‘ತುಳು ಸಿರಿ ಮುಂಬಯಿ’ ನೂತನ ಸಂಸ್ಥೆಯ ಉದ್ಘಾಟನಾ ಸಮಾರಂಭವು ಅಕ್ಟೋಬರ್ 31 ರ ಶನಿವಾರದಂದು ಮಧ್ಯಾಹ್ನ 2 ಗಂಟೆಗೆ ಕುರ್ಲಾ ಪೂರ್ವದ ಬಂಟರ ಸಂಘದ ಎನೆಕ್ಸ್ ಸಭಾಗೃಹದಲ್ಲಿ ಜರಗಲಿದೆ. ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ತುಳುಸಿರಿ ಮುಂಬಯಿ ಸಂಸ್ಥೆಯ ರೂವಾರಿ ಹಾಗೂ ಅಧ್ಯಕ್ಷೆ ಹರಿಣಿ ಎಂ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ, ಬೋoಬೆ ಬಂಟ್ಸ್ ಎಸೋಸಿಯೇಶನ್ ಅಧ್ಯಕ್ಷ ಅಡ್ವಕೇಟ್ ಡಿ.ಕೆ ಶೆಟ್ಟಿ, ಬಂಟರ ಸಂಘ ಮುಂಬಯಿ ಎಸ್.ಎಂ ಶೆಟ್ಟಿ ವಿದ್ಯಾ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್ ನಿರ್ದೇಶಕ ಉದಯ ಸುಂದರ್ ಶೆಟ್ಟಿ, ಬಂಟರ ಸಂಘ ಮುಂಬಯಿ ಮಧ್ಯ ವಲಯದ ಸಮನ್ವಯಕ ರವೀಂದ್ರನಾಥ ಭಂಡಾರಿ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಕವಿತಾ ಐ.ಅರ್ ಶೆಟ್ಟಿ, ಮುಲುoಡ್ ಬಂಟ್ಸ್ ಮಹಿಳಾ ವಿಭಾಗದ ಅಧ್ಯಕ್ಷೆ ಶಶಿಪ್ರಭಾ ಕರುಣಾಕರ್ ಶೆಟ್ಟಿ, ಜಿ.ಎಸ್ ಶೆಟ್ಟಿ ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯಾಧ್ಯಕ್ಷ ಶಂಕರ್ ಶೆಟ್ಟಿ, ಘಾಟ್ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾ ಬಾಳಿಕೆ ಹಾಗೂ ತಿಲಕ್ ನಗರ ಪೆಸ್ತಮ್ ಸಾಗರ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ರಾಮಣ್ಣ ದೇವಾಡಿಗ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭದ ಅಂಗವಾಗಿ ವಿಶೇಷ ಕವಿಗೋಷ್ಠಿ ನಡೆಯಲಿದ್ದು, ಬಂಟರ ಸಂಘ ಮುಂಬಯಿ ಸಿಟಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಅಶೋಕ್ ಪಕ್ಕಳ ಅಧ್ಯಕ್ಷತೆ ವಹಿಸುವರು. ನಂದಳಿಕೆ ನಾರಾಯಣ ಶೆಟ್ಟಿ, ಸೋಮನಾಥ ಕರ್ಕೇರ, ಡಾ. ಜಿ.ಪಿ ಕುಸುಮಾ, ಪ್ರಮೋದಾ ಮಾಡ, ಅಶೋಕ್ ವಳದೂರು, ದೀಪಾ ಹರೀಶ್ ಶೆಟ್ಟಿ, ರಮೇಶ್ ಶಿವಪುರ, ವಾಣಿ ರಘುನಾಥ್, ಕುಮುದಾ ಡಿ ಶೆಟ್ಟಿ, ಭೂಮಿಕಾ ಎಂ ಶೆಟ್ಟಿ, ರಮಣ್ ಶೆಟ್ಟಿ ರೆoಜಾಳ, ಶಾಂತಾ ಎನ್ ಶೆಟ್ಟಿ, ದೇಜಪ್ಪ ಶೆಟ್ಟಿ, ಅಶ್ವಿತಾ ಶೆಟ್ಟಿ, ಉಷಾ ಶೆಟ್ಟಿ, ಜಗದೀಶ್ ಶೆಟ್ಟಿ ನಂದಳಿಕೆ, ಸತೀಶ್ ಶೆಟ್ಟಿ ಕಣಂಜಾರು ಹಾಗೂ ಜ್ಯೋತಿ ಶೆಟ್ಟಿ ತಮ್ಮ ಕವನಗಳನ್ನು ವಾಚಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮುಂಬಯಿ ಹಾಗೂ ಊರಿನ ಕವಿಗಳು ರಚಿಸಿದ ಕವನಗಳ ಸಂಕಲನ ‘ಬಿತ್ತುಲ್ದ ಸೊತ್ತಲು’ ಪುಸ್ತಕವನ್ನು ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ ಲೋಕಾರ್ಪಣೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ತುಳುಸಿರಿ ಮುಂಬಯಿ ಅಧ್ಯಕ್ಷೆ ಹರಿಣಿ ಎಂ ಶೆಟ್ಟಿ ವಹಿಸಿಕೊಳ್ಳಲಿದ್ದಾರೆ. ‘ಸಾಫಲ್ಯ’ ಪತ್ರಿಕೆಯ ಸಂಪಾದಕಿ ಡಾ. ಜಿ.ಪಿ ಕುಸುಮಾ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ತದನಂತರ ‘ತುಳು ಸಂಸ್ಕೃತಿ: ಅಂದು ಮತ್ತು ಇಂದು’ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಇದರಲ್ಲಿ ಲೇಖಕ ಹಾಗೂ ರಂಗ ನಿರ್ದೇಶಕ ನಾರಾಯಣ ಶೆಟ್ಟಿ ನಂದಳಿಕೆ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ಅಶೋಕ್, ಪಕ್ಕಳ ವಿಚಾರ ಮಂಡಿಸಲಿದ್ದಾರೆ. ಈ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಂಬಯಿಯ
ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತುಳುಸಿರಿ ಮುಂಬಯಿ ಅಧ್ಯಕ್ಷೆ ಹರಿಣಿ ಎಂ ಶೆಟ್ಟಿ ಹಾಗೂ ಪದಾಧಿಕಾರಿಗಳಾದ ಗುಣವತಿ ಡಿ ಶೆಟ್ಟಿ, ಸುಗಂಧಿ ಎಸ್ ಶೆಟ್ಟಿ, ಡಾ. ಜಿ.ಪಿ ಕುಸುಮಾ, ದೀಪಾ ಹರೀಶ್ ಶೆಟ್ಟಿ, ಮನಾಲಿ ಪಿ ಶೆಟ್ಟಿ, ಸುಜಲಾ ಅಜಿತ್ ಶೆಟ್ಟಿ, ವಾಣಿ ಎಸ್ ಶೆಟ್ಟಿ, ಪ್ರವೀಣಾ ಪಿ ಶೆಟ್ಟಿ ಮತ್ತು ಶೋಭಾ ಎಸ್ ಶೆಟ್ಟಿ ವಿನಂತಿಸಿದ್ದಾರೆ.





















































































































