ಭಾರತ ಇಸ್ರೇಲ್ ಸ್ನೇಹ ಸಂಘದ ಗೌರವ ಕಾರ್ಯದರ್ಶಿ, ವಿರಾಟ್ ಹಿಂದೂಸ್ತಾನ್ ಸಂಗಮ್ (ವಿಎಚ್ಎಸ್) ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಿಜೆಪಿ ನಾಯಕ ಮತ್ತು ಡಾ. ಸುಬ್ರಮಣಿಯನ್ ಸ್ವಾಮಿ ಅವರ ಆಪ್ತ ಸಹಾಯಕರಾದ ಘಾಟ್ಕೋಪರ್ ಮುಂಬಯಿಯ ಜಗದೀಶ್ ಶೆಟ್ಟಿಯವರನ್ನು ಅಕ್ಟೋಬರ್ 3 ರ ಶನಿವಾರದಿಂದ ಅಕ್ಟೋಬರ್ 9ರ ಶುಕ್ರವಾರದವರೆಗೆ ಭಾರತದಿಂದ ಇಸ್ರೇಲ್ಗೆ ಇರುವ 17 ಸದಸ್ಯರ ಬುದ್ಧಿಜೀವಿಗಳ ನಿಯೋಗದ ಭಾಗವಾಗಿ ಇಸ್ರೇಲ್ಗೆ ಆಹ್ವಾನಿಸಲಾಗಿದೆ. ನಿಯೋಗವು ಟೆಲ್ ಅವಿವ್, ಜೆರುಸಲೆಮ್, ಹೈಫಾ, ಮೃತ ಸಮುದ್ರ (Dead Sea), ಗಾಜಾ ಗಡಿ ಮತ್ತು ಯಾದ್ ವಾಶೆಮ್ ಹತ್ಯಾಕಾಂಡ ಸ್ಮಾರಕ ಕೇಂದ್ರ (Yad Vashem – Holocaust Memorial Centre) ಸೇರಿದಂತೆ ಇಸ್ರೇಲ್ನ ಇತರ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದೆ ಮತ್ತು ವಿವಿಧ ನಾಯಕರು ಮತ್ತು ಪ್ರಮುಖ ವ್ಯಕ್ತಿಗಳೊಂದಿಗೆ ಸಂವಾದ ನಡೆಸಲಿದೆ.

















































































































