ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿಯವರು ತುಳುನಾಡಿನ ಜಾನಪದ ದೈವರಾಧನೆಯ ಕ್ಷೇತ್ರದಲ್ಲಿ ಸುಮಾರು 26 ವರ್ಷ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅವರಿಗೆ 2011ರ ವಿಶ್ವತುಳು ಸಮ್ಮೇಳನದಲ್ಲಿ ಮದು ಮದಿಪು ಪಾರಿ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಬಂದಿತ್ತು. ಅವರು ಹಲವಾರು ಕಡೆ ದೈವರಾಧನೆಯ ವಿಚಾರಗೋಷ್ಠಿಯನ್ನು ನಡೆಸಿರುತ್ತಾರೆ. ನಮ್ಮ ಟಿವಿ, ನಮ್ಮ ಕುಡ್ಲ ಚಾನೆಲ್ ನಲ್ಲಿಯೂ ದೈವಾರಾಧನೆ ಕಾರ್ಯಕ್ರಮವನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಕೇಂದ್ರ ಸರಕಾರದ ಅಧೀನಕ್ಕೆ ಒಳಪಟ್ಟ ಡಿಡಿ, ಚಂದನ ದೂರದರ್ಶನದಲ್ಲಿಯೂ ದೈವಾರಾಧನೆ ಎಂಬ ವಿಚಾರವನ್ನು ಮಂಡಿಸಿರುತ್ತಾರೆ. ಇವರಿಗೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ, ಪುರಸ್ಕಾರಗಳನ್ನು ಪಡೆದು ಕರ್ನಾಟಕ ಸರಕಾರ ಕೊಡಮಾಡುವ 2026ರ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.





















































































































