ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿಗಳಾದ ಶ್ರೀ ಕೂಳೂರು ಕನ್ಯಾನ ಶ್ರೀ ಸದಾಶಿವ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ನೂತನ ಪದಾಧಿಕಾರಿಗಳ ಸಭೆಯು ಒಕ್ಕೂಟದ ಕಛೇರಿಯಲ್ಲಿ ಜರಗಿತು.
ನಡೆದ ಸಭೆಯಲ್ಲಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಸುಮಾರು 65 ಸೆಂಟ್ಸ್ ಜಮೀನನ್ನು ಖರೀದಿಸುವರೆ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಹಾಗೆಯೇ ಜಮೀನಿನ ಮಾಲಕರ ಜೊತೆ ಮಾತುಕತೆ ನಡೆಸಿದಂತೆ MOU ಮಾಡಿಕೊಳ್ಳಲಾಯಿತು.
ಸರ್ವಸಮ್ಮತಿಯಂತೆ ಈ ಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಕಟ್ಟಡಗಳ ವಿವಿಧ ರಚನೆಗಳನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಶ್ರೀ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಸಂಕೀರ್ಣವೆಂದು ನಾಮಕರಣ ಮಾಡುವುದಾಗಿ ನಿರ್ಣಯಿಸಲಾಯಿತು.
ಈ ಬಗ್ಗೆ ಮಹಾದಾನಿ ಶ್ರೀ ಸದಾಶಿವ ಶೆಟ್ಟಿ ಅವರು ತಮ್ಮ ಮನದಾಳದ ಮಾತುಗಳೊಂದಿಗೆ ಸಮ್ಮತಿಯನ್ನು ನೀಡಿದರು. ಹಾಗೆಯೇ ಅವರ ಕೊಡುಗೆಯು ಸಮಾಜದಲ್ಲಿ ಶಾಶ್ವತವಾಗಿ ಉಳಿಯುವಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಕಾಶೆಯಲ್ಲಿ ಮೂಡಿಬರುವುದಾಗಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ಅಧಿಕೃತವಾಗಿ ಘೋಷಿಸಿದರು.
ಐಕಳ ಹರೀಶ್ ಶೆಟ್ಟಿ ಅವರು ಮಾತನಾಡುತ್ತಾ ಮಹಾದಾನಿ ಶ್ರೀ ಸದಾಶಿವ ಶೆಟ್ಟಿ ಅವರು ಒಕ್ಕೂಟದ ನಿರ್ದೇಶಕರಾಗಿ ಬಂದು ಇವತ್ತು ಮಹಾದಾನಿಗಳಾಗಿ ಒಕ್ಕೂಟದ ಜನಪರ ಕಾರ್ಯಗಳಿಗೆ ಪೂರ್ಣ ಪ್ರಮಾಣದ ಹೃದಯಪೂರ್ವಕ ಸಹಕಾರವನ್ನು ನೀಡುವುದರ ಮೂಲಕ ನಮಗೆಲ್ಲಾ ಬಲ ತುಂಬಿದ್ದಾರೆ. ಇಂತಹ ಆದರ್ಶ ವ್ಯಕ್ತಿತ್ವವನ್ನು ಹೊಂದಿರುವ ಶ್ರೀ ಸದಾಶಿವ ಶೆಟ್ಟಿ ಅವರು ಸಿಕ್ಕಿದ್ದು ನಮ್ಮ ಪೂರ್ವಜನ್ಮದ ಪುಣ್ಯದ ಫಲ ಶ್ರೀದೇವಿಯ ಅಪಾರ ಭಕ್ತಿಯನ್ನು ಇಟ್ಟುಕೊಂಡ ಸದಾಶಿವ ಶೆಟ್ಟಿ ಅವರು ಸಮಾಜದ ಬಗ್ಗೆ ಕಾಳಜಿಯಿಂದ ನೋಂದವರ ಬಗ್ಗೆ ಕನಿಕರದಿಂದ ತಾನು ಮಾಡುವ ದಾನವು ಭಗವಂತನ ಪಾದ ಸೇರಲಿ ಎಂಬ ಅಭಿಲಾಷೆಯನ್ನು ಇಟ್ಟುಕೊಂಡು ಉತ್ಕೃಷ್ಟ ಮಟ್ಟದ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.
ಅವರನ್ನು ಶ್ರೀದೇವಿಯು ಸದಾ ಹರಸಲಿ ಮತ್ತು ಸಮಾಜಕ್ಕೆ ಅವರ ಕೊಡುಗೆ ಇನ್ನಷ್ಟು ಹರಿದು ಬರಲಿ ಎಂದು ಒಕ್ಕೂಟದ ಸರ್ವ ಸದಸ್ಯರ ಪರವಾಗಿ ಮತ್ತು ಸಮಾಜದ ಪರವಾಗಿ ನಾನು ವಿನಮ್ರವಾಗಿ ಶ್ರೀ ದೇವರ ಹತ್ತಿರ ಬೇಡಿಕೊಳ್ಳುತ್ತೇನೆ ಎಂದು ಈ ಸಂದರ್ಭದಲ್ಲಿ ನುಡಿದರು.