ಮುಂಬಯಿ ಉಪನಗರಗಳ ಮತ್ತು ಮಹಾನಗರದಾದ್ಯಂತದ ಲೆಕ್ಕ ಪರಿಶೋಧಕರಿಂದ ಕೈಗಾರಿಕೋದ್ಯಮಿ, ವ್ಯಾಪಾರಸ್ಥರ, ಹೋಟೆಲ್ ವ್ಯವಹಾರಗಳ ಲೆಕ್ಕಪತ್ರಗಳ ಮಹತ್ವದ ಕಾರ್ಯವು ನಡೆಯುತ್ತಿದೆ. ಇದರಲ್ಲಿ ನಮ್ಮ ಬಂಟ ಸಮಾಜದ ಲೆಕ್ಕ ಪರಿಶೋಧಕರು ಹೆಚ್ಚಾಗಿ ಕಾರ್ಯತತ್ವರರಾಗಿದ್ದಾರೆ ಎನ್ನಲು ಸಂತೋಷವಾಗುತ್ತಿದೆ. ಇಂದು ಇಲ್ಲಿ ನಗರದ ಹಿರಿಯ ಲೆಕ್ಕಪರಿಶೋಧಕರಾದ ಸಿಎ ಚಂದ್ರಶೇಖರ ವಜೆ ಮತ್ತು ಸಿಎ ಆರ್.ಕೆ ಮಹಾಪಾತ್ರ ಅವರಿಂದ ಲೆಕ್ಕ ಪರಿಶೋಧಕರ ಲೆಕ್ಕಪತ್ರಗಳ ಬಗ್ಗೆ ಮತ್ತು ಹೊಸ ನಿಯಮಗಳ ಸೇರ್ಪಡೆ ಬಗ್ಗೆ ಮತ್ತು ಸರಕಾರದ ನಿಯಮ ಕಾನೂನುಗಳ ಬಗ್ಗೆ ವಿಶೇಷ ಉಪನ್ಯಾಸ ನಡೆದಿದೆ. ಇದರಿಂದಾಗಿ ಲೆಕ್ಕಪರಿಶೋಧಕರಿಗೆ ತಿಳಿಯದ ಕೆಲವು ಮಾಹಿತಿ ಸಿಗುತ್ತದೆ. ನಮ್ಮ ಸಂಘಟನೆಗೆ ಹೊಸ ಲೆಕ್ಕಪರಿಶೋಧಕರ ಸೇರ್ಪಡೆ ಕೂಡಾ ನಡೆಯುತ್ತಿದೆ. ನಗರದ ಎಲ್ಲಾ ಬಂಟ ಲೆಕ್ಕ ಪರಿಶೋಧಕರು ಸಂಘಟನೆಯಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿದೆ. ಬಂಟ್ಸ್ ಲೆಕ್ಕ ಪರಿಶೋಧಕರ ಸಂಘಟನೆಗೆ ಎಲ್ಲರ ಸಹಕಾರ ನಿರಂತರವಾಗಿರಲಿ ಎಂದು ಎಸೋಸಿಯೇಶನ್ ಆಫ್ ಬಂಟ್ಸ್ ಚಾರ್ಟೆಡ್ ಅಕೌಂಟೆಂಟ್ಸ್ ಮುಂಬಯಿಯ ಅಧ್ಯಕ್ಷ ಸಿಎ ಜಗದೀಶ್ ಬಿ ಶೆಟ್ಟಿ ನುಡಿದರು. ಅವರು ಅಕ್ಟೋಬರ್ 25ರ ಆದಿತ್ಯವಾರದಂದು ಮುಲುಂಡ್ ಪಶ್ಚಿಮದ ಶಿಲ್ಪಾ ರೆಸಿಡೆನ್ಸಿ ಹೋಟೆಲಿನ ಸಭಾಂಗಣದಲ್ಲಿ ನಡೆದ ಎಸೋಸಿಯೇಶನ್ ಆಫ್ ಬಂಟ್ಸ್ ಚಾರ್ಟೆಡ್ ಅಕೌಂಟೆಂಟ್ಸ್ ಮುಂಬಯಿಯ ವಿಚಾರ ಸಂಕಿರಣ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.




ನಗರದ ಹಿರಿಯ ಲೆಕ್ಕ ಪರಿಶೋಧಕರಾದ ಸಿಎ ಚಂದ್ರಶೇಖರ ವಜೆ ಮತ್ತು ಸಿಎ ಆರ್.ಕೆ ಮಹಾಪಾತ್ರ ಅವರಿಂದ ಲೆಕ್ಕಪರಿಶೋಧಕ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು. ಪ್ರಾಯೋಜಕರಾಗಿ ಸಹಕರಿಸಿದ ಅಜಯ್ ಕಾನೇಕರ್ ತಂಡದಿಂದ ಲೆಕ್ಕಪತ್ರ ತಿಳುವಳಿಕೆ ಮಾಹಿತಿಗಳನ್ನು ಕ್ರೂಢೀಕರಿಸುವ ಆಪ್ ಗಳ ಬಗ್ಗೆ ಮಾಹಿತಿ ನೀಡಲು ತಮ್ಮ ಸಂಸ್ಥೆ ಸಹಕರಿಸುವುದಾಗಿ ತಿಳಿಸಿದರು. ಸಂಘಟನೆಯ ಹಿರಿಯ ವ್ಯಕ್ತಿ ಹಾಗೂ ಸಂಚಾಲಕ ಸಿಎ ಶಂಕರ್ ಬಿ ಶೆಟ್ಟಿ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ನಮ್ಮ ಲೆಕ್ಕ ಪರಿಶೋಧಕರಿಗೆ ವಿಶೇಷ ಮಾರ್ಗದರ್ಶನ ನೀಡಿದಂತಾಗುತ್ತದೆ. ಕಿರಿಯ ಲೆಕ್ಕ ಪರಿಶೋಧಕರಿಗೆ ಇದೊಂದು ವಿಶೇಷ ವಿಷಯ. ನಾನು ಬಂಟರ ಸಂಘದ ಅಧ್ಯಕ್ಷನಾಗಿದ್ದಾಗಲೂ ಎಲ್ಲರ ಸಹಕಾರ ಸಿಕ್ಕಿದೆ. ಇದೀಗ ನಮ್ಮ ಸಂಘಟನೆಗೆ ಎಲ್ಲರ ಸಹಕಾರ ನಿರಂತರವಾಗಿರಲಿ ಎಂದರು. ಆರಂಭದಲ್ಲಿ ಗಣಪತಿ ಸ್ತುತಿಯೊಂದಿಗೆ ವೇದಿಕೆಯ ಗಣ್ಯರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.



