ಸಂಘಟಕ, ಸಮಾಜ ಸೇವಕ, ಯುವ ಉದ್ಯಮಿ ರಾಕೇಶ್ ಶೆಟ್ಟಿ ಬೆಳ್ಳಾರೆ ಅವರು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಕೋಶಾಧಿಕಾರಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವಿರುವ ರಾಕೇಶ್ ಶೆಟ್ಟಿ ಅವರು ಅತಿಥಿ ಎಂಬ ಸಸ್ಯಾಹಾರಿ ಹೋಟೆಲ್ ನ ಮಾಲಕರಾಗಿದ್ದಾರೆ.
ತನ್ನ ಸರಳ ಶಿಸ್ತಿನ ಗುಣ ನಡತೆಯಿಂದ ಎಲ್ಲರೊಂದಿಗೆ ಬೆರೆತು ಸುಖ ದುಃಖ ಗಳಿಗೆ ಸದಾ ಬೆರೆಯುವ ಶ್ರೀಯುತರ ಸಾಧನೆ, ಸಮಾಜಸೇವೆಗೆ ಧರ್ಮಪತ್ನಿ ಪೆಲತ್ತೂರು ಸುನೀತಾ ಶೆಟ್ಟಿ ಹಾಗೂ ಪುತ್ರಿ ಶ್ರೀಖಾ, ಪುತ್ರ ಕವಿನ್ ರವರು ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ.