ಕುಂದಾಪುರ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದವರು ಮಂದಾರ್ತಿಯಲ್ಲಿ ಆಯೋಜಿಸಿದ ವಾರ್ಷಿಕ ವಿಶೇಷ ಶಿಬಿರದಲ್ಲಿ ಎನ್ಎಸ್ಎಸ್ ವ್ಯಕ್ತಿತ್ವ ವಿಕಸನದ ಗರಡಿಮನೆ ಎಂಬ ವಿಷಯದ ಕುರಿತು ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿ ಶಾರದಾ ಕಾಲೇಜು ಬಸ್ರೂರಿನ ನಿವ್ರತ್ತ ಪ್ರಾoಶುಪಾಲರಾದ ಶ್ರೀ ಗಣಪಯ್ಯ ಶೆಟ್ಟಿ ಅವರು ಮಾತನಾಡಿ, ಜೀವನದಲ್ಲಿ ಶಿಸ್ತು, ಸಮಯಪಾಲನೆ, ಉತ್ತಮ ಚಿಂತನೆ, ಆತ್ಮವಿಶ್ವಾಸ ಮತ್ತು ಸೇವಾ ಮನೋಭಾವವನ್ನು ಸ್ವಯಂ ಸೇವಕರು ಅಳವಡಿಸಿಕೊಳ್ಳಬೇಕು. ನಾಯಕತ್ವ ಗುಣಗಳೊಂದಿಗೆ ಬದುಕಿನ ಮೌಲ್ಯವನ್ನು ತಿಳಿಯಲು ಎನ್ಎಸ್ಎಸ್ ಒಂದು ಒಳ್ಳೆಯ ವೇದಿಕೆ ಎಂದರು. ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ, ಮಂದಾರ್ತಿ ಇಲ್ಲಿನ ನಿವೃತ್ತ ಶಿಕ್ಷಕರಾದ ಉದಯ್ ಭಾಸ್ಕರ್ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.




ಮುಖ್ಯ ಅತಿಥಿಗಳಾಗಿ ಎಲ್ಐಸಿ ಡೆವಲಪ್ಮೆಂಟ್ ಆಫೀಸರ್ ದೇವಾನಂದ ಶೆಟ್ಟಿ ಹೆಗ್ಗುಂಜೆ, ಶ್ರೀ ದುರ್ಗಾಪರಮೇಶ್ವರಿ ದೇವಳದ ಪದವಿ ಪೂರ್ವ ಕಾಲೇಜು ಮಂದಾರ್ತಿ ಇಲ್ಲಿನ ವಾಣಿಜ್ಯ ಉಪನ್ಯಾಸಕರಾದ ಆತ್ಮರಾಜ್ ಶೆಟ್ಟಿ ಹಾಗೂ ಪ್ರಾಕ್ತನ ವಿದ್ಯಾರ್ಥಿ ನಿಖಿಲ್ ಬಾರಾಳಿ ಹಾಗೂ ಎನ್.ಎಸ್.ಎಸ್ ಶಿಬಿರಾಧಿಕಾರಿಗಳಾದ ರಾಜೇಶ್ ಶೆಟ್ಟಿ ವಕ್ವಾಡಿ, ಪೂಜಾ ಕುಂದರ್ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಸ್ವಯಂಸೇವಕರಾದ ಅನುಶ್ರೀ ನಿರೂಪಿಸಿ, ಅಶ್ವಿತಾ ಸ್ವಾಗತಿಸಿ, ರೋನಿತ್ ಕುಮಾರ್ ಶೆಟ್ಟಿ ವಂದಿಸಿ, ಪ್ರತೀಕ್ಷಾ ಅತಿಥಿಗಳನ್ನು ಪರಿಚಯಿಸಿದರು.


















































































































