ಸಮಾಜದಲ್ಲಿ ನಾವು ಶಾಶ್ವತವಲ್ಲ. ಬದಲಾಗಿ ನಮ್ಮ ಸೇವೆ, ಕರ್ತವ್ಯ ಹಾಗೂ ಕೀರ್ತಿಗಳು ಶಾಶ್ವತ ಎಂದು ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಘ್ನೇಶ್ ಭಟ್ ಹೇಳಿದರು. ಅವರು ರವಿವಾರ ಕೀರ್ತಿಶೇಷ ಬೋಳ ಸುಬ್ಬಯ್ಯ ವಿ ಶೆಟ್ಟಿ ವೇದಿಕೆಯಲ್ಲಿ ಬೆಳ್ಮಣ್, ನಂದಳಿಕೆ, ಸೂಡ, ಬೋಳ, ಕೆದಿಂಜೆ, ಕಲ್ಯಾ ಹಾಗೂ ಕಾಂತಾವರ ಗ್ರಾಮಗಳ ಒಕ್ಕೂಟದ ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ಸಭಾಭವನದ ಶಿಲಾನ್ಯಾಸ, ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಮಾವೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ ಬಡವರಲ್ಲಿ ದೇವರನ್ನು ಕಾಣುವುದೇ ಬಂಟರ ಗುಣವಾಗಿದ್ದು, ನಮ್ಮ ಸಂಸ್ಕಾರ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕೆಲಸವು ನಡೆಯಬೇಕಾಗಿದೆ ಎಂದರು. ಬೋಳ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಾಲಯದ ಅರ್ಚಕ ಶ್ರೀನಿವಾಸ ಭಟ್ ಹಾಗೂ ಸಂಘದ ಸ್ಥಾಪಕ ಗೌರವಾಧ್ಯಕ್ಷರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಠಲ ಶೆಟ್ಟಿ ಬೇಲಾಡಿ ಶುಭ ಶುಭಾಶಂಸನಿಗೈದರು.




ಸಂಘದ ಅಧ್ಯಕ್ಷ ಶೋಧನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಮುಂಬೈಯ ಉದ್ಯಮಿ ಬೋಳ ರಘುರಾಮ ಕೆ ಶೆಟ್ಟಿ, ಮುಂಬೈ ಕೃಷ್ಣ ಪ್ಯಾಲೇಸ್ ನ ಸಿಎಂಡಿ ಕೃಷ್ಣ ವೈ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮುಂಬೈ ಹೋಟೆಲ್ ರಾಮಕೃಷ್ಣದ ಮಾಲಕ ಚಂದ್ರಶೇಖರ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಮಾಜಿ ಕಾರ್ಯದರ್ಶಿ ರಿತೇಶ್ ಕುಮಾರ್ ಶೆಟ್ಟಿ ಸೂಡ, ನಿವೃತ್ತ ಬ್ಯಾಂಕ್ ಪ್ರಬಂಧಕ ಬಾಲಚಂದ್ರ ಶೆಟ್ಟಿ, ಪಡುಬಿದ್ರೆ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ತುಕರಾಮ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಕೃಷ್ಣ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟರ ಸಂಘದ ಪ್ರೇರಕ ಶಕ್ತಿಗಳಾದ ರಘುರಾಮ ಕೆ ಶೆಟ್ಟಿ ಹಾಗೂ ಕೃಷ್ಣ ವೈ ಶೆಟ್ಟಿ ದಂಪತಿಗಳನ್ನು ಈ ಸಂಧರ್ಭ ಗೌರವಿಸಲಾಯಿತು. ಸಾಯಿನಾಥ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷರಾದ ವಿಕಾಸ್ ಶೆಟ್ಟಿ ಬೋಳ ಪರಾರಿ ವಂದಿಸಿದರು.


















































































































