ವಿದ್ಯೆಯಿಂದ ಬುದ್ಧಿ, ವಿನಯ ಪಡೆದು ಬದುಕು ಅಮೃತಮಯವಾಗಿಸಬೇಕೇ ಹೊರತು, ಅಹಂಕಾರ ಬಂದರೆ ಸರ್ವನಾಶದ ಸೂಚಕ. ಇಂದು ಶಿಕ್ಷಣವು ಸೇವೆಯಾಗದೆ ವೃತ್ತಿಯಾಗುತ್ತಿದೆ. ಮಾನವ ಸೇವೆಯೇ ಮಾಧವ ಸೇವೆಯಾಗಬೇಕು. ದುಡಿದ ಸ್ವಲ್ಪ ಪಾಲನ್ನು ಸಮಾಜಕ್ಕೆ ನೀಡುತ್ತಿರುವ ಶಿವಾಯ ಫೌಂಡೇಶನ್ ತಂಡದ ಕಾರ್ಯ ಶ್ಲಾಘನೀಯ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು. ಅವರು ಶಿವಾಯ ಫೌಂಡೇಶನ್ ವತಿಯಿಂದ ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮ ‘ವಿದ್ಯಾ ಪ್ರೇರಣಾ -2026’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಬಂಟರ ಸಂಘ ಪಡುಬಿದ್ರಿಯ ಬಂಟ್ಸ್ ವೆಲ್ಪೇರ್ ಟ್ರಸ್ಟ್ ಅಧ್ಯಕ್ಷ ಡಾ. ವೈ.ಎನ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಶಿವಾಯ ಫೌಂಡೇಶನ್ ನಿಂದ ಆಗುತ್ತಿರುವ ದುಃಖಿತರ ಸೇವೆ ಮಾಡುವ ಕಾಯಕ, ಪ್ರತಿಭೆಗಳಿಗೆ ಗೌರವಾರ್ಪಣೆ ನಿಜವಾಗಿಯೂ ಮೆಚ್ಚುವ ಕಾರ್ಯ. ಬದುಕಿನ ಸಾರ್ಥಕತೆಯಲ್ಲಿ ದುಡ್ಡು, ಯಶಸ್ಸು, ಪುಣ್ಯದ ಜೊತೆಗೆ ದಾನವೂ ಅನಿವಾರ್ಯ ಎಂದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಹಾಯ, ವೈದ್ಯಕೀಯ ವೆಚ್ಚ ಮತ್ತು ಸುಮಾರು 150 ವಿದ್ಯಾರ್ಥಿಗಳಿಗೆ 7.5 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ವಿತರಣೆಯು ಜರಗಿತು. ನಿವೃತ್ತ ಶಿಕ್ಷಣಾಧಿಕಾರಿ ಬಿ ವಿಠ್ಠಲ ಶೆಟ್ಟಿ ಮತ್ತು ಪಡುಬಿದ್ರಿಯ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ದಂಪತಿಯನ್ನು ಹಾಗೂ ಶಿವಾಯ ಫೌಂಡೇಶನ್ ನ ಗೌರವಾಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಸಭಾಧ್ಯಕ್ಷತೆಯನ್ನು ಶಿವಾಯ ಫೌಂಡೇಶನ್ ಗೌರವಾಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ ವಹಿಸಿ ಮಾತನಾಡಿ, ಏಕಮನಸ್ಥಿತರಾಗಿ ಒಂದೇ ಕುಟುಂಬದವರಂತೆ ಸಮಾಜದ ಏಳಿಗೆಗಾಗಿ ದುಡಿಯುವ ಸಂಸ್ಥೆ ಶಿವಾಯ ಫೌಂಡೇಶನ್. ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರಯುತ ವಾತಾವರಣ ಕಲ್ಪಿಸುವುದು ಅನಿವಾರ್ಯವಾಗಿದೆ ಎಂದರು.






ವೇದಿಕೆಯಲ್ಲಿ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಯಥಾರ್ಥ್ ಸಂಸ್ಥಾಪಕ ಈಶ್ವರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಮಾಜಿ ಗ್ರಾ.ಪಂ ಸದಸ್ಯ ನವೀನ್ ಎನ್ ಶೆಟ್ಟಿ, ಮುಂಬೈ ಸೌತ್ ಇಂಡಿಯನ್ ಸೆಲ್ ಬಿಜೆಪಿ ಮಾಜಿ ಕಾರ್ಯದರ್ಶಿ ಸದಾನಂದ ಪೂಜಾರಿ, ಪಲಿಮಾರು ಗ್ರಾ.ಪಂ ಮಾಜಿ ಅಧ್ಯಕ್ಷೆ ಗಾಯತ್ರಿ ಪ್ರಭು, ಕೆರಮ ಮಾಗಂದಡಿ ವಿದ್ಯಾಧರ ಶೆಟ್ಟಿ, ಉದ್ಯಮಿ ಬಾಲಚಂದ್ರಶೆಟ್ಟಿ ಪುಚ್ಚೊಟ್ಟು ಬೀಡು ಎರ್ಮಾಳು, ಪ್ರೇಮಾನಂದ ಶೆಟ್ಟಿ, ಅನಿಲ್ ಶೆಟ್ಟಿ, ಹರೀಶ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ರಾಯೇಶ್ ಪೈ, ವಿಠ್ಠಲ ಶೆಟ್ಟಿ ಉಪಸ್ಥಿತರಿದ್ದರು. ಪ್ರಕಾಶ್ ಪಾವಂಜೆ ಪ್ರಾರ್ಥಿಸಿದರು. ಶಿವಾಯ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರು ಸ್ವಾಗತಿಸಿದರು. ಡಾ. ಸ್ವರ್ಣ ಶೆಟ್ಟಿ ಮತ್ತು ಉಪನ್ಯಾಸಕ ದೇವಿ ಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಪ್ರಶಾಂತ್ ಶೆಟ್ಟಿ ಪಂಜ ವಂದಿಸಿದರು.















































































































