ಥಾಣೆ ಬಂಟ್ಸ್ ಅಸೋಸಿಯೇಷನ್ ಇದರ 22ನೇ ವರ್ಷದ ವಾರ್ಷಿಕ ಮಹಾಸಭೆಯು ಅಕ್ಟೋಬರ್ 18ರಂದು ಬೆಳಿಗ್ಗೆ 10 ಗಂಟೆಗೆ ಮುಲುಂಡ್ ಚೆಕ್ ನಾಕ ಹತ್ತಿರವಿರುವ ಹೋಟೆಲ್ ವುಡ್ ಲ್ಯಾಂಡ್ ರಿಟ್ರೇಟ್ ಸಭಾಂಗಣದಲ್ಲಿ ನಡೆಯಲಿದೆ. ಥಾಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಶೋಕ್ ಎಂ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನೆರವೇರಲಿರುವ ಈ ಮಹಾಸಭೆಯಲ್ಲಿ ಕಳೆದ ವರ್ಷದ ವಾರ್ಷಿಕ ಮಹಾಸಭೆಯ ವರದಿ ವಾಚನ, ಪ್ರಸ್ತುತ ವರ್ಷದ ಸಂಸ್ಥೆಯ ಕಾರ್ಯಚಟುವಟಿಕೆಯ ವರದಿ ವಾಚನ, ಲೆಕ್ಕಪರಿಶೋಧಕರಿಂದ ಪರಿಶೋಧಿಸಲ್ಪಟ್ಟ 2025-26 ನೇ ವರ್ಷದ ಲೆಕ್ಕಪತ್ರಗಳ ಮಂಡನೆ, 2026-27 ನೇ ಸಾಲಿಗೆ ಅಧಿಕೃತ ಲೆಕ್ಕಪರಿಶೋಧಕರ ನೇಮಕ ಜೊತೆಗೆ 2026-28 ರ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಪದಗ್ರಹಣ ಕಾರ್ಯಕ್ರಮಗಳು, ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರಗಲಿವೆ.
ಈ ಈ ಕಾರ್ಯಕ್ರಮಕ್ಕೆ ಸದಸ್ಯರು, ಸಮಾಜ ಬಾಂಧವರೆಲ್ಲರೂ ಸಮಯಕ್ಕೆ ಸರಿಯಾಗಿ ಬಂದು ಉಪಸ್ಥಿತರಿದ್ದು, ಯೋಗ್ಯ ಸಲಹೆ, ಸೂಚನೆ, ಮಾರ್ಗದರ್ಶನವನ್ನು ನೀಡಿ ಸಹಕರಿಸುವಂತೆ ಥಾಣೆ ಬಂಟ್ಸ್ ಅಸೋಸಿಯೇಷನ್ ನ ಉಪಾಧ್ಯಕ್ಷ ಚಂದ್ರಶೇಖರ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಗೌರವ ಕೋಶಾಧಿಕಾರಿ ಸುರೇಶ್ ಎಲ್ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪರಾಜ್ ಎಲ್ ಶೆಟ್ಟಿ, ಜೊತೆ ಕೋಶಾಧಿಕಾರಿ ಶಶಿ ಶೆಟ್ಟಿ ಕಟಪಾಡಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮೋಹಿನಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಿನಿತ್ ಶೆಟ್ಟಿ ಮತ್ತು ಸ್ಥಾಪಕರು, ಮಾಜಿ ಅಧ್ಯಕ್ಷರುಗಳು, ಕಾರ್ಯಕಾರಿ ಸಮಿತಿಯವರು, ಮಹಿಳಾ ಮತ್ತು ಯುವ ವಿಭಾಗದವರು ವಿನಂತಿಸಿಕೊಂಡಿದ್ದಾರೆ.





















































































































