ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಹಳೆಯಂಗಡಿ, ಜೆಸಿಐ ಸುರತ್ಕಲ್ ಮತ್ತು ಕೆಎಂಸಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಾಚ್೯ 20 ಭಾನುವಾರ ಬೆಳಿಗ್ಗೆ 9 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಲಿದ್ದಾರೆ. ರಕ್ತದಾನ ಶಿಬಿರವನ್ನು ಸುರತ್ಕಲ್ ಶೆಟ್ಟೀಸ್ ಕ್ಲಿನಿಕ್ ನ ಡಾ. ಟಿ ಆರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಹಳೆಯಂಗಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸುರತ್ಕಲ್ ಜೆಸಿಐ ಅಧ್ಯಕ್ಷೆ ರಾಜೇಶ್ವರಿ ಡಿ ಶೆಟ್ಟಿ, ನಾಗೇಶ್ ಕುಮಾರ್ ಎನ್ ಜೆ ಉಪಸ್ಥಿತರಿರಲಿದ್ದಾರೆ ಎಂದು ವೈದ್ಯಕೀಯ ಸಮಿತಿಯ ಸಂಚಾಲಕ ಪ್ರತಾಪ್ ಶೆಟ್ಟಿ ತಿಳಿಸಿದ್ದಾರೆ.
Previous Articleರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳು ಸಿನಿಮಾ ಬಿಡುಗಡೆಗೆ ಸಿದ್ದ