ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ ಕ್ರಿಸ್ತು ಜಯಂತಿ ಯುನಿವರ್ಸಿಟಿ ನಡೆಸಿದ ಬಿ.ಎ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ರಿತಿಕ್ ಶೆಟ್ಟಿ ಅವರನ್ನು ಸಂಘದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಸಂಘದ ಪೋಷಕರಾದ ಬಾದಾಮಿಯ ಹೋಟೆಲ್ ಉದ್ಯಮಿ ಚುಚ್ಚಿ ರಾಮ ಶೆಟ್ಟಿ ಸನ್ಮಾನಿಸಿ ಶುಭ ಹಾರೈಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಡಾ| ಚೇತನ್ ಶೆಟ್ಟಿ ಕೋವಾಡಿ, ಸ್ಥಾಪಕಾಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಸಂಘದ ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಶಿರೂರು, ಹರ್ಷವರ್ಧನ್ ಶೆಟ್ಟಿ ಕಟ್ಕೇರಿ, ಅಭಿನ್ ಶೆಟ್ಟಿ ವಂಡ್ಸೆ, ಚಂದ್ರಶೇಖರ್ ಶೆಟ್ಟಿ ಹೊಸೂರು ದಂಪತಿಗಳು ಹಾಗೂ ಹೈದರಾಬಾದ್ ಹೋಟೆಲ್ ಉದ್ಯಮಿಗಳಾದ ಪ್ರವೀಣ್ ಶೆಟ್ಟಿ, ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.





















































































































