ಚೆಳ್ಯಾರು ಖಂಡಿಗೆಬೀಡು ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ಗಡಿಪ್ರಧಾನರಾದ ಆದಿತ್ಯ ಮುಕ್ಕಾಲ್ದಿ ಅವರು ಗಡಿ ಪ್ರಧಾನರಾಗಿ 30 ವರ್ಷಗಳಾಗಿದ್ದು ಅದರ ಬಗ್ಗೆ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಮೇ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಯಿತು. ಚೇಳ್ಯಾರು ಖಂಡಿಗೆಯಲ್ಲಿ ನಡೆದ ಸಭೆಯಲ್ಲಿ ಅಭಿನಂದನೆ ಸಮಿತಿ ಗೌರವಾಧ್ಯಕ್ಷರು ಹಾಗೂ ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿಯವರು ಸಮಾರಂಭದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಅಭಿನಂದನ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಪಣಿಯೂರು ಅವರು ಮಾತನಾಡಿ ಅಭಿನಂದನ ಸಮಿತಿ ಕೈಗೊಂಡ ನಿರ್ಣಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಗಡಿ ಪ್ರಧಾನರಾದ ಆದಿತ್ಯ ಮುಕ್ಕಾಲ್ದಿ, ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಅಧ್ಯಕ್ಷರಾದ ದಯಾನಂದ ಶೆಟ್ಟಿ ಖಂಡಿಗೆ, ವಿಶುಕುಮಾರ್ ಪಡುಬಿದ್ರೆ ಸಮಿತಿ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಚೇಳ್ಯಾರು, ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ಮುಂತಾದವರು ಉಪಸ್ಥಿತರಿದ್ದರು.