ಮುಂಬಯಿ (ಆರ್ಬಿಐ), ಡಿ.07: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಕಳೆದ (ಡಿ.02-04) ಆಯೋಜಿಸಲಾದ ಭ್ರಮರ-ಇಂಚರ ನಾಮದ ನುಡಿಹಬ್ಬ ಸಮಾರೋಪ ಸಮಾರಂಭ ಕಳೆದ ಭಾನುವಾರ ಸಂಜೆ ಕಟೀಲು ಪದವೀಪೂರ್ವ ಕಾಲೇಜ್ನ ಶ್ರೀವಿದ್ಯಾ ಸಭಾಭವನದಲ್ಲಿ ಜರುಗಿತು.
ಡಾ| ಪಾದೆಕಲ್ಲು ವಿಷ್ಣು ಭಟ್ಟ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಸಂಜೀವನಿ ಟ್ರಸ್ಟ್ ಮುಂಬಯಿ ಇದರ ಕಾರ್ಯಾಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಇವರಿಗೆ `ಕಟೀಲು ವಿದ್ಯಾಲಯದ ಹೆಮ್ಮೆಯ ಸಾಧಕ ಹಿರಿಯ ವಿದ್ಯಾರ್ಥಿ ಪ್ರಶಸ್ತಿ’ ಪ್ರದಾನಿಸಿ ಗೌರವಿಸಲಾಯಿತು. ಸುರೇಶ್ ರಾವ್ ಅವರ ಜನನಿದಾತೆ ಕಾತ್ಯಾಯಿನಿ ಸಂಜೀವ ರಾವ್ ಅವರೊಂದಿಗೆ ಗೌರವಿಸಲಾಗಿದ್ದು ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತ್ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ ಜಿಲ್ಲಾ ಮಾಜಿ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ, ಉದ್ಯಮಿಗಳಾದ ಬಜಪೆ ರಾಘವೇಂದ್ರ ಆಚಾರ್ಯ, ಗಿರಿಧರ ಶೆಟ್ಟಿ ಮಂಗಳೂರು, ನಮ್ಮ ಕುಡ್ಲ ಮುಖ್ಯಸ್ಥ ಲೀಲಾಕ್ಷ ಕರ್ಕೇರ, ಯುಗ ಪುರುಷ ಕಿನ್ನಿಗೋಳಿ ಇದರ ಮುಖ್ಯಸ್ಥ ಕೊಡೆತ್ತೂರುಗುತ್ತುಭುವನಾಭಿರಾಮ ಉಡುಪ, ಶ್ರೀ ಕ್ಷೇತ್ರ ಕಟೀಲು ಇದರ ಆಡಳಿತ ಮೊಕ್ತೇಸರ ಸನತ್ಕುಮಾರ್ ಹೆಗ್ಡೆ ಕೊಡೆತ್ತೂರುಗುತ್ತು, ಬಿಪಿನ್ ಕುಮಾರ್ ಶೆಟ್ಟಿ, ಸದಾನಂದ ಆಸ್ರಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಡಾ| ಸುರೇಶ್ ರಾವ್ ಪುತ್ರಮಾತೃರನ್ನು ಸನ್ಮಾನಿಸಿ ಅಭಿನಂದಿಸಿದರು.
ಶ್ರೀ ಕ್ಷೇತ್ರ ಕಟೀಲು ದೇವಸ್ಥಾನದ ಮೊಕ್ತೇಸರ ವಾಸುದೇವ ಆಸ್ರಣ್ಣ ಮತ್ತು ಆನುವಂಶಿಕ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನಗೈದರು. ಶ್ರೀ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.