ವಿಶ್ವಮಾನವ ಕುವೆಂಪು ಕಲಾನಿಕೇತನ ರಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಮಾನವ ಕುವೆಂಪು ಕಲಾ ಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ ಹಾಗೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಏಕೈಕ ಸಂಸ್ಥೆಯಿಂದ ಕುವೆಂಪು 118ನೇ ಜಯಂತಿ ಕರ್ನಾಟಕ ರತ್ನ ಡಾಕ್ಟರ್ ದೇ ಜವರೇಗೌಡ ಜಯಂತಿ ಗುರು-ಶಿಷ್ಯರ ಕಾರ್ಯಕ್ರಮದ ಪ್ರಯುಕ್ತ ವಿವಿಧ ಕನ್ನಡ ಸಾಂಸ್ಕೃತಿಕ ಉತ್ಸವ ಹಾಗೂ ಅಬುದಾಬಿ ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ ಕರ್ನಾಟಕ ರತ್ನ ಡಾಕ್ಟರ್ ದೇ ಜವರೇಗೌಡ ಪ್ರಶಸ್ತಿಯನ್ನು ಜು.06ರಂದು ಬುಧವಾರ ಸಂಜೆ 5.30 ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಯಿತು.
ಈ ಪ್ರಶಸ್ತಿಯನ್ನು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಟಿ. ಎಸ್ ನಾಗಾಭರಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ನಾಡೋಜ ಜೋಶಿ ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಿದರು ಈ ಸಂದರ್ಭದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಉದಾರ ಮನಸ್ಸಿನಿಂದ ಸರ್ವೊತ್ತಮ್ ಶೆಟ್ಟಿ ಯವರು ಸಿಕ್ಕಿದ ಗೌರವ ಧನವನ್ನು ಬೆಳಕು ಅಕಾಡೆಮಿಯ ಅಶ್ವಿನಿ ಅಂಗಡಿ ಯವರಿಗೆ ಹಸ್ತಾಂತರ ಮಾಡಿದರು.ಮತ್ತು ಈ ನಡೆ ಜನಮನ್ನಣೆಯನ್ನು ಪಡೆಯಿತು.