ದುಬೈ : ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಅಬುಧಾಬಿ ಕರ್ನಾಟಕ ಸಂಘದ 41 ನೇ ವರ್ಷದ ಕರ್ನಾಟಕ ರಾಜ್ಯೋತ್ಸವವು ಅಬುಧಾಬಿ ನಗರದ ಇಂಡಿಯನ್ ಸೋಷಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿಯ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತ್ತು.
ಕರ್ನಾಟಕ ಸಂಘದ ಸದಸ್ಯೆಯರು ಕರ್ನಾಟಕದ ನಾಡಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ, ಗಾಯನ, ಕಿರು ನಾಟಕ ಜರುಗಿದುವು.
ಭಾರತೀಯ ರಾಯಭಾರಿಯವರಿಂದ ಉದ್ಘಾಟನೆಯ ವಿಶೇಷತೆ
ಯು.ಎ.ಇ.ಯ ಭಾರತೀಯ ದೂತವಾಸದ ರಾಯಭಾರಿಗಳಾದ ಗೌರವಾನ್ವಿತ ಸಂಜಯ್ ಸುಧೀರ್ ರವರು ದೀಪವನ್ನು ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಇಂಡಿಯನ್ ಸೋಷಿಯಲ್ ಅಂಡ್ ಕಲ್ಚರಲ್ ಸೆಂಟರ್ (ISC) ಅಬುಧಾಬಿಯ ಅಧ್ಯಕ್ಷರಾದ ಶ್ರೀಯುತರಾದ ಡಾ. ನಟರಾಜನ್,ಇಂಡಿಯನ್ ಎಂಬೆಸಿ ಕಮ್ಯೂನಿಟಿ ಅಫೇರ್ಸ್ ಮುಖ್ಯಸ್ಥೆ ಶ್ರೀಮತಿ ರೀಶಾ ಒಬೆರಾಯ್ , ಹಾಸ್ಯ ಕಲಾವಿದೆ ಶ್ರೀಮತಿ ಸುಧ ಬರಗೂರು, ಕನ್ನಡಿಗರು ದುಬೈಯ ಸಾದನ್ ದಾಸ್,ಅಲ್ ಐನ್ ಕನ್ನಡ ಸಂಘದ ವಿಮಲ್ ಕುಮಾರ್,ಪದ್ಮನಾಭ ಆಚಾರ್ಯ, ಉದ್ಯಮಿ ಸುಂದರ ಶೆಟ್ಟಿ,ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಯೋಗಿಶ್ ಪ್ರಭು ಕೆ.,ಲೊಯಲೋ ಪಿಂಟೊ, ಬೆನೆಟೆ ಡಿ. ಮೆಲ್ಲೊ,ಪ್ರದೀಪ್ ಕಿರೋಡಿಯನ್,ಸುದೀರ್ ಶೆಟ್ಟಿ, ಅಲ್ತಫ್ ಎಂ.ಎಸ್,ಅಬ್ದುಲ ಮದುಮೂಲೆ,ವಿಜಯ ರಾವ್,ಚೇತನ ಗೋಪಾಲ, ಶ್ರೀ ಕೃಷ್ಣ ಕುಳಾಯಿ,ಕೃಷ್ಣ ರಾಜ ರಾವ್,ಸಂದೀಪ್ ರಾವ್,ಶ್ರೀನಿವಾಸ್,ಈಶ್ವರ್,ಯತಿರಾಜ್ ಶೆಟ್ಟಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಮನೋಹರ ತೋನ್ಸೆ ಮತ್ತು ಕೃಷ್ಣ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು. ಸರ್ವೋತ್ತಮ ಶೆಟ್ಟಿಯವರು ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಮಾಜ ಸೇವಕ ಮಿತ್ರಂಪಾಡಿ ಜಯರಾಮ ರೈ ಯವರನ್ನು ಮತ್ತು ಬಿ.ಕೆ ಗಣೇಶ್ ರೈ,ನೃತ್ಯ ವಿದುಷಿ ಶ್ರೀಮತಿ ಸ್ವಪ್ನ ಕಿರಣ್ ಅವರನ್ನು ಗೌರವಿಸಲಾಯಿತು. ಮನೋಹರ ತೋನ್ಸೆಯವರು ಸಂಪಾದಕತ್ವದ “ದುಬಾಯಿಯಲ್ಲಿ ಧ್ವನಿ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಡಾ. ದ.ರಾ.ಬೇಂದ್ರೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ
ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಡಾ. ದ.ರಾ.ಬೇಂದ್ರೆ ಪ್ರಶಸ್ತಿಯನ್ನು ಕನ್ನಡ ಪಾಠ ಶಾಲೆ ದುಬೈ ಇದರ ಸಂಚಾಲಕರಾದ ಶಶಿಧರ್ ನಾಗರಾಜಪ್ಪರವರಿಗೆ ನೀಡಿ ಗೌರವಿಸಲಾಯಿತು.ಅಬುಧಾಬಿಯ ಶಾಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕರ್ನಾಟಕ ಮೂಲಕ ಮಕ್ಕಳಿಗೆ ಪ್ರತಿಭ ಪುರಸ್ಕಾರ ನೀಡಿ ಅಭಿನಂದಿಸಲಾಯಿತ್ತು.
ಹಾಸ್ಯ ಕವಿಗೋಷ್ಠಿಯ ನಗೆಗಡಲಲ್ಲಿ ತೇಲಾಡಿದ ಅರಬಿ ಕಡಲಿನ ಕನ್ನಡಿಗರು
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಹಾಸ್ಯ ಕಲಾವಿದೆ ಮಾತಿನ ಮಲ್ಲಿ ಸುಧಾ ಬರಗೂರು ರವರ ಹಾಸ್ಯ ಭಾಷಣವಂತು ಸೇರಿದ ಯುಎಇಯ ಕನ್ನಡಿಗರನ್ನು ನಗೆ ಕಡಲಲ್ಲಿ ತೇಲಾಡಿಸುವಂತಾಗಿಸಿತ್ತು.
ಕರೋನ ಸಂದರ್ಭ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ನಡೆದ ಘಟನೆಯ ವಿಷಯವನ್ನು ಹಾಸ್ಯದ ಭಾಷಣದ ಮೂಲಕ ಮಾತನಾಡಿ ಮನರಂಜಿಸಿದ್ದರು ಹಿರಿಯ ಕವಿಗಳ ಉಪಸ್ಥಿತಿಯಲ್ಲಿ ನಡೆದ ಹಾಸ್ಯ ಕವಿ ಗೋಷ್ಠಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು. ಹಾಸ್ಯ ಕವಿಗಳಾಗಿ ಶಶಿಧರ್ ನಾಗರಾಜಪ್ಪ,ಶ್ರೀಮತಿ ಚೇತನ ಶೇಖರ್,ಕೃಷ್ಣ ಕುಳಾಯಿ,ಚೆನ್ನಕೇಶವ, ಸರ್ವೋತ್ತಮ ಶೆಟ್ಟಿ, ಶ್ರೀಮತಿ ಶಾಂತ ಶಾಸ್ತ್ರಿಯವರು ಹಾಸ್ಯದ ಚುಟುಕು ಕವಿತೆ ಕವನಗಳನ್ನು ಓದಿ ಮನರಂಜಿಸಿದ್ದರು.
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)