ಬಂಟರ ಸಂಘ (ರಿ) ಸುರತ್ಕಲ್ ನಲ್ಲಿ ಯಕ್ಷ ಸಿರಿ ಯಕ್ಷಗಾನ ತರಬೇತಿ ಕೇಂದ್ರದ ಚತುರ್ಥ ವಾರ್ಷಿಕೋತ್ಸವ ಸಮಾರಂಭವು ಅಕ್ಟೋಬರ್ 17 ರ ಶನಿವಾರ ಸಂಜೆ 4 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ. ಯಕ್ಷಸಿರಿಯ ವಿದ್ಯಾರ್ಥಿಗಳ ಮತ್ತು ಇತರ ಕಲಾವಿದರ ಕೂಡುವಿಕೆಯೊಂದಿಗೆ “ದಶಾವತಾರ” ಯಕ್ಷಗಾನ ಬಯಲಾಟ ನಡೆಯಲಿದ್ದು, ಸಂಜೆ 7 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸುರತ್ಕಲ್ ಗೋವಿಂದದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್ ಎಸ್.ಜಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಬಂಟರ ಸಂಘ ಸುರತ್ಕಲ್ ನ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ವಹಿಸಲಿದ್ದಾರೆ.




ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾ ಸಂಘಟಕ, ಯಕ್ಷವೈಭವ ಕಾಟಿಪಳ್ಳದ ಮಾಧವ ಎಸ್ ಶೆಟ್ಟಿ ಬಾಳ, ಶ್ರೀ ಸತ್ಯನಾರಾಯಣ ಮತ್ತು ಶನಿದೇವರ ಪೂಜಾ ಸಮಿತಿ ಇಡ್ಯಾ ಕಟ್ಲದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಟ್ಲ ಬಾಳಿಕೆ, ಇಂಡಿಯನ್ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಏರಿಯಾ ಡೆವಲಪ್ಮೆಂಟ್ ಅಧಿಕಾರಿ ಸುಮಾ ಚಂದ್ರಶೇಖರ ಎಂ.ಎ, ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರುನ ಕೇಂದ್ರೀಯ ಮಹಿಳಾ ಘಟಕದ ಸಂಚಾಲಕಿ ಸಹನಾ ರಾಜೇಶ್ ರೈ ಭಾಗವಹಿಸಲಿದ್ದು, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಪೂಂಜ, ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ನ ಅಧ್ಯಕ್ಷೆ ಸರೋಜ ತಾರನಾಥ್ ಶೆಟ್ಟಿ, ಯಕ್ಷ ಗುರು ರಾಕೇಶ್ ರೈ ಅಡ್ಕ ಉಪಸ್ಥಿತರಿರುವರೆಂದು ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ತಿಳಿಸಿದ್ದಾರೆ.


















































































































