ಮನುಷ್ಯ ಭೂಮಿಯನ್ನು ಕಾಣಬೇಕಾದರೆ, ಸಂಸಾರ ನಡೆಸಬೇಕಾದರೆ ಭಗವಂತನ ಅನುಗ್ರಹ ಬೇಕು. ಭಗವಂತನ ಅನುಗ್ರಹ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡಲು ಸಾಧ್ಯವಿಲ್ಲ. ಸಂಸಾರ ಎಂಬ ಸಾಗರವನ್ನು ದಾಟುವುದು ಸುಲಭದ ಕೆಲಸವಲ್ಲ. ಆಗಾಗ ಭಗವಂತನ ಆರಾಧನೆಯಿಂದ ಎಲ್ಲವೂ ಸುಲಭ ಸಾಧ್ಯವಾಗುತ್ತದೆ ಎಂದು ಶೀರೂರು ಮಠ ಪರ್ಯಾಯ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹೇಳಿದರು. ಅವರು ರಾಜಾಂಗಣದಲ್ಲಿ ಉಡುಪಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ 4ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಯೂನಿಯನ್ ಬ್ಯಾಂಕಿನ ಪ್ರಬಂದಕ ಅಶೋಕ್ ಭಾಂಡಗೆ ಮಾತನಾಡಿ, ಭಾರತ ದೇಶದಲ್ಲಿ ನೆಲದಲ್ಲಿ ಹುಟ್ಟಿದ ನಾವು ಪುಣ್ಯವಂತರು. ಇಲ್ಲಿ ನೆಲ, ಜಲ, ಕಾಡು, ಮೇಡು, ಪ್ರಕೃತಿ ಸೌಂದರ್ಯ ಬೇರೆ ಯಾವ ದೇಶದಲ್ಲಿಯೂ ಕೂಡಾ ಇರಲಿಕ್ಕಿಲ್ಲ ಎಂದರು.




ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೃಷ್ಣಕುಲಾಲ್ ಅವರನ್ನು ಸಮ್ಮಾನಿಸಲಾಯಿತು. ಸಾಯಿರಾಧ ಗ್ರೂಪಿನ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ, ಕಾರ್ತಿಕ್ ಎಸ್ಟೇಟಿನ ಹರಿಯಪ್ಪ ಕೋಟ್ಯಾನ್, ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ, ಬೈಲೂರು ಶ್ರೀ ರಾಮಕೃಷ್ಣ ಶಾರದಾ ಆಶ್ರಮ ಸ್ಥಾಪಕಿ ಸುಮತಾ ಆರ್ ನಾಯಕ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ನಾಗರಾಜ ಶೆಟ್ಟಿ, ಉದ್ಯಮಿಗಳಾದ ಲಕ್ಷ್ಮಣ ಅಮೀನ್, ವಿ.ಜಿ ಶೆಟ್ಟಿ, ಯುವರಾಜ ಮಸ್ಕತ್, ನಿರೂಪಮಾ ಪ್ರಸಾದ್ ಶೆಟ್ಟಿ, ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು. ಜಯಲಕ್ಷ್ಮೀ ಅಮೀನ್ ನಿರೂಪಿಸಿದರು.


















































































































