ತಾಲೂಕಿನ ಅರಿಯಡ್ಕ ಗ್ರಾಮದ ಹೊಸಗದ್ದೆ ನಿವಾಸಿ ಸುಶೀಲಾ ರೈ ಅವರ ಮನೆಯ ಮೇಲ್ಛಾವಣಿಯ ಬಿದಿರುಗಳು ಸಂಪೂರ್ಣ ಕೆಟ್ಟುಹೋಗಿ ಬೀಳುವ ಸ್ಥಿತಿಯಲ್ಲಿ ಇದ್ದಾಗ ತಾಲೂಕಿನ ಯುವ ಬಂಟರ ಸಂಘದಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದರು.
ಅವರ ನೆರವಿಗೆ ನಿಂತ ತಾಲೂಕು ಯುವ ಬಂಟರ ಸಂಘವು ಜಾಗತಿಕ ಬಂಟರ ಸಂಘ ಹಾಗೂ ಬಂಟ ದಾನಿಗಳ ಸಹಕಾರದೊಂದಿಗೆ ಇದೀಗ ಮನೆಯ ಮೇಲ್ಛಾವಣಿ ಹೊಸತಾಗಿ ನಿರ್ಮಾಣ ಮಾಡಿ ಕೊಡುವ ಮೂಲಕ ಬಂಟ ಸಮುದಾಯದ ಬಡ ಮಹಿಳೆಯ ನೆರವಿಗೆ ನಿಂತಿದೆ.
ದಿನಾಂಕ 17/03/2023ರಂದು ಇದರ ಖರ್ಚಿನ ಎಲ್ಲ ಹಣವನ್ನು ಚೆಕ್ ಮೂಲಕ ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷರಾದ ಎ ಹೇಮನಾಥ್ ಶೆಟ್ಟಿ ಕಾವು, ಯುವ ಬಂಟರ ಸಂಘದ ಅಧ್ಯಕ್ಷ ರಾದ ಶಶಿರಾಜ್ ರೈ ಮುಂಡಾಳಗುತ್ತು, ಸಂಯೋಜಕರಾದ ಬೊಳಿಂಜ ಗುತ್ತು ರವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರಜನ್ ಶೆಟ್ಟಿ ಕಂಬಳತ್ತಡ್ಡ, ಜತೆ ಕಾರ್ಯದರ್ಶಿ ರಂಜಿನಿ ಶೆಟ್ಟಿ ಹಾಗೂ ಕೋಶಾಧಿಕಾರಿ ಈ ಯೋಜನೆಯ ಜವಾಬ್ದಾರಿ ವಹಿಸಿಕೊಂಡಿರುವ ಕೆಸಿ ಅಶೋಕ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಮನೆ ಒಡತಿ ಸುಶೀಲಾ ರೈ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯೋಜನೆಯ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಕೆಸಿ ಅಶೋಕ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು.