ಜಗತ್ತಿನಾದ್ಯಂತ ಇರುವ ಬಂಟ ಸಮಾಜವು ಇಂದು ಪ್ರತಿಯೊಂದು ವಿಭಾಗದಲ್ಲೂ ಮುಂದುವರಿಯುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಬಂಟರಲ್ಲಿ ಅಡಗಿರುವ ರಕ್ತ ಶಕ್ತಿಯ ಗುಣ. ನಮ್ಮವರು ಸಾಹಸಿಗರು ಮಾತ್ರವಲ್ಲದೆ ಧೀರರು. ವಿಶ್ವದಲ್ಲಿರುವ ನಾವೆಲ್ಲಾ ಒಂದೇ ಮನೆತನದವರು. ನಮ್ಮಲ್ಲಿ ಭಿನ್ನಾಭ್ರಿಪ್ರಾಯ ಸಲ್ಲದು. ದೇಶ ವಿದೇಶದಲ್ಲೂ ಇಂದು ಅದೆಷ್ಟೋ ಮಂದಿ ಕ್ರೀಡಾ ಕೌಶಲ್ಯತೆಯಲ್ಲಿ ಮೆರೆಯುತ್ತಿದ್ದಾರೆ ಎಂದು ನುಡಿದರು.
ಅವರು ಮೀರಾಡಹಣೂ ಬಂಟ್ಸ್ ವತಿಯಿಂದ ವಿರಾರ್ ಹಳೇ ವಿವಾ ಕಾಲೇಜಿನ ಮೈದಾನದಲ್ಲಿ ನಡೆದ ಸಂಸ್ಥೆಯ ಪ್ರಥಮ ವರ್ಷದ ಕ್ರೀಡೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಇಂದು ಆಯೋಜಿಸುತ್ತಿರುವ ಮೀರಾಡಹಣೂ ಬಂಟ್ಸ್ ನ ಕ್ರೀಡೋತ್ಸವ ಅತ್ಯಂತ ವಿಶೇಷ ಮೆರಗನ್ನು ನೀಡುತ್ತಿದೆ. ಆಕರ್ಷಕ ಶೈಲಿಯ ಉಡುಪುಗಳು ಕಾರಣವಾಗಿದೆ. ನಾವು ಬಂಟರು, ಉತ್ತಮ ಜನಾಂಗದವರು. ನಮ್ಮಲ್ಲಿ ಎಲ್ಲಾ ರೀತಿಯ ಕ್ರೀಯಾ ಶಕ್ತಿಗಳು ಅಡಕವಾಗಿದೆ ಅದನ್ನು ನಾವು ಸದುಪಯೋಗಿಸಬೇಕಾಗಿದೆ ಎಂದರು. ಇಂದಿನ ಕ್ರೀಡಾ ಆಯೋಜನೆಯನ್ನು ಪ್ರಶಂಸಿಸುತ್ತಾ ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮೀರಾಡಹಣೂ ಬಂಟ್ಸ್ ನ ಅಧ್ಯಕ್ಷ ಪ್ರಕಾಶ್ ಹೆಗ್ಡೆಯವರು ಮಾತನಾಡುತ್ತಾ ಇದು ನಮ್ಮ ಪ್ರಥಮ ವರ್ಷದ ಕ್ರೀಡೋತ್ಸವ. ನನ್ನ ಕಾರ್ಯಾವದಿಯಲ್ಲಿಯೇ ಆರಂಭಗೊಂಡಿದೆ. ಉತ್ತಮ ರೀತಿಯಲ್ಲಿ ಗಣ್ಯರಿಂದ ಶುಭಾರಂಭಗೊಂಡಿದೆ. ಮುಂದೆ ಪ್ರತೀ ವರ್ಷವೂ ಈ ಕ್ರೀಡೊತ್ಸವವನ್ನು ಮುಂದುವರಿಸುವ ಯೋಜನೆ ನಮ್ಮದು ಎನ್ನುತ್ತಾ ಕ್ರೀಡಾಳುಗಳಿಗೆ ಯಶಸ್ಸನ್ನು ಹರಸಿದರು.
ಅತಿಥಿಯಾಗಿ ಆಗಮಿಸಿದ ದೇಹದಾರ್ಡ್ಯ ಪಟು ಯಜ್ಘೇಶ್ ಶೆಟ್ಟಿಯವರು ಮಾತನಾಡುತ್ತಾ ಕ್ರೀಡೆಗಳಲ್ಲಿ ಭಾಗವಹಿಸಿ ದೇಶ ವಿದೇಶದಲ್ಲೂ ಕೀರ್ತಿವಂತರಾಗಬೇಕು ಎಂದು ಸ್ಪರ್ಧಾರ್ತಿಗಳಿಗೆ ಮನವಿ ಮಾಡಿದರು.
ಅತಿಥಿ ಮೀರಾಭಯಂದರ್ ಕಾರ್ಪೋರೇಟರ್ ಅರವಿಂದ ಎ. ಶೆಟ್ಟಿಯವರು ತನ್ನ ಅನಿಸಿಕೆಯಲ್ಲಿ ಯುವ ಜನಾಂಗ ಕ್ರೀಡೆಗಳಲ್ಲಿ ಮುಂದೆ ಬಂದು ಸದಾ ಕ್ರೀಯಾಶೀಲರಾಗಬೇಕೆಂದು ಪ್ರತಿಭೆಗಳಿಗೆ ಶುಭ ಹಾರೈಸಿದರು.
ಅತಿಥಿ ಮೀರಾಭಯಂದರ್ ಸೈಂಟ್ ಅಗ್ನೆಸ್ ಸ್ಕೂಲ್ ನ ಚೆಯರ್ ಮೆನ್ ಡಾ. ಅರುಣೋದಯ ರೈ ಮೀರಾಡಹಣೂ ಬಂಟ್ಸ್ ನ ಕ್ರೀಡಾ ಆಯೋಜನೆಯನ್ನು ಶ್ಲಾಘಿಸಿದರು ಹಾಗೂ ಕ್ರೀಡಾಳುಗಳಿಗೆ ಶುಭಾಶಯವನ್ನು ಹಾರೈಸಿದರು.
ಅತಿಥಿ ಹಾಗೂ ಟ್ರಸ್ಟಿ ಗಂಧರ್ವ ಸುರೇಶ್ ಶೆಟ್ಟಿಯವರು ಐಕಳ ಹರೀಶ್ ರಂತಹ ಜಾಗತಿಕ ಮಟ್ಟದ ಕ್ರೀಡಾ ಪ್ರೇಮಿ ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಈ ಕಾರ್ಯಕ್ರಮಕ್ಕೆ ವಿಶೇಷ ಅಲಂಕಾರವಾಗಿದೆ ಮಾತ್ರವಲ್ಲದೆ ಕ್ರೀಡಾಳುಗಳಿಗೆ ಉತ್ತೇಜನ ನೀಡಿದೆ ಎಂದರು.
ವಿರಾರ್ ಶಂಕರ್ ಶೆಟ್ಟಿ
ಕಳೆದ 13 ವರ್ಷಗಳಲ್ಲಿ ನಮ್ಮ ಮೀರಾಡಹಣೂ ಬಂಟ್ಸ್ ಇದೇ ಪ್ರಥಮ ಬಾರಿಗೆ ಈ ಸೌಹಾರ್ಧ ಕ್ರೀಡಾ ಕೂಟವನ್ನು ಆಯೋಜಿಸಿದೆ. ಇದಕ್ಕೆ ನಮ್ಮ ಮುಂಬಯಿ ಬಂಟರ ಸಂಘವು 35 ವರ್ಷಗಳಿಂದ ಆಯೋಜಿಸಿಕೊಂಡು ಬಂದಂತಹ ಕ್ರೀಡೋತ್ಸವ ಪ್ರೇರಕವಾಗಿದೆ. ಮುಂಬಯಿ ಹೃದಯ ಭಾಗದಿಂದ ಹೊರಗಿರುವ ನಮ್ಮ ಎಲ್ಲಾ ಸ್ವಜಾತಿ ಬಂಧುಗಳಿಗೆ ಕ್ರೀಡೆಗಳ ಪ್ರಯೋಜನ ಸಿಗಲಿ ಎಂಬ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಎಲ್ಲಾ ಪ್ರಾದೇಶಿಕ ಸಮಿತಿ ಹಾಗೂ ಸಮಾಜ ಬಾಂಧವರ ಸಹಕಾರದಿಂದ ಆಯೋಜಿಸಲಾಗಿದೆ. ಮುಂಬರುವ ಎಲ್ಲಾ ಸಮಯದಲ್ಲೂ ಇನ್ನೂ ಹೆಚ್ಚು ಪರಿಸರದ ಸಮಾಜ ಬಾಂಧವರು ಕ್ರೀಡೋತ್ಸವದಲ್ಲಿ ಭಾಗವಹಿಸುವುದಕ್ಕೆ ಮಹತ್ವ ನೀಡಲಾಗುವುದು. ಎಂದು ಕ್ರೀಡಾಳುಗಳಿಗೆ ಶುಭ ಕೋರಿದರು.
ವಿಶೇಷ ಅತಿಥಿಯಾಗಿ ಆಗಮಿಸಿದ ತುಂಗಾ ಹಾಸ್ಪಿಟಲ್ ನ ಆಡಳಿತ ನಿರ್ದೇಶಕ ಡಾ. ಸತೀಶ್ ಬಿ. ಶೆಟ್ತಿಯವರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಪ್ರಯೋಜನ ಸಿಗುತ್ತದೆ. ನಮ್ಮ ಯುವ ಪ್ರತಿಭೆಗಳು ಮುಂದೊತ್ತಿ ಬರಬೇಕು. ದೇಶದ ಕ್ರೀಡೆಗಳಲ್ಲಿ ನಮ್ಮ ಸಮಾಜ ಸದಾ ಪ್ರತಿನಿದಿಸುವಂತಾಗಬೇಕು. ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುವಂತಾಗಬೇಕು. ನಮ್ಮ ಹಾಸ್ಪಿಟಲ್ ವತಿಯಿಂದ ಇಂತಹ ಆಯೋಜನೆಗಳಿಗೆ ಸದಾ ಪ್ರೋತ್ಸಾಹ ಲಭ್ಯ ಎಂದರು.
ವೇದಿಕೆಯಲ್ಲಿ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮೀರಾ ಡಹಣೂ ಬಂಟ್ಸ್ ಗೌ. ಅಧ್ಯಕ್ಷ ವಿರಾರ್ ಶ್ಂಕರ್ ಶೆಟ್ಟಿ, ಅಧ್ಯಕ್ಷ ಪ್ರಕಾಶ್ ಹೆಗ್ದೆ, ಮೀರಾಭಯಂದರ್ ಕಾರ್ಪೋರೇಟರ್ ಅರವಿಂದ್ ಎ. ಶೆಟ್ಟಿ, ಟ್ರಸ್ಟಿ ಗಂಧರ್ವ ಸುರೇಶ್ ಶೆಟ್ಟಿ, ಸೈಂಟ್ ಅಗ್ನೇಸ್ ಸ್ಕೂಲ್ ನ ಚೆಯರ್ಮೆನ್ ಡಾ. ಅರುಣೋದಯ ರೈ, ವ್ಯಾಯಮ ಪಟು ಚಿತಾಹ ಯಜ್ಘೇಶ್ ಶೆಟ್ಟಿ, ಕ್ರೀಡಾ ಕಣ್ಮಣಿ ಹರ್ಷ ಶೆಟ್ಟಿ, ಉಪಾಧ್ಯಕ್ಷ ಕರ್ನೂರು ಶಂಕರ ಆಳ್ವ, ಸಂಚಾಲಕ ನಾಗರಾಜ್ ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷ ಮುಕೇಶ್ ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ಸುಕೇಶ್ ರೈ, ಕೋಶಾಧಿಕಾರಿ ರವಿ ರೈ ಬೊಯಿಸರ್, ಕ್ರೀಡಾ ಸಮಿತಿಯ ಪ್ರದೀಪ್ ಶೆಟ್ಟಿ ವಿರಾರ್, ನವೀನ್ ಎಮ್. ಶೆಟ್ಟಿ, ಮೀರಾಭಯಂದರ್ ವಲಯದ ಕಾರ್ಯದರ್ಶಿ ಹರೀಶ್ ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತ ಜಿ. ಶೆಟ್ಟಿ, ವಸಾಯಿ ವಿಭಾಗದ ಕಾರ್ಯಾಧ್ಯಕ್ಷ ಅಶೋಕ್ ಶೆಟ್ಟಿ, ಮೀರಾಭಯಂದರ್ ವಿಭಾಗದ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ, ಪಾಲ್ಗರ್ ವಿಭಾಗದ ಕಾರ್ಯಾಧ್ಯಕ್ಷ ವಿಜಯ್ ಎ. ಶೆಟ್ಟಿ, ಡಹಣೂ ವಿಭಾಗದ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೀರಾಭಯಂದರ್, ನಾಯ್ಗಾಂವ್, ವಿರಾರ್, ಪಾಲ್ಗರ್, ಬೊಯಿಸರ್ ಹಾಗೂ ಡಹಣೂ ವಲಯಗಳ ಪಥ ಸಂಚಲನದ ನಂತರ
ಗಣ್ಯರು ದೀಪ ಬೆಳಗುವುದರೊಂದಿಗೆ ಮತ್ತು ಕ್ರೀಡಾ ಪ್ರೇಮದ ಬಲೂನ್ ಹಾರಾಡಿಕೆಯೊಂದಿಗೆ ಕ್ರೀಡೆಗೆ ಚಾಲನೆ ನೀಡಿದರು. ಪ್ರಿಯಾ ರಾಜೇಂದ್ರ ಶೆಟ್ಟಿ ಮತ್ತು ಚಂದ್ರಕಲಾ ಶೆಟ್ಟಿಯವರು ಗೈದರು. ಸಮಾರಂಭದ ಗಣ್ಯರನ್ನು ಸಂಸ್ಥೆಯ ಸಂಚಾಲಕ ನಾಗರಾಜ್ ಯನ್. ಶೆಟ್ಟಿಯವರು ಸ್ವಾಗತಿಸಿದರೆ ಕಾರ್ಯಕ್ರಮವನ್ನು ದೀಕ್ಷಿತ್ ಹೆಗ್ಡೆ, ಶಿಲ್ಪಾ ಸಂತೋಷ್ ಶೆಟ್ಟಿ ನಿರ್ವಹಿಸಿದರು.