ಮುಂಬಯಿ, ಸೆ.07: ಉಡುಪಿ ಹಿರಿಯಡ್ಕ ಇಲ್ಲಿನ ಕೊಂಡಾಡಿ ನಿವಾಸಿ ಶಾರದಾ ಯು.ಶೆಟ್ಟಿ (85.) ಕಳೆದ ಸೋಮವಾರ ವೃದ್ಧಾಪ್ಯ ಸಹಜತೆಯಿಂದ ತನ್ನ ಸ್ವನಿವಾಸದಲ್ಲಿ ನಿಧನರಾದರು.
ಕಟಪಾಡಿ ಅಚಾಡ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮೂಡಬೆಟ್ಟು ಗುತ್ತು ಕಟಪಾಡಿ ದಿವಂಗತ ಉಮಾನಾಥ ಶೆಟ್ಟಿ ಇವರ ಧರ್ಮಪತ್ನಿಯಾಗಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿದ್ದರು.
ಮೃತರು ಪ್ರೇಮನಾಥ ಶೆಟ್ಟಿ (ಜೋಗೇಶ್ವರಿ-ಮುಂಬಯಿ), ವಿಶ್ವನಾಥ ಶೆಟ್ಟಿ, ಶ್ರೀನಾಥ್ ಶೆಟ್ಟಿ, ಅಮರನಾಥ ಶೆಟ್ಟಿ (ನಾಲ್ಕು ಸುಪುತ್ರರು) ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಬುಧವಾರ (ಸೆ.07) ಬೆಳಗ್ಗೆ 9 ಗಂಟೆಗೆ ಉಡುಪಿ ಹಿರಿಯಡ್ಕ ಕುಧಿ ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನ ಕೊಂಡಾಡಿ ಸಮೀಪದ ಹತ್ತಿರ ನೆರವೇರಿಸಲ್ಪಟ್ಟಿತು.