ವೇದಿಕೆಯಲ್ಲಿ ಎಸೋಸಿಯೇಶನ್ ಆಫ್ ಬಂಟ್ಸ್ ಚಾರ್ಟೆಡ್ ಅಕೌಂಟೆಂಟ್ಸ್ ಮುಂಬಯಿಯ ಅಧ್ಯಕ್ಷ ಸಿಎ ಜಗದೀಶ್ ಬಿ ಶೆಟ್ಟಿ, ಸಂಚಾಲಕ ಸಿಎ ಶಂಕರ್ ಬಿ ಶೆಟ್ಟಿ, ಉಪಾಧ್ಯಕ್ಷ ಸಿಎ ರಮೇಶ್ ಬಿ ಶೆಟ್ಟಿ ಇನ್ನ, ಕಾರ್ಯದರ್ಶಿ ಸಿಎ ರೋಹಿತ್ ಶೆಟ್ಟಿ, ಕೋಶಾಧಿಕಾರಿ ಸಿಎ ಮಹೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಎಸೋಸಿಯೇಶನ್ ಆಫ್ ಬಂಟ್ಸ್ ಚಾರ್ಟೆಡ್ ಅಕೌಂಟೆಂಟ್ಸ್ ಮುಂಬಯಿಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸಿಎ ವಿಶ್ವನಾಥ್ ಶೆಟ್ಟಿ, ಸಿಎ ಸತೀಶ್ ಶೆಟ್ಟಿ, ಸಿಎ ಪ್ರದೀಪ್ ಶೆಟ್ಟಿ, ಸಿಎ ಹರೀಶ್ ಶೆಟ್ಟಿ, ಸಿಎ ಅಶೋಕ್ ಶೆಟ್ಟಿ, ಸಿಎ ಶ್ರೀನಿವಾಸ್ ಶೆಟ್ಟಿ, ಸಿಎ ಗಣೇಶ್ ಶೆಟ್ಟಿ, ಸಿಎ ಪ್ರಕಾಶ್ ಶೆಟ್ಟಿ, ಸಿಎ ಬಿ.ಕೆ ರೈ, ಸಿಎ ರಾಜಶ್ರೀ ಜಿ ಶೆಟ್ಟಿ, ಸಿಎ ಆಶೀಶ್ ಶೆಟ್ಟಿ, ಸಿಎ ಸುಧೀರ್ ಶೆಟ್ಟಿ, ಸಿಎ ಉದಯ್ ಶೆಟ್ಟಿ, ಸಿಎ ಎ.ಎಂ ಶೆಟ್ಟಿ, ಸಿಎ ಶಾಮ್ ಸುಂದರ್ ಶೆಟ್ಟಿ, ಸಿಎ ಸಂಜೀವ ಶೆಟ್ಟಿ, ಸಿಎ ಅಂಬರೀಶ್ ಶೆಟ್ಟಿ, ಸಿಎ ಹೇಮಂತ್ ಶೆಟ್ಟಿ, ಸಿಎ ರವೀಂದ್ರ ಶೆಟ್ಟಿ, ಸಿಎ ವಿದ್ಯಾ ಶೆಟ್ಟಿ, ಸಿಎ ರಮಣಿ ಶೆಟ್ಟಿ, ಸಿಎ ಮಿಹಿರ್ ಶೆಟ್ಟಿ, ಸಿಎ ರೋಹನ್ ಶೆಟ್ಟಿ, ಸಿಎ ಕಾರ್ತಿಕ್ ಶೆಟ್ಟಿ, ಸಿಎ ಕೀರ್ತಿ ಶೆಟ್ಟಿ, ಸಿಎ ವಿನೋದ್ ಕುಮಾರ್, ಸಿಎ ಸಿದ್ಧಾಂತ ಶೆಟ್ಟಿ, ಸಿಎ ದೀಪಾಶ್ರೀ ಶೆಟ್ಟಿ, ಸಿಎ ದಿನೇಶ್ ಶೆಟ್ಟಿ, ಸಿಎ ರೂಪೇಶ್ ಶೆಟ್ಟಿ, ಸಿಎ ಸುಭಾಷ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಸಿಎ ರಾಜಶ್ರೀ ಜಿ ಶೆಟ್ಟಿ ಕಾರ್ಯಕ್ರಮದ ನಿರೂಪಣೆಗೈದರು. ಕಾರ್ಯದರ್ಶಿ ಸಿಎ ರೋಹಿತ್ ಶೆಟ್ಟಿ ವಂದನಾರ್ಪಣೆಗೈದರು.


















































































































