡಳಿತವನ್ನು ಈ ಬೆಳ್ತಂಗಡಿಯಲ್ಲಿ ಮಾಡುತ್ತಿದೆ. ಇದು ರಾಜಕೀಯದ ಭಾಗವಾಗಿರಬಹುದು, ಚುನಾವಣೆ ಮುಗಿದ ನಂತರ ನಾವೆಲ್ಲರೂ ಒಂದೇ ಎನ್ನುವ ಭಾವನೆ ಕೂಡ ಮೂಡಬೇಕು ಅಲ್ಲವೇ..!?
ಹರೀಶ್ ಪೂಂಜರು ಕಳೆದ ಬಾರಿಯಂತೆ ಮತ್ತೂಮ್ಮೆ ಶಾಸಕನಾಗುತ್ತಾರೆ. ಅವರಿಗೆ ಪ್ರಚಾರದ, ಅಪ್ರಚಾರದ ಅಗತ್ಯವೇ ಇಲ್ಲ.
ಪೂಂಜರಲ್ಲಿ ನನ್ನದೊಂದು ಸಣ್ಣ ಸಲಹೆ ಇದೆ. ಪ್ರತೀ ಸ್ಪರ್ಧಿ ಮಾಡಿದ ದಾರಿಯಲ್ಲಿ ನೀವು ಕೂಡ ಸಾಗುವುದು ಯಾಕೋ ಸರಿ ಅನಿಸುತ್ತಿಲ್ಲ. ನಿಮ್ಮ ಬೆಂಬಲಿಗರು ಮಾಡುತ್ತಿರುವ ಈ ಕಾರ್ಯಕ್ಕೆ ಪೂರ್ಣ ವಿರಾಮ ಹಾಕುವುದು ಒಳಿತು ಎನ್ನುವುದು ನನ್ನ ಭಾವನೆ ಕೂಡ. ಉತ್ಸವದಲ್ಲಿ ನೆರೆ ಬರುವ ಅಗೋಚರ ದಾರಿಗೆ ಬೇಲಿ ಹಾಕುವುದು ಒಳ್ಳೆಯದು. ಬೆಳ್ತಂಗಡಿಯ ಅಭಿವೃದ್ಧಿಗೆ ಮತ್ತೊಮ್ಮೆ ಪೂಂಜರ ಅವಶ್ಯಕತೆ ಇದೆ.