ಯುವ ಬಂಟರ ಸಂಘ (ರಿ.) ಕಂಬಳಕಟ್ಟ – ಕೊಡವೂರು, ಲಯನ್ಸ್ ಕ್ಲಬ್ ಉಡುಪಿ – ಚೇತನ ಇವರ ಜಂಟಿ ಆಶ್ರಯದಲ್ಲಿ ಪೃಥ್ವಿ ಡಿಜಿಟಲ್ ಸೇವಾ ಕೇಂದ್ರ, ಮಲ್ಪೆ ಇವರ ಸಹಯೋಗದೊಂದಿಗೆ ಆಯುಷ್ಮಾನ್ ಭಾರತ್ – ಆಭಾ ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಗಾರ ಹಾಗೂ ಜೆ. ಎಸ್. ಡಬ್ಲ್ಯೂ ಫೌಂಡೇಶನ್ ಮತ್ತು ಇಂಡಿಯಾ ವಿಷನ್ ಸಂಸ್ಥೆ ಇವರ ಸಹಯೋಗದೊಂದಿಗೆ ಉಚಿತ ಕನ್ನಡಕ ವಿತರಣಾ ಸಮಾರಂಭವು ಆದಿಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಲಯನ್ಸ್ ಜಿಲ್ಲೆ 317-C ಇದರ ದ್ವಿತೀಯ ಜಿಲ್ಲಾ ಉಪಗವರ್ನರ್ ಲl ಮೊಹಮ್ಮದ್ ಹನೀಫ್ MJF ಮಾತನಾಡಿ ಲಯನ್ಸ್ ಸಂಸ್ಥೆಯು ಸಾರ್ವಜನಿಕವಾಗಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರ ಮಾಡುತ್ತಾ ಬರುತ್ತಿದ್ದು, ಲಯನ್ಸ್ ಕ್ಲಬ್ ಉಡುಪಿ – ಚೇತನ ಹಾಗೂ ಯುವ ಬಂಟರ ಸಂಘ ಕಂಬಳಕಟ್ಟ – ಕೊಡವೂರು ಇವರುಗಳ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವು ಉಪಯುಕ್ತವಾಗಿದ್ದು, ಈ ಆಭಾ ಕಾರ್ಡಿನ ಸೌಲಭ್ಯವು ಸಮಾಜದ ಎಲ್ಲಾ ವರ್ಗದವರಿಗೂ ದೊರಕುವಂತಾಗಲಿ, ಮುಂದಿನ ದಿನಗಳಲ್ಲಿ ಈ ಸಂಸ್ಥೆಗಳು ಜಂಟಿಯಾಗಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಕ್ರಿಯವಾಗಿ ಗುರುತಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಈ ಸುಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಎಂದೇ ಗುರುತಿಸಿಕೊಂಡಿರುವ ಆಶಾಕಾರ್ಯಕರ್ತೆಯರಾದ ಯಶೋಧಾ ಮೂಡುಬೆಟ್ಟು, ಇಮಾ ವರ್ಗೀಸ್ ಕೊಡವೂರು, ಆಶಾ ಮಧ್ವನಗರ ಹಾಗೂ ನಗರ ಪ್ರಾಥಮಿಕ ಕೇಂದ್ರ ಉಡುಪಿ ಇದರ ಹಿರಿಯ ಆರೋಗ್ಯ ಸಹಾಯಕಿ ಸವಿತಾ.ಡಿ ನೆಲ್ಲಿಕಾರು ಇವರುಗಳನ್ನು ಇವರ ಸಮಾಜಮುಖಿ ಸೇವೆಗೆ ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೆ. ಎಸ್. ಡಬ್ಲ್ಯೂ ಫೌಂಡೇಶನ್ ಮತ್ತು ಇಂಡಿಯಾ ವಿಷನ್ ಸಂಸ್ಥೆ ಸಹಯೋದೊಂದಿಗೆ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದ 67 ಜನ ಫಲಾನುಭವಿಗಳಿಗೆ ದೃಷ್ಟಿ ಸಾಮರ್ಥ್ಯವುಳ್ಳ ಕನ್ನಡಕಗಳನ್ನು ಜೆ. ಎಸ್. ಡಬ್ಲ್ಯೂ ಫೌಂಡೇಶನ್ ಮಂಗಳೂರು ವಿಭಾಗದ ಶ್ರೀ ದಿಲೀಪ್ ಶೆಟ್ಟಿ ಇವರು ವಿತರಿಸಿದರು. ಹಾಗೂ ಸುಮಾರು 150 ಶಿಭಿರಾರ್ಥಿಗಳು ಪಾಲ್ಗೊಂಡು ಆಭಾ ಕಾರ್ಡ್ ನೋಂದಣಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಉಪ್ಪೂರು ಬಂಟರ ಸಂಘ ಅಧ್ಯಕ್ಷರಾದ ಡಾl ಶ್ರೀ ಪ್ರಶಾಂತ್ ಶೆಟ್ಟಿ ನರ್ನಾಡು, ಕೊಡವೂರು ವಾರ್ಡ್ ನ ನಗರ ಸಭಾ ಸದಸ್ಯ ಶ್ರೀ ವಿಜಯ ಕೊಡವೂರು, ಆದಿವುಡುಪಿ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕರಾದ ಶ್ರೀ ಗಣೇಶ್ ರಾವ್, ಲಯನ್ಸ್ ಕ್ಲಬ್ ಉಡುಪಿ ಚೇತನದ ಅಧ್ಯಕ್ಷರಾದ ಲl ರಾಜೇಶ್ ಶೇರಿಗಾರ್, ಪ್ರಾಂತೀಯ ಕಾರ್ಯದರ್ಶಿ ಲl ರಾಜೇಶ್ ಹೆಗ್ಡೆ , ಕೋಶಾಧಿಕಾರಿ ಸಂದೀಪ್ ಶೆಟ್ಟಿ, ಪೃಥ್ವಿ ಡಿಜಿಟಲ್ ಸೇವಾ ಕೇಂದ್ರ ಮಲ್ಪೆ ಇದರ ಶ್ರೀ ರವಿರಾಜ್, ಇಂಡಿಯಾ ವಿಷನ್ ಸಂಸ್ಥೆಯ ಸಂಗೀತ ಶೆಟ್ಟಿ, ಲl ಅರುಣ್ ಕುಮಾರ್ ಶೆಟ್ಟಿ ಗಂಗೋತ್ರಿ, ಯುವ ಬಂಟರ ಸಂಘ ಕಂಬಳಕಟ್ಟ- ಕೊಡವೂರು ಇದರ ಗೌರವ ಅಧ್ಯಕ್ಷರುಗಳಾದ ಶ್ರೀ ಸಂತೋಷ್ ಶೆಟ್ಟಿ ಪಂಚರತ್ನ, ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ, ಶ್ರೀಮತಿ ಸ್ಮಿತಾ ವಿದ್ಯಾಧರ ಶೆಟ್ಟಿ ಗರ್ಡೆ, ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಮಜಲುಮನೆ, ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಆದಿಉಡುಪಿ, ಖಜಾಂಚಿ ರಮೇಶ್ ಶೆಟ್ಟಿ ಮೂಡುಬೆಟ್ಟು, ನವೀನ್ ಶೆಟ್ಟಿ ಮೂಡುಬೆಟ್ಟು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
ಕಂಬಳಕಟ್ಟ – ಕೊಡವೂರು ಬಂಟರ ಸಂಘದ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪುಷ್ಪರಾಜ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು, ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ ಕಾರ್ಯಕ್ರಮ ನಿರೂಪಿಸಿದರು